Saturday, March 3, 2012

ನಮ್ಮ

ಸ್ವಾಗತ ಸುಸ್ವಾಗತ.. ಅಂತ ವೀಕ್ಷಕರನ್ನು ಸದಾ ಪ್ರೀತಿಯಿಂದ ಬರಮಾಡಿಕೊಳ್ಳುವ ಥಟ್ ಅಂತ ಹೇಳಿ ನಾ.ಸೋಮೇಶ್ವರ್ ಅವರನ್ನು ಜ್ಞಾನದಾಯಿನೀ ಅಂತ ಕರೆದರೆ ಸೂಕ್ತ ಅಂತ ಅನ್ನಿಸುತ್ತೆ.ನಾನು ಕನ್ನಡ ದೂರದರ್ಶನದ ಆರಂಭದಿಂದಲೂ ಡಾ.ನಾ.ಸೋಮೇಶ್ವರ್ ಅವ್ರ ಅನೇಕ ಕಾರ್ಯಕ್ರಮಗಳನ್ನು ವೀಕ್ಷಿಸುತ್ತಾ ಬಂದಿದ್ದೇನೆ ಅಂದಿನಿಂದ ಹಿಡಿದು ಈವರೆಗೂ ವೀಕ್ಷಕರ ಮನದಲ್ಲಿ ಉತ್ತಮ ಸ್ಥಾನ ಪಡೆದ ನಿರೂಪಕರಾಗಿದ್ದಾರೆ. ಥಟ್ ಅಂತ ಹೇಳಿ ಕಾರ್ಯಕ್ರಮಕ್ಕೆ ಮುನ್ನ ಅವರು ನಮಗೆ ಅತ್ಯಂತ ಇಷ್ಟವಾದ ಕ್ವಿಜ್ ಮೇಷ್ಟ್ರಾಗಿದ್ದರು.ನನ್ನಂತಹ ಸಾಮಾನ್ಯ ವೀಕ್ಷಕರಿಗೆ ಅವರು ವೃತ್ತಿಯಿಂದ ವೈದ್ಯರು ಎನ್ನುವ ಸಂಗತಿ ಬಹಳ ದಿನಗಳ ತನಕ ತಿಳಿದೇ ಇರಲಿಲ್ಲ.ಅವರು ಯಾವ ಶಾಲೆಯ ಹೆಡ್ ಮಾಸ್ತರ್ ಆಗಿದ್ದಾರೋ ಅನ್ನುವ ಕುತೂಹಲ ವೀಕ್ಷಕರನ್ನು ಕಾಡಿದ್ದಂತು ಸತ್ಯ. ಆ ಬಳಿಕ ಅವರು ಥಟ್ ಅಂತ ಹೇಳಿ ಕಾರ್ಯಕ್ರಮದ ನಿರೂಪಕರಾಗಿ ತಮ್ಮ ಹೊಸ ಅಧ್ಯಾಯ ಆರಂಭಿಸಿದರು ಈ ಮಾಸ್ಟರು.ಅತಿ ಹೆಚ್ಚಿನ ವೀಕ್ಷಕರು ಅಂದಿನಿಂದ ಈವರೆಗೂ ತಪ್ಪದೆ ವೀಕ್ಷಿಸುತ್ತಾ ಬಂದಿದ್ದಾರೆ.ಅದರಲ್ಲಿ ಹೆಣ್ಣುಮಕ್ಕಳ ಪಾಲು ಹೆಚ್ಚು.ರಾತ್ರಿ ವೇಳೆಯಲ್ಲಿ ತಾವು ತಮ್ಮ ಮೆಚ್ಚಿನ ಥಟ್ ಅಂತ ಹೇಳಿ ಕಾರ್ಯಕ್ರಮ ನೋಡಲು ಆಗದೆಂದು ಅವರು ಮುಂಜಾನೆ ಆಗುವ ಮರು ಪ್ರಸಾರ ತಪ್ಪದೆ ವೀಕ್ಷಿಸುವ ಪದ್ಧತಿ ಎಲ್ಲರ ಮನೆಯಲ್ಲೂ ಕಂಡುಬರುವ ಅಲಿಖಿತ ಒಪ್ಪಂದ !! ಎಲ್ಲ ಕಾರ್ಯಕ್ರಮದಂತೆ ಥಟ್ ಅಂತ ಹೇಳಿ ಸಹ ಸಾಕಷ್ಟು ಬದಲಾವಣೆಗಳನ್ನು ಕಂಡಿತು.ಹಬ್ಬ,ರಾಷ್ಟ್ರೀಯ ಹಬ್ಬ..ಅನೇಕ ವೀಶೇಷ ಸಂದರ್ಭ ಗಳಲ್ಲಿ ವಿಶೇಷ ಅತಿಥಿಗಳಿಗೆ ಥಟ್ ಅಂತ ಹೇಳಿ ಎಂದು ಪ್ರಶ್ನೆ ಕೇಳುವುದರ ಜೊತೆ ಜೊತೆಯಲ್ಲಿ ವಿಶೇಷ ಹಾಗು ವಿಭಿನ್ನ ರೀತಿಯಲ್ಲಿ ಸಂದರ್ಶನ ಮಾಡುತ್ತಿದ್ದರು.ಜೈಲಿನಲ್ಲಿ ಕೈದಿಗಳಿಗೆ ಹಾಗು ಅಂಧ ಸ್ಪರ್ಧಿಗಳಿಗೆ ಇವರು ಮಾಡಿದ ಸ್ಪರ್ಧೆ ವೀಕ್ಷಕನ ಮನದಲ್ಲಿ ಶಾಶ್ವತವಾಗಿ ಉಳಿದಿದೆ.ವೀಕ್ಷಕರಿಗೆ ಅತಿ ಇಷ್ಟವಾದ ಮತ್ತೊಂದು ಸಂಗತಿ ಅಂದರೆ ಅವರ ಪುಸ್ತಕ ಪರಿಚಯದ ವಿಧಾನ.ಚಿಕ್ಕ-ಚೊಕ್ಕ ಆದರೆ ಅತ್ಯಂತ ಸುಂದರ ವಿಧಾನದ ಮೂಲಕ ಆ ಪುಸ್ತಕದ ಬಗ್ಗೆ ಪರಿಚಯ ಮಾಡಿಕೊಡುವ ಶೈಲಿ.ಅವರು ಹೇಳುವ ರೀತಿ ಹೇಗಿರುತ್ತದೆ ಅಂದರೆ .......!ವೀಕ್ಷಕ ಎಂದು ಆ ಪುಸ್ತಕ ಕೊಂಡೆನು,ಯಾವಾಗ ಅದನ್ನು ಓದೇನು! ಅನ್ನುವ ತುಡಿತಕ್ಕೆ ಒಳಗಾಗುವ ಮನಸ್ತತ್ವ ಬೆಳೆಸಿಕೊದುವುದರಲ್ಲಿ ಡಾ.ನಾ.ಸೋಮೇಶ್ವರ್ ಮೊದಲಿಗರು.ಒಮ್ಮೆ ಅವರು ಕಾರಣಾಂತರಗಳಿಂದ ಈ ಕಾರ್ಯಕ್ರಮದಲ್ಲಿ ಭಾಗವಹಿಸಲಿಲ್ಲ ,ನಟ ಸುಚಿಂದ್ರಪ್ರಸಾದ್ ಅವರ ಹೆಗಲಿಗೆ ಇದರ ಹೊಣೆ ಏರಿತು.ಆದರೆ ವೀಕ್ಷಕನಿಗೆ ಆ ಬದಲಾವಣೆ ಅಷ್ಟೊಂದು ಇಷ್ಟ ಆಗಲಿಲ್ಲ.ಇದು ಸತ್ಯ.ಆ ಮೇಲೆ ನಮ್ಮ ಪ್ರೀತಿಯ ಮಾಸ್ತ್ರೆ ಗಟ್ಟಿ ಆದರು.ವೈದ್ಯರಾಗಿ,ನಿರೂಪಕರಾಗಿ,ಲೇಖಕರಾಗಿ..ಹತ್ತು ಹಲವಾರು ಕ್ಷೇತ್ರಗಳಲ್ಲಿ ತಮ್ಮ ಛಾಪು ತೋರಿರುವ ನಾ.ಸೋಮೇಶ್ವರ್ ಅವರನ್ನು ವೀಕ್ಷಕರು ಕರೆಯುವುದು ನಮ್ಮ ಥಟ್ ಅಂತ ಹೇಳಿ ಸರ್ ಅಂತ.. ಈ ಪರಿ ವರ್ಷಾನುಗಟ್ಟಲೆ ವೀಕ್ಷರು ಸ್ವೀಕರಿಸಿರುವ ನಿರೂಪಕರು ನಾ.ಸೋಮೇಶ್ವರ್ ಅವರನ್ನು ಮಾತ್ರ.ಪ್ರಾಯಶ: ಇಂತಹ ಗೌರವ ಕಿರುತೆರೆಯಲ್ಲಿ ಸಂದಿರುವುದು ನಾ.ಸೋಮೇಶ್ವರ್ ಅವ್ರಿಗೆ ಮಾತ್ರ ಅಂತ ಕಾಣುತ್ತೆ!

No comments:

Post a Comment