ಬಾಜಿಕಟ್ಟಿ ನೋಡು ಬಾರಾ ಮೀಸೆ ಮಾಮ. ಆರತಿ ಸವಾಲು ಹಾಕುತ್ತ ಶಿವರಾಂ ಅವರನ್ನು ಪಂದ್ಯಕ್ಕೆ ಕರೆಯುವುದಿರಲಿ,ಈ ಶತಮಾನದ ಮಾದರಿ ಹೆಣ್ಣು,ಎಂದು ಸಮಾಜಕ್ಕೆ ಸವಾಲು ಒಡ್ಡುವ ಹೆಣ್ಣು ಆಗಿರಲಿ,ಆರತಿ ಇಷ್ಟ ಆಗ್ತಾಯಿದ್ದದ್ದು ಆಕೆಯ ಆ ಜೋರಿನ ಪಾತ್ರದ ಕಾರಣದಿಂದ.ಏಯ್ ಪ್ರಭಾಕರ ಶ್ರೀಮಂತ್ರಪ್ಪ ನೀವು! ನಿನ್ನ ಸಾಲ ನಾನು ತೀರಿಸಿ ನಿನ್ನ ಋಣದಿಂದ ಮುಕ್ತಳು ಆಗ್ತೀನಿ ಅನ್ನುವ ಹಠಮಾರಿ ಹುಂಬ ಹೆಣ್ಣು ಯಾರಿಗೆ ತಾನೆ ಇಷ್ಟ ಆಗಲ್ಲ.ಆನಂತರ ತುಂಬಾ ಇಷ್ಟ ಆಗೋ ಬಜಾರಿ ಹುಡುಗಿ!ಮಂಜುಳಾ ರಾಜ ಅಂತ ಒಂದು ಸಲ ಕರೆದರೆ,ಮತ್ತೊಂದು ಸರ್ತಿ ಯಾರನ್ನು ಕೇರ್ ಮಾಡದೆ ತಾನೆ ಎಲ್ಲವನ್ನು ನಿಭಾಯಿಸೋ ಮುದ್ದು ಹೆಣ್ಣು,ಅಕ್ಕನ ಜೊತೆ ಸೇರಿ ತನ್ನ ತಂದೆಗೆ ಆದ ಅನ್ಯಾಯ ಸರಿಪಡಿಸುವ ಹಠದಲ್ಲಿ ಪೆದ್ದು ಡಾಕ್ಟರನ್ನು ಬೆಳ್ಳಿ ಮೋಡವೇ ಎಲ್ಲಿ ಓಡುವೆ ನನ್ನ ಬಳಿಗೆ ನಡೆದು ಬಾ ಅಂತ ಅಮಾಯಕಳಾಗಿ ಬೇಡುವ ಆ ಸುಂದರಿ ಮಂಜುಳಾ ಯಾರಿಗೆ ತಾನೆ ಇಷ್ಟ ಆಗಲ್ಲ.ಸಿನಿಮಾ ನೋಡುವ ಹೆಣ್ಣು ಮಕ್ಕಳಲ್ಲಿ ಈ ಪಾತ್ರಗಳು ಪರಕಾಯ ಪ್ರವೇಶ ಆಗಿರ್ತಾಯಿತ್ತು, ಗಂಡು ಹುಡುಗರು ಪಾಪಾ!! ಯಾವುದೇ ಪಾತ್ರ ಆಗಿರಲಿ ಅದರಲ್ಲಿ ಇನ್ವಾಲ್ವ್ ಆಗಿ ಮಾಡೋದು ಪ್ರತಿಯೊಬ್ಬ ಕಲಾವಿದರಲ್ಲಿ ಇರಲೀ ಬೇಕಾದ ಮುಖ್ಯ ಅಂಶ. ಆಗಲೇ ಆ ಪಾತ್ರಗಳು ನಿತ್ಯ ನೂತನ ಆಗಿರುತ್ತದೆ.ಎಷ್ಟೇ ವರ್ಷಗಳು ಕಳೆದರೂ ಅವ್ರು ನಟಿಸಿದ ಹಾಡುಗಳನ್ನು ಜನರಿಗೆ ಪದೇಪದೆ ಕೇಳಬೇಕು, ನೋಡ ಬೇಕು ಅಂತ ಅನ್ನಿಸುತ್ತೆ, ಸವಾಲು ನಿಂದು ಜವಾಬು ನಂದು ಅಂತಾ ಕೇಳಿದಾಗ ಪುಳಕ ಆಗ್ತಾನೆ ಇರ್ತಾರೆ ಎಷ್ಟೇ ಪೀಳಿಗೆ ಬಂದ್ರು,ಇಂಥ ಬಜಾರಿಗಳು ಈಗೆಲ್ಲಿದ್ದಾರೆ? ಅಂತವರು ಬಂದು ಕನ್ನಡ ಚಿತ್ರ ರಂಗವನ್ನು ಮತ್ತಷ್ಟು ಬೆಳೆಸಲಿ .........
No comments:
Post a Comment