Monday, July 28, 2014

ಫೇಸು ಬುಕ್ಕು.... ಏಸುಬುಕ್ಕೂ


ಸಾಕಷ್ಟು ಜನರು ನನ್ನ ಜೊತೆ ಮಾತಾಡುವುದಾಗಲಿ, ಚರ್ಚಿಸುವುದಾಗಲಿ ಮಾಡಲ್ಲ.. ಆ ವಿಷಯದಲ್ಲಿ ಸೇಫ್   ನಾನು.. ಗಂಭೀರ ಬರಹಗಾರರು ಅಂದ್ರೆ ... ಜಾಸ್ತಿ ದೂರ ನಾನು.  ನೇರವಾಗಿ ಹೇಳೋದಾದರೆ ಪುಸ್ತಕ ಓದಿ ಖುಷಿ ಪಡೋದು ಬೇರೆ , ಅವರ   ಬಾಲ ಆಗೋದು ಬೇರೆ! ಅದೇರೀತಿ ಕೆಲವು ಬರಹಗಾರರ ... ವ್ಯಕ್ತಿತ್ವಗಳ   ಹೆಸರು ಹಿಡಿದು ಓಡಾಡುವವರ ಬಗ್ಗೆಯೂ ನನಗೆ ಆಸಕ್ತಿ ಇಲ್ಲ.ಒಮ್ಮೆ ಹೀಗೆ   ಒಮ್ಮೆ ಒಬ್ಬಾತ ಸಿಕ್ಕಾಪಟ್ಟೆ ಗಂಭೀರ ಬರಹಗಳ   ಮೂಲಕ ತನ್ನನ್ನು ಗುರುತಿಸಿಕೊಳ್ಳುವ ಪ್ರಯತ್ನ ಮಾಡಿದ್ದರು. ಆತನ ಯಾವುದೋ ಒಂದು ಬರಹಕ್ಕೆ ಸಮಯ ಇತ್ತು ಅಂತ ಲೈಕ್ ಹಾಕಿದೆ.. ಧನ್ಯವಾದ ಅರ್ಪಿಸಿದರು ಚಾಟ್ ಮೂಲಕ.. ಅದಾದ ಬಳಿಕ ನನ್ನ ಬರಹ ಕೇಳಿದರು.. ಯಾವುದೋ ಅದೂ ಸಕತ್ ಸರಳವಾದ.. ಇನ್ನು ಹೇಳ ಬೇಕೆಂದರೆ ಹಗುರವಾದ ಲೇಖನ ಅವರ ಇನ್ಬಾಕ್ಸ್ ನಲ್ಲಿ ಹಾಕಿದೆ. ಅಂದಿನಿಂದ   ಅವರು ನನ್ನ ಜೊತೆ ಚಾಟ್ ಮಾಡೋದಿರಲಿ ಸಧ್ಯ ಲಿಸ್ಟ್ ನಿಂದ ಔಟ್.

ಬದುಕು ಸಾಕಷ್ಟು ಪಾಠ ಹೇಳಿದೆ ನನಗೆ , ಒಂದಂತೂ  ಸತ್ಯ ಯಾವುದೇ ಸಂಗತಿ ಆಗಿರಲಿ ಷೋ ಆಫ್  ಮಾಡೋದು ನನ್ನ ಜಾಯಮಾನಕ್ಕೆ ಬಂದಿಲ್ಲ. ಪ್ರಾಯಶಃ ಅದೇ ಕಾರಣಕ್ಕೆ ನಾನು ಹೆಚ್ಚು ಜನಕ್ಕೆ ಇಷ್ಟ ಆಗಿಲ್ಲ :-) ಆರಂಭಿಕ ಹಂತದಲ್ಲಿ ಛೆ ನಾನ್ಯಾಕೆ ಹೀಗೆ ? ಯಾರಿಗೂ ನನ್ನ ಕಂಡ್ರೆ ಅದ್ಯಾಕೆ ಇಷ್ಟ ಇಲ್ಲ ಅನ್ನುವ ಒಂದು ಬೇಸರ ಇತ್ತು, ಆದರೆ ಈಗ ಆ ಭ್ರಮೆ, ಭಾವುಕತೆ ಇಲ್ಲವೇ ಇಲ್ಲ.. ಹಾಯಾಗಿ ಇದ್ದೀನಿ...!

ಮಲೆಗಳಲ್ಲಿ ಮದುಮಗಳು ಎರಡು ಬಾರಿ  ಓದಿದೆ ಅಂತ ಒಬ್ಬರು ದೊಡ್ಡ ಬರಹಗಾರರು ಬರೆದುಕೊಂಡಿದ್ದರು. ಅದಾಗಲೇ ಇಪ್ಪತ್ತು ಸರ್ತಿ ಓದಿ ಬಾಯಿ ಪಾಠ ಆಗಿತ್ತು.. ಲೈಕ್ ಕೊಟ್ಟಿದ್ದಕ್ಕೆ ನಿಮಗೆ ಅರ್ಥ ಆಗಲ್ಲ ಬಿಡಿ ಇಂತಹ ಕಾದಂಬರಿಗಳು , ಏನಿದ್ರು ಎಂ ಕೆ ಇಂದಿರಾ ದಂತಹ ವು ಸರಿ ಅಂದ್ರು.. ತುಂಬಾ ಖುಷಿ ಆಯ್ತು ನನಗೆ ಆಗ.. ಆತ ಅಕಸ್ಮಾತ್ ನನ್ನನ್ನು ಚರ್ಚೆಗೆ ಸೂಕ್ತ ವ್ಯಕ್ತಿ  ಅಂತ ತಿಳಿದಿದ್ದರೆ ಎಷ್ಟೆಲ್ಲಾ ಕಷ್ಟ ಆಗ್ತಾ ಇತ್ತು.. ಈ ವಿಷಯದಲ್ಲಿ ನಾನು ಚರ್ಚೆ ಮಾಡ ಬೇಕಿತ್ತು, ತಲೆ ಕೆಟ್ರು ಒಂದು ನಿರ್ಧಾರ, ಒಂದು ಅಸಂಶನ್ .... ಅಯ್ಯೋ ದೇವ್ರೇ... ! 

Friday, July 18, 2014

ಹಲಬು


ಮಗಾ ಅಂತ ಮಾತು ಆರಂಭಿಸಿದಳು ಆ ಹುಡುಗಿ.. ನನಗಿಂತ ಚಿಕ್ಕವಳಾದ ಕಾರಣ ಹುಡುಗಿ ಅಂತಾನೆ ಸಂಬೋಧನೆ ಮಾಡುವುದು ಸೂಕ್ತ ಅನ್ನಿಸಿದ ಕಾರಣ ಹಾಗೆ ಹೇಳ್ತಾ ಇದ್ದೀನಿ. ಆಕೆಯ ಆ ಪದ ಒಂದರಿಂದ ನನಗೆ ಅವಳಲ್ಲಿ ಅಡಗಿದ್ದ ಬೇಸರ ಎದ್ದು ಕಾಣ್ತಾ ಇತ್ತು. ಮೌನವಾಗಿ ಅವಳ ಮುಖ ನೋಡಿದೆ. ಆಗ ಅವಳು ಮಗಾ ಅಂತ ಮತ್ತೆ ಶುರುಮಾಡಿದಳು. ಕಣ್ಣಿ ನಂಚಿ ನಲ್ಲಿ   ಹನಿ ನೀರಿತ್ತು. ಅರ್ಥ ಆಗೋದು ಕಷ್ಟ ಅನ್ನಿಸಿತ್ತು ಅವಳ ಮಾತುಗಳು.. ಸುಮ್ಮನೆ ಗೊಂದಲದಿಂದ ಒದ್ದಾಡುವುದಕ್ಕಿಂತ ಬೆಟರ್ ಮೌನವಾಗಿ ಕೇಳುವುದು   ಅಂತ ಮೌನ ಬಂಗಾರಿ ಆದೆ.. ಮಧ್ಯಮ ವರ್ಗದ ಆ ಹುಡುಗಿ ನೋಡೋಕೆ ಸುಮಾರಾಗಿದ್ದರು ಆಕೆಯಲ್ಲಿ ಒಂದು ತೆರನಾದ ಆಕರ್ಷಣೆ ಇತ್ತು. ಅವಳ ಆಕರ್ಷಕ ಅಂಗಗಳು ಸಹ ಆ ಹುಡುಗಿಯತ್ತ ಜನರು ಆಸಕ್ತಿಯಿಂದ  ನೋಡುವಂತೆ ಇತ್ತು.
ಮಗಾ  ಅಂತ ಹೆಚ್ಚು ಬಳಕೆ ಮಾಡ್ತಾ ಇದ್ದ ಹುಡುಗಿ ಸಾಮಾನ್ಯವಾಗಿ ಅಕ್ಕ ಅಂತ ಕರೆದು ಭಕ್ತಿ ತೋರಿಸ್ತಾ ಇದ್ಲು ನನಗೆ, ಆದರೆ ಅಂದು ಮಾತ್ರ ಮಗಾ ನಮ್ಮ ಅಪ್ಪ ನನ್ನನ್ನು ಅವನ ಹೆಂಡ್ತಿ ಸೇವೆ ಮಾಡೋಕೆ ಹುಟ್ಟಿಸಿದ , ತನ್ನ ಹೆಂಡತಿ ಸುಖವಾಗಿರ ಬೇಕು ಅನ್ನೋದೇ ಅವನ ಆಸೆ ಎಂದು ಅತ್ತಳು... ಯಾರ ಸೇವೆಗಾಗಿ ಈಕೆ ಹುಟ್ಟಿದ್ದು ಅನ್ನುವುದು ಅರ್ಥ ಆದಾಗ ಹೇಗೆ ಪ್ರತಿಕ್ರಿಯಿಸ   ಬೇಕೋ ಗೊತ್ತೇ ಆಗಲಿಲ್ಲ. ಆಕೆ ಆ ಅಪ್ಪನ ಹೆಂಡತಿಯೆಂದು ಹೇಳಿದ್ದು ತನ್ನ ಹೆತ್ತ ತಾಯಿ ಬಗ್ಗೆ! ಆಕೆಯ ಕೋಪಕ್ಕೆ ಕಾರಣ ಅವಳು ಹದಿನೆಂಟರ ಹರೆಯಕ್ಕೆ ಬಂದಿದ್ದರು ಅಪ್ಪ ಅನ್ನೋ ಪ್ರಾಣಿ ಗಂಡು ನೋಡಿಲ್ಲ , ಮದುವೆ ಮಾಡಿಲ್ಲ...
ನನ್ನಂತ ಅದರಲ್ಲೂ ನನಗೆ ಆಕೆಯ ಮಾತಿನ ಶೈಲಿ ಮತ್ತು ಅಸಹನೆ ಸಕತ್ ಗಾಬರಿ  ತಂದಿತ್ತು.ಆಕೆ ಜೊತೆ ಸ್ವಲ್ಪ ದಿನಗಳ ಕಾಲ ಒಡನಾಟ ಇತ್ತು, ಆಮೇಲೆ ಏನಾಯ್ತು ಆಟ ಸಧ್ಯಕ್ಕೆ ಗೊತ್ತಿಲ್ಲ! 
ದೃಶ್ಯ ಎರಡು :
ಆಕೆ ತನ್ನ ಅತ್ತಿಗೆಯ   ತಲೆಯಲ್ಲಿರುವ ಪ್ರಾಣಿಗಳನ್ನು ಹಿಂಸಿಸಿ  ಕೊಲ್ಲುತ್ತಿದ್ದಳು. ತನ್ನ ಕೋಪ ತೋರಿಸಲು ಆಕೆಗೆ ಅದಕ್ಕಿಂತ ಒಳ್ಳೆ ದಾರಿ ಇರಲಿಲ್ಲ.. ಆಕೆಯ ಕೋಪಕ್ಕೆ ಕಾರಣ ಮದುವೆ. ಅವಳ ಅಮ್ಮ ಕತ್ತೆ....!! ಇನ್ನು ಗಂಡು ನೋಡಿರಲಿಲ್ಲ..ಮದುವೆ ಮಾಡದೆ ಹಾಗೆ ಇರುವ ಅಮ್ಮನ ಬಗ್ಗೆ ಸಕತ್ ಕೋಪ !

 ಪ್ರಾಯಶಃ ಅಪ್ಪನಿಗಿಂತ ಗಂಡನ ಸಾಮೀಪ್ಯ ಹೆಚ್ಚು ಭದ್ರತೆ ನೀಡುತ್ತದೆ ಎಂದು ಅವರ ಹಾಗೂ ಅಂತಹವರ ಇರಾದೆ ಆಗಿದೆ ಎಂದು ಕಾಣುತ್ತದೆ.. ಮದುವೆ ಆಗಲಿ ಮಗು ಹುಟ್ಟಲಿ ಏನೇ ಆದರು ನಮ್ಮದು ಅನ್ನುವ ಒಂದು ಬದುಕಿನ ಬಗ್ಗೆ ಸದಾ  ಎಚ್ಚರಿಕೆ ವಹಿಸ ಬೇಕು.. ಆರಂಭದಲ್ಲಿ  ಏನೇನು ಅನ್ನಿಸದ ಅನೇಕ ಸಂಗತಿಗಳು ಬಳಿಕ ದೊಡ್ಡದಾಗಿ ಬಿಡುತ್ತದೆ..ಬದುಕು ಕಳೆದುಕೊಂಡ ಹೆಚ್ಚು ಹೆಣ್ಣುಮಕ್ಕಳು ಹೀಗೆ ಆಗಲು ತಾನು  ಬಿಡಬಾರದಿತ್ತು ಅಂತ ಹಲಬುತ್ತಾರೆ. ಆದರೆ ಅಷ್ಟರಲ್ಲಿ...!! ಇವೆಲ್ಲ ನಿಮಗೆ ವಿಚಿತ್ರ ಅನ್ನಿಸ ಬಹುದು, ಆದರೆ ಈಗಿನ ಕಾಲಮಾನಕ್ಕೆ ಹೆಣ್ಣು ಸಹ ತುಂಬಾ ತನ್ನದೇ ಆದ ಬದುಕಿಗೆ ಆದ್ಯತೆ ನೀಡಬೇಕು! ಇದು ನಾನು ಕಂಡುಕೊಂಡ ಸತ್ಯ...! ಅಕಸ್ಮಾತ್ ಆಕೆ ಅವೆಲ್ಲ ನನಗೆ ಬೇಡ ಅಂತ ಇದ್ರೆ... ಕೆಲವು ಘೋರ ಉದಾಹರಣೆಗಳಿವೆ ನನಗೆ ಹೇಳಲು ಮನಸ್ಸಿಲ್ಲ ಸಾರಿ !