Wednesday, June 15, 2011

ಯಾವ ಅಭಿನಯಾ?


ನರಸಿಂಹರಾಜು, ಬಾಲಕೃಷ್ಣ,ದಿನೇಶ್,ದ್ವಾರಕೀಶ್,ಮುಸುರಿ ಕೃಷ್ಣ ಮೂರ್ತಿ ,ಮೈಸೂರ್ ಲೋಕೇಶ್ ಪಟ್ಟಿ ಬೆಳೀತಾನೆ ಹೋಗುತ್ತೆ ಹಾಸ್ಯ ನಟರ ಪಟ್ಟಿ, ನಂತರದ ದಿನಗಳಲ್ಲಿ ಬಂದ ಜಗ್ಗೇಶ್,ಸಾಧುಕೋಕಿಲ ,ಕೋಮಲ್ ಎಲ್ಲರು ಹಾಸ್ಯ ನಟರೇ! ನರಸಿಂಹ ರಾಜು ಮುಖ ನೋಡಿದ ತಕ್ಷಣ ನಗು ಉಕ್ಕಿ ಬರೋದು,ಅವ್ರು ಹಾಸ್ಯ ಮಾಡದೆ ಇದ್ರೂ!ಇದೆ ಮ್ಯಾನರಿಸಂ ದಿನೇಶ್,ದ್ವಾರಕೀಶ್ ಇನ್ನು ಹಲವರು ಪಡೆದರು.ಆದರೆ ಜಗ್ಗೇಶ್ ಯುಗದಲ್ಲಿ ಹಾಸ್ಯ ಡೈಲಾಗ್ ಗೆ ಮುಂದುವರಿಯಿತು.ಆತ ಅವನ ಅನ್ನುವಂತ (ಉದಾಹರಣೆಗಷ್ಟೇ ನಾನು ಈ ಪದ ಹೇಳಿರೋದು) ಸುಲಭ ಕನ್ನಡವನ್ನು ತನ್ನ ಸಿನೆಮಾದಲ್ಲಿ ಕಷ್ಟಪಟ್ಟು ಓದಿದಾಗ ಜನರು ಎದ್ದೆದ್ದು ನಕ್ಕರು,ತೀರಾ ಪೋಲಿ ಅನ್ನೋ ಡೈಲಾಗ್ ಜಾಸ್ತೀನೆ ಇರ್ತಾಯಿತ್ತು ಆ ಮಾತು ಬೇರೆ! ಆದರೆ ಅಜ್ಜಿಯನ್ನು ಎ ಅಜ್ಜಿ ನಿನ್ನ ಮನೆ ಕಾಯ್ವೋಗ ಅಂತ ಅಂದಾಗಲಂತೂ ಜನರಿಗೆ ನಗೆಯೋ ನಗೆ. ಅಗಲವಾಗಿ ನಡೆಯುತ್ತಾ ಮುಖ ಕಿವುಚಿ ಮಾತಾಡಿದರೆ ಅದರ ಮಜವೇ ಬ್ಯಾಡವೆ ಬ್ಯಾಡ ಅಷ್ಟು ಇಶ್ಶಿ ಅನ್ನೋ ಹಾಗಿರೋದು.ಸಾಧು ಕೋಕಿಲ ಜನಕ್ಕೆ ಇಷ್ಟಾ ಆಗಿದ್ದು ಸಹ ಸೇಮ್ ಓಲ್ಡ್ ಡೈಲಾಗ್ ಗಳಿಂದ.ಅದರಲ್ಲೂ ಚಿತ್ರಗುಪ್ತನ ಪಾತ್ರದಲ್ಲಿ ಯಪ್ಪಾ ಬ್ಯಾಡ ಯಮಪ್ಪ!! ಆದರೆ ಪಾಪ ನಂ ಕೋಮಲ್ ಅದೇ ಪೋಲಿ ಜಗ್ಗೇಶ್ ತಮ್ಮನ ಹಾಸ್ಯ ನಿಜ ಚನ್ನಾಗಿರುತ್ತೆ .ಆತ ಜಾಸ್ತಿ ಹೇಳುವ ಎಂಗೆ ಏನು ? ಕೇಳೋಕ್ಕೆ ಬೇಜಾರು ಆಗೋಲ್ಲ.ಆದರೆ ಹಾಸ್ಯ ನಟ ಪಟ್ಟಿಗೆ ಸೇರಿ ಕೊಳ್ತಾರೆ ನೋಡಿ ಈ ಸಿಹಿ ಕಹಿ ಚಂದ್ರು ಆತನ ಅತಿ ಹಾಸ್ಯ ನಟನೆ, ಓವರ್ ಆಕ್ಟಿಂಗ್ ವಾಕರಿಕೆ ತರುತ್ತೆ, ಸಿನೆಮಾದಲ್ಲಿ ಆಂಗಿಕ ಅಭಿನಯಕ್ಕೆ ಹೆಚ್ಚು ಗಮನ ಕೊಡ್ತಾರೆ ಮೊದಲಿನಿಂದಲೂ ,ಆದರೆ ಹಿಂದೆ ಇದ್ದ ಹಾಸ್ಯ ನಟರು ಸ್ವಲ್ಪ ಜಾಸ್ತಿ ಇದರ ಪ್ರಯೋಗ ಮಾಡುತ್ತಿದ್ದರು. ಕ್ರಮೇಣ ಬಂದ ಹಾಸ್ಯ ನಟರು ಆಂಗಿಕ ಅನ್ನುವುದಕ್ಕಿಂತ ಅಂಗಗಳ ನಟನೆಗೆ ಬೆಲೆ ಕೊಟ್ರು.ಮನೆಯವರೆಲ್ಲರೂ ಒಟ್ಟಿಗೆ ನೋಡ ಬ್ಯಾಡಿ ನಂ ಸಿನಿಮಾವ ಅಂತ ಹೇಳಿದರು ತಮ್ಮ ನಟನೆ,ಡೈಲಾಗ್ ನಿಂದ .ಆದರೆ ಈ ಸಿಹಿ ಕಹಿ ಚಂದ್ರು ಅನ್ನುವ ನಟ ಎಲ್ಲರನ್ನು ಮೀರಿಸಿ ಬಿಟ್ರು.ಹಿಂದಿನ ಆಂಗಿಕವನ್ನು,ನಂತರದ ನಟರ ಅಂಗಗಳ ನಟನೆಯನ್ನು,ಮೀರಿಸಿ ಅಂಗಾಂಗ ಅಭಿನಯಕ್ಕೆ ಹೆಸರು ವಾಸಿಯದ್ರು! ಈಗಲೂ ಆ ಅತಿರೇಕ ಇದ್ದೆ ಇದೆ . ಸ್ವಲ್ಪ ಇಂಥ ನಟನೆ ಬಿಟ್ಟು ಸಿಹಿ ಕಹಿ ಚಂದ್ರು ಇಷ್ಟ ಆಗೋ ಹಾಗೆ ನಟಿಸಿದರೆ ಮನೆಗಳಲ್ಲಿ ಹೆಣ್ಣು ಮಕ್ಕಳು ಮನ ಇತ್ತು ಇವರ ಕಾರ್ಯಕ್ರಮ ನೋಡ್ತಾರೆ ನಿಜ್ಜಾ !

No comments:

Post a Comment