
ಬಲಗೈ ಅಂಗೈ ಮೇಲೆ ಎಡಗೈನ ಮಧ್ಯದ 3 ಬೆರಳುಗಳಲ್ಲಿ
ಮೃದುವಾಗಿ ತಟ್ಟುತ್ತಾ "ದೇವಿಯೋ ಔರ್
ಸಜ್ಜನೋ"ಎಂದು ಕೌನ್ ಬನೇಗ ಕರೋಡ್ ಪತಿಯನ್ನು
ಆರಂಭ ಮಾಡುತ್ತಿದ್ದ ಒಂದು ಕಾಲದ ಆಂಗ್ರಿ
ಎಂಗ್ ಮ್ಯಾನ್ ಅಮಿತಾಬ್ ಬಚ್ಚನ್ ಮಾತಿನ ಶೈಲಿ ಎಲ್ಲರಿಗು ಆಪ್ತ.ಆತ ವೃತ್ತಿಯಲ್ಲಿ ಅಲ್ಲದೆ ವಯುಕ್ತಿಕವಾಗಿ ಸಹ ಯಶಸ್ವಿ ಬದುಕನ್ನು ನಡೆಸುತ್ತಿರುವ ಕಲಾವಿದ.ಕೇವಲ ನಟ ಮಾತ್ರವಲ್ಲದೆ ಉತ್ತಮ
ಗೃಹಸ್ಥ,ಅತ್ಯುತ್ತಮ ದಿಪ್ಲೋಮ್ಯಾಟ್ .ರಾಜಕೀಯ ತನಗೆ ಒಗ್ಗದು ಅಂತ ಗೊತ್ತಾದ ತಕ್ಷಣ ಅದರಿಂದ ದೂರ ಸರಿದು,
ಪುನ: ಬಣ್ಣದ ಬದುಕನ್ನು ಆಯ್ಕೆ ಮಾಡಿಕೊಂಡರು,ಸಿನಿಮಾಗಳಲ್ಲಿ ಸೋಲು ಕಂಡಾಗ ಟೀವಿ ಆಯ್ಕೆ ಮಾಡಿಕೊಂಡರು.ಮಗ ವಿಶ್ವದ ಅಪ್ರತಿಮ ಸುಂದರಿ ಐಶ್ ಳನ್ನು ಮದುವೆ ಆದ ಮೇಲೆ ಬಚ್ಚನ್ ಮಗ ಸೊಸೆ ಜೊತೆ ಹೆಚ್ಚು ಹೆಚ್ಚು ಓಡಾಡೋಕೆ ಆರಂಭಿಸಿದಾಗ ನಕ್ಕವ್ರೆಷ್ಟೋ!ಆದ್ರೆ ಇಲ್ಲಿ ಒಂದು ಅಂಶ ಗಮನಿಸ ಬೇಕು .ಆತ ಯಾವುದೇ ಕಾರಣಕ್ಕೂ ತನ್ನ ಕುಟುಂಬ ದಲ್ಲಿ ವಿರಸ ಉಂಟಾಗ ಬಾರದು ಎಂಬ ಅಭಿಮತ ಹೊಂದಿದ್ದರು.ಆಕಾರಣದಿಂದ ಹೊಸದಾಗಿ ತನ್ನ ಮನೆ ಸೇರಿದ ಹೆಣ್ಣುಮಗಳಿಗೆ ಹೆಚ್ಚಿನ ಆದ್ಯತೆ ತೋರಿದರು.ತನ್ನ ಪತ್ನಿ ಹಾಗು ಮಗನ ಬದುಕು ಸುಂದರ ಆಗಿರ ಬೇಕಾದರೆ ಮಾವನ ಈ ಕರ್ತವ್ಯ ಹೆಚ್ಚು ಪ್ರಾಮುಖ್ಯತೆ ಪಡೆದು ಕೊಳ್ಳುತ್ತದೆ ಎಂದು ಬಚ್ಚನ್ ಅರಿತಿದ್ದಾರೆ.ನಂಗೆ ಟೈಮ್ ಟೈಮ್ಗೆ ಚೆನ್ನಾಗಿ ಸೇವೆ ಆದರೆ ಸಾಕು ಎನ್ನುವ ಮಾವಂದಿರು ಈತ ಜೀವನ ಸ್ವೀಕರಿಸುವ ರೀತಿ ನೋಡಿ ಕಲಿಯ ಬೇಕು. ಹೌದಲ್ವಾ!!