ವಾರ್ತೆ ಓದುವುದು ಒಂದು ಕಲೆ.ಬಹಳ ಹಿಂದೆ ಬರಿ ಹಿಂದಿ ಚಾನಲ್ ಒಂದೇ ಒಂದು ಇತ್ತು.ಆಗ ಪ್ರಸಾರ ಆಗೋ ಸಾಕ್ಷ್ಯ ಚಿತ್ರದಿಂದ ಹಿಡಿದು
ಎಲ್ಲಾ ತಪ್ಪದೆ ಜನ ನೋಡ್ತಾಯಿದ್ರು.ಆಗ ರಮಣ್, ಸಲ್ಮಾ ,
ಅವಿನಾಶಿ ಕೌರ್,ಸರಳ ಹೀಗೆ ಒಂದಷ್ಟು ಜನ ನ್ಯೂಸ್ ರೀಡರ್ ಗಳು ಜನಕ್ಕೆ ಹೆಚ್ಚು ಇಷ್ಟ ಆಗಿದ್ರು.ಹಾಳೂರಿಗೆ
ಉಳಿದೋನೆ ಗೌಡ ಅಲ್ವ! ಆ ಬಳಿಕ ಸ್ಥಳೀಯ ಭಾಷೆ
ಗಳಲ್ಲಿ ನ್ಯೂಸ್ ತುಂಬ ಜನಕ್ಕೆ ಇಷ್ಟ ಆಯ್ತು.ಕನ್ನಡ
ದಲ್ಲಿ ಮಂಜುಳಾ ಗುರುರಾಜ್, ಜಗದೀಶ್,ಈಶ್ವರ ದೈತೋಟ ,ಹೀಗೆ ಹಲವರು ತಪ್ಪಿಲ್ಲದೆ ಓದಿ ಜನಕ್ಕೆ ಅರ್ಥ ಆಗೋ ರೀತಿ ಸಮಾಜದ ಆಗು ಹೋಗುಗಳನ್ನು ಹೇಳಿದರು.ಆಮೇಲೆ ಬಂತು ನೋಡಿ ಕೇಬಲ್
ಜಾಲ.ಶಿವ ಶಿವ ! ಬ್ಯಾಡ
ವೀಕ್ಷಕನ ಕಥೆ ,ನ್ಯೂಸ್ ರೀಡರ್ ಎಂಬೋ ಸುತ್ತಿಗೆ ಭಯೋತ್ಪಾದಕರ ಆಟೋಟ ! ಹಿಂದಿ ಚಾನಲ್
ಗಳಲ್ಲಿ ಇಂಗ್ಲಿಷರಂತೆ ಓದೋ ಹೆಣ್ಣು-ಗಂಡು ಮಕ್ಕಳು ಲೋಕಲ್ ಚಾನೆಲ್ ಹೆ-
ಗ ಮಕ್ಕಳು ಸ್ಪರ್ಧೆ ಮೇಲೆ ಓದಿದ್ದೆ ಓದಿದ್ದು! ಆದ್ರೆ ಟೀವಿ9 ಬಂದದ್ದೆ ಬಂತು .ಶುರು ಆಯ್ತಲ್ಲ ತು -ಛಿಗಳ ಕಾರು
ಬಾರು.'ರಾಜ್ಯದಲ್ಲಿ ಮಳೆ ಬಿದ್ದಿತೂ ,ಅದು ಹೋಗಿತ್ತು ,ತೂ,ತೂ, 'ಸಂಸ್ಕೃತಿ ಶುರು ಆಯ್ತೂ . ಅದು ಈಗ ಈಟಿವಿ,ಕಸ್ತೂರಿ,ಸುವರ್ಣಕ್ಕುಹರಡಿದೆ. ಅದೆಷ್ಟು ಅಸಹ್ಯವಾಗಿ ಕೇಳುತ್ತೆ
ಅಂದ್ರೆ, ವೀಕ್ಷಕನಿಗೆ ತೂ ... ಥೂ ....! ಅಂತ ನೋಡೋ
ಪರಿಸ್ಥಿತಿ ಉಂಟಾಗಿದೆ.
No comments:
Post a Comment