ಬೇವರ್ಸಿ ಹಳೆ
ಬೇವರ್ಸಿ.... ಅಂತ ಬಜಾರಿ ಹೆಣ್ಣು ಮಗಳು
ರೇಗೊ ದೃಶ್ಯ ನೋಡಿದಾಗ ಕನ್ನಡ ಚಿತ್ರ ರಂಗದ ಅಭೂತ
ಪೂರ್ವ ನಟಿ ಮಂಜುಳಾ ಇನ್ನು ನಮ್ಮೊಂದಿಗೆ ಜೀವಂತ ಆಗಿರೋದು ಸ್ಪಷ್ಟ ಆಗುತ್ತೇಮೊನ್ನೆ ದೀಪಾವಳಿ ಹಬ್ಬದಲ್ಲಿ ಈಟಿವಿ ಯಲ್ಲಿ ಪ್ರಸಾರಗೊಂಡ ಸಂಪತ್ತಿಗೆ ಸವಾಲ್ ನೋಡಿದಾಗ ನಮ್ಮ ಮಂಜುಳಾ ಇಲ್ವಾ ಅಂತ ಮನಸ್ಸು ಮುದುಡಿತು.ಅವರ ನಟನೆಯೇ ಅಂತಹುದು. ಸಿನಿಮಾ ಹೆಸರಿಗಿಂತ ಕಲಾವಿದರ ಕೆಲವು ಡೈಲಾಗ್ ಗಳೇ ಹೆಚ್ಚು ಮನದಲ್ಲಿ ಉಳಿಯೋದು.ಬೇವರ್ಸಿ ಅಂತ ಕಿರಿಚೋ ಮಂಜುಳಾ,ಬಿಕನಾಸಿ ಅಂತ ಕಿಚಾಯಿಸೋ
ಡಾ.ರಾಜ್ ಎಲ್ಲವು ಸದಾ ಕಾಲ ಆಪ್ತ,ಪರಮಾಪ್ತ !ಈ ಸಂದರ್ಭದಲ್ಲಿ ಒಂದು ವಿಷ್ಯ ಜ್ಞಾಪಕಕ್ಕೆಬರುತ್ತೆ,ಹಳೆಯ ಸಿನಿಮಾಗಳಲ್ಲಿ ಹಾಡುಗಳಿಂದ ಆ ಸಿನಿಮಾಕ್ಕೆ
ಬೆಲೆ ಸಿಗ್ತಾಯಿತ್ತು,ಈಗಲೂ ಅದೇ ಪರಂಪರೆ ಮುಂದುವರೆದಿದೆ.ಆದರೆ ಹಳೆ ಹಾಡುಗಳನ್ನು ರೀಮಿಕ್ಸ್ ಮಾಡೋ ಸಂಸ್ಕೃತಿ ಇದೆಯಲ್ಲ
ಅದರಷ್ಟು ಇರಿಟೇಟ್ ವಿಷ್ಯ ಮತ್ತೊಂದಿಲ್ಲ.
ಈಗ ಡಾ.ರಾಜ್ ಹಾಗು ಮಂಜುಳಾ ಅವರ ಈ ಮೌನವಾ ತಾಳೆನು ಜ್ಞಾಪಕ ಮಾಡಿಕೊಳ್ಳಿ
ಎಷ್ಟು ಇಷ್ಟ ಆಗುತ್ತೆ,ಅದೇ ರೀತಿ ರಾಜ ಮುದ್ದು ರಾಜ ನೂಕುವಂತ ಕೋಪನನ್ನಲ್ಲೇಕೆ ಅಂತಾ ಮುದ್ದಾದ ಹುಡುಗಿ ಮಂಜುಳಾ ಕರೆದಾಗ ಡಾ.ರಾಜ್ ಕರಗಿ ನೀರಾಗಿ ಹೋದರಲ್ಲ
ಹಾಡಲ್ಲಿ!!ಆ ಹಾಡು ಒರಿಜಿನಲ್
ಟ್ರಾಕ್ ಈಗಲೂ ಕಿವಿಗೆ ಬಿದ್ದಾಗ ಅದೆಷ್ಟು ರೋಮಾಂಚನ ಆಗುತ್ತೆ ಅಲ್ಲದೆ ಪದೇ ಪದೆಅದನ್ನು ಕೇಳುವ ಆಸೆ ಆಗುತ್ತೆ.ಅದರ ರೀಮಿಕ್ಸ್ ರಾಮ .....ರಾಮ....! ರಾಜ -------- ಮುದ್ದು ರಾಜ,ನೂಕು
ವಂತ ------ ನೂಕು ವಂತ-------- ನೂಕುವಂತ ------ಹೀಗೇ ಸರ್ವಂ ಡ್ಯಾಶ್ ಮಯಮ್ ! ಆಗ ಕೇಳುಗನಿಗೆ ಯಾರನ್ನ ನೂಕಲಿ ಅಂತ ಅನ್ನಿಸೋದು ನಿಜ .ರಮಿಸಬೇಕು ಅಂತ
ಬರೋ ಸಂಗಾತಿ ಈ ಹಾಡು ಕೇಳಿದರೆ
ಅಯ್ಯಯ್ಯಪ್ಪೋ!
No comments:
Post a Comment