ಕೆಲವರ ಭಾಷ ಸಾಮರ್ಥ್ಯ ಕುರಿತು ಹೇಳೋಕೆ ಕಷ್ಟ ಆಗುತ್ತೆ.ಯಾಕೆಂದ್ರೆ ಅದನ್ನು ಯಾವರೀತಿ ಅರ್ಥ ಮಾಡಿಕೊಳ್ಳೋದು ಅಂತ ಗೊತ್ತೇ ಆಗೋದಿಲ್ಲ ಬಿಡಿ! ಆಗಿನ್ನೂ ಶಿವರಾಜ್
ಕುಮಾರದು' ಓಂ 'ಸಿನಿಮ ಬಿಡುಗಡೆ ಆಗಿತ್ತು.ಹೀಗೊಬ್ಬ ಸಾಮಾನ್ಯ ಮಾತಾಡುತ್ತಾ ನಾಳೆ ರಜಾ
ಕಣಮ್ಮ.ಅದಕ್ಕೆ ಇವತ್ತು ಹೋಂಗೆ ಹೋಗ್ತೀನಿ . ನಾಳೆ ಮನೆ ಅಂತ ಅಂದ.ಅವನ ಕಥೆ ಬಿಡಿ ಚಿತ್ರ ತಾರೆ
ಯರು ಕೆಲವರು ಮಾತಾಡೊದು ನೋಡಿದ್ರೆ ಕಣ್ಣಲ್ಲಿ ನೀರ್ ಬರುತ್ತೆ.ಅದರಲ್ಲೂ ಹೆಚ್ಚು ಆಂಗ್ಲ ಬಳಸುವ ನಮ್ಮ ನೆರೆಯ ರಾಜ್ಯದವರ ವಿಷ್ಯ ವಿಶೇಷವಾಗಿ ಹೇಳಬೇಕಾಗಿಲ್ಲ.ಜಯಪ್ರದ ಭಾರತದ ಅತ್ಯಂತ ಸುಂದರ ನಟಿ ಅಂತ ಹೆಸರು
ಪಡೆದಿರುವವರು.ಆಕೆ ತಮ್ಮಉದ್ದಜಡೆ,ನಗುಮುಖ,ಅದ್ಭುತ ನಟನೆಯಿಂದ ಜನಮನ ಗೆದ್ದವರು.ಕನ್ನಡವು ಸೇರಿದಂತೆ ತೆಲುಗು,ತಮಿಳು ಹಿಂದಿ ಹೀಗೆ ಸಾಧ್ಯ ಆದಷ್ಟು ಭಾಷೆಗಳಲ್ಲಿ ತಮ್ಮ ನಟನಾ ಸಾಮರ್ಥ್ಯ ತೋರಿದ ನಟಿ.ಆಗಿನ್ನೂ ಭಾರತದಲ್ಲಿ ಟಿ.ವಿ.ಪ್ರಭಾವ ಹೆಚ್ಚಾಗಿರಲಿಲ್ಲ.ಈಗಿನಂತೆ ಟೀವಿಯನ್ನು ಜಾಣರಪೆಟ್ಟಿಗೆ ಅಂತ ಕರಿಯದೆ ಧೈರ್ಯವಾಗಿ ದಡ್ಡರ ಪೆಟ್ಟಿಗೆ ಅಂತ
ಹೇಳೋಕಾಲ.ಕರ್ನಾಟಕದಲ್ಲಿ ಅದೂ ಕೆಂಪೇಗೌಡ ನಗರಿ ಬೆಂಗಳೂರಲ್ಲಿ ಮಾತ್ರ ಕನ್ನಡ ಕಾರ್ಯಕ್ರಮ ಪ್ರಸಾರ ಆಗ್ತಾಯಿದ್ದ ಕಾಲ.ಉಳಿದೆಡೆ ಪ್ರಾದೇಶಿಕ್ ಭಾಷ ಕಾರ್ಯಕ್ರಮ್ ಅಂಬೋಹೆಸರಲ್ಲಿ ಎಲ್ಲ ಭಾಷೆಗಳ ಕಾರ್ಯಕ್ರಮ ಟೆಲಿಕಾಸ್ಟ್ ಆಗ್ತಾಯಿತ್ತು.ಒಂದ್ ಸಲ ತೆಲುಗು ಟರ್ಮ್ಆಗ ಈ ಮುದ್ದಾದ ನಟಿ ಜಯಪ್ರದ ಸಂದರ್ಶನ.ಸಂದರ್ಶಕ ಪ್ರಶ್ನೆಗಳು ಎಲ್ಲವನ್ನು ಕೇಳಿದ ಮೇಲೆ ನಿಮ್ಮ ಮಸನಸ್ಸು ಕದಡಿದ ಪ್ರಸಂಗ ತಿಳಿಸಿ ಅಂತ ಕೇಳಿದ.ಜಯಪ್ರದ ಮಾತಾಡ್ತಾ
'ದಾನ್ನಿ ಚುಸಿ ನಾ ಐಸ್ ಲೋ ವಾಟರ್ ವಚ್ಚಿಂದಿ 'ಅಂತ ಬೇಜಾರು ಮಾಡಿಕೊಂಡರು.ಅವ್ರ ಭಾಷೆ ಕೇಳಿ ನಮ್ಮ ಕಣ್ಣಲ್ಲೂ ನೀರು ಬಂತು.ನಿಮಗೆ?
No comments:
Post a Comment