Wednesday, June 15, 2011

ಇಷ್ಟವಾದ ಬಜಾರಿಗಳು


ಬಾಜಿಕಟ್ಟಿ ನೋಡು ಬಾರಾ ಮೀಸೆ ಮಾಮ. ಆರತಿ ಸವಾಲು ಹಾಕುತ್ತ ಶಿವರಾಂ ಅವರನ್ನು ಪಂದ್ಯಕ್ಕೆ ಕರೆಯುವುದಿರಲಿ,ಈ ಶತಮಾನದ ಮಾದರಿ ಹೆಣ್ಣು,ಎಂದು ಸಮಾಜಕ್ಕೆ ಸವಾಲು ಒಡ್ಡುವ ಹೆಣ್ಣು ಆಗಿರಲಿ,ಆರತಿ ಇಷ್ಟ ಆಗ್ತಾಯಿದ್ದದ್ದು ಆಕೆಯ ಆ ಜೋರಿನ ಪಾತ್ರದ ಕಾರಣದಿಂದ.ಏಯ್ ಪ್ರಭಾಕರ ಶ್ರೀಮಂತ್ರಪ್ಪ ನೀವು! ನಿನ್ನ ಸಾಲ ನಾನು ತೀರಿಸಿ ನಿನ್ನ ಋಣದಿಂದ ಮುಕ್ತಳು ಆಗ್ತೀನಿ ಅನ್ನುವ ಹಠಮಾರಿ ಹುಂಬ ಹೆಣ್ಣು ಯಾರಿಗೆ ತಾನೆ ಇಷ್ಟ ಆಗಲ್ಲ.ಆನಂತರ ತುಂಬಾ ಇಷ್ಟ ಆಗೋ ಬಜಾರಿ ಹುಡುಗಿ!ಮಂಜುಳಾ ರಾಜ ಅಂತ ಒಂದು ಸಲ ಕರೆದರೆ,ಮತ್ತೊಂದು ಸರ್ತಿ ಯಾರನ್ನು ಕೇರ್ ಮಾಡದೆ ತಾನೆ ಎಲ್ಲವನ್ನು ನಿಭಾಯಿಸೋ ಮುದ್ದು ಹೆಣ್ಣು,ಅಕ್ಕನ ಜೊತೆ ಸೇರಿ ತನ್ನ ತಂದೆಗೆ ಆದ ಅನ್ಯಾಸರಿಪಡಿಸುವ ಹಠದಲ್ಲಿ ಪೆದ್ದು ಡಾಕ್ಟರನ್ನು ಬೆಳ್ಳಿ ಮೋಡವೇ ಎಲ್ಲಿ ಓಡುವೆ ನನ್ನ ಬಳಿಗೆ ನಡೆದು ಬಾ ಅಂತ ಅಮಾಯಕಳಾಗಿ ಬೇಡುವ ಆ ಸುಂದರಿ ಮಂಜುಳಾ ಯಾರಿಗೆ ತಾನೆ ಇಷ್ಟ ಆಗಲ್ಲ.ಸಿನಿಮಾ ನೋಡುವ ಹೆಣ್ಣು ಮಕ್ಕಳಲ್ಲಿ ಈ ಪಾತ್ರಗಳು ಪರಕಾಯ ಪ್ರವೇಶ ಆಗಿರ್ತಾಯಿತ್ತು, ಗಂಡು ಹುಡುಗರು ಪಾಪಾ!! ಯಾವುದೇ ಪಾತ್ರ ಆಗಿರಲಿ ಅದರಲ್ಲಿ ಇನ್ವಾಲ್ವ್ ಆಗಿ ಮಾಡೋದು ಪ್ರತಿಯೊಬ್ಬ ಕಲಾವಿದರಲ್ಲಿ ಇರಲೀ ಬೇಕಾದ ಮುಖ್ಯ ಅಂಶ. ಆಗಲೇ ಆ ಪಾತ್ರಗಳು ನಿತ್ಯ ನೂತನ ಆಗಿರುತ್ತದೆ.ಎಷ್ಟೇ ವರ್ಷಗಳು ಕಳೆದರೂ ಅವ್ರು ನಟಿಸಿದ ಹಾಡುಗಳನ್ನು ಜನರಿಗೆ ಪದೇಪದೆ ಕೇಳಬೇಕು, ನೋಡ ಬೇಕು ಅಂತ ಅನ್ನಿಸುತ್ತೆ, ಸವಾಲು ನಿಂದು ಜವಾಬು ನಂದು ಅಂತಾ ಕೇಳಿದಾಗ ಪುಳಕ ಆಗ್ತಾನೆ ಇರ್ತಾರೆ ಎಷ್ಟೇ ಪೀಳಿಗೆ ಬಂದ್ರು,ಇಂಥ ಬಜಾರಿಗಳು ಈಗೆಲ್ಲಿದ್ದಾರೆ? ಅಂತವರು ಬಂದು ಕನ್ನಡ ಚಿತ್ರ ರಂಗವನ್ನು ಮತ್ತಷ್ಟು ಬೆಳೆಸಲಿ .........

ಯಾವ ಅಭಿನಯಾ?


ನರಸಿಂಹರಾಜು, ಬಾಲಕೃಷ್ಣ,ದಿನೇಶ್,ದ್ವಾರಕೀಶ್,ಮುಸುರಿ ಕೃಷ್ಣ ಮೂರ್ತಿ ,ಮೈಸೂರ್ ಲೋಕೇಶ್ ಪಟ್ಟಿ ಬೆಳೀತಾನೆ ಹೋಗುತ್ತೆ ಹಾಸ್ಯ ನಟರ ಪಟ್ಟಿ, ನಂತರದ ದಿನಗಳಲ್ಲಿ ಬಂದ ಜಗ್ಗೇಶ್,ಸಾಧುಕೋಕಿಲ ,ಕೋಮಲ್ ಎಲ್ಲರು ಹಾಸ್ಯ ನಟರೇ! ನರಸಿಂಹ ರಾಜು ಮುಖ ನೋಡಿದ ತಕ್ಷಣ ನಗು ಉಕ್ಕಿ ಬರೋದು,ಅವ್ರು ಹಾಸ್ಯ ಮಾಡದೆ ಇದ್ರೂ!ಇದೆ ಮ್ಯಾನರಿಸಂ ದಿನೇಶ್,ದ್ವಾರಕೀಶ್ ಇನ್ನು ಹಲವರು ಪಡೆದರು.ಆದರೆ ಜಗ್ಗೇಶ್ ಯುಗದಲ್ಲಿ ಹಾಸ್ಯ ಡೈಲಾಗ್ ಗೆ ಮುಂದುವರಿಯಿತು.ಆತ ಅವನ ಅನ್ನುವಂತ (ಉದಾಹರಣೆಗಷ್ಟೇ ನಾನು ಈ ಪದ ಹೇಳಿರೋದು) ಸುಲಭ ಕನ್ನಡವನ್ನು ತನ್ನ ಸಿನೆಮಾದಲ್ಲಿ ಕಷ್ಟಪಟ್ಟು ಓದಿದಾಗ ಜನರು ಎದ್ದೆದ್ದು ನಕ್ಕರು,ತೀರಾ ಪೋಲಿ ಅನ್ನೋ ಡೈಲಾಗ್ ಜಾಸ್ತೀನೆ ಇರ್ತಾಯಿತ್ತು ಆ ಮಾತು ಬೇರೆ! ಆದರೆ ಅಜ್ಜಿಯನ್ನು ಎ ಅಜ್ಜಿ ನಿನ್ನ ಮನೆ ಕಾಯ್ವೋಗ ಅಂತ ಅಂದಾಗಲಂತೂ ಜನರಿಗೆ ನಗೆಯೋ ನಗೆ. ಅಗಲವಾಗಿ ನಡೆಯುತ್ತಾ ಮುಖ ಕಿವುಚಿ ಮಾತಾಡಿದರೆ ಅದರ ಮಜವೇ ಬ್ಯಾಡವೆ ಬ್ಯಾಡ ಅಷ್ಟು ಇಶ್ಶಿ ಅನ್ನೋ ಹಾಗಿರೋದು.ಸಾಧು ಕೋಕಿಲ ಜನಕ್ಕೆ ಇಷ್ಟಾ ಆಗಿದ್ದು ಸಹ ಸೇಮ್ ಓಲ್ಡ್ ಡೈಲಾಗ್ ಗಳಿಂದ.ಅದರಲ್ಲೂ ಚಿತ್ರಗುಪ್ತನ ಪಾತ್ರದಲ್ಲಿ ಯಪ್ಪಾ ಬ್ಯಾಡ ಯಮಪ್ಪ!! ಆದರೆ ಪಾಪ ನಂ ಕೋಮಲ್ ಅದೇ ಪೋಲಿ ಜಗ್ಗೇಶ್ ತಮ್ಮನ ಹಾಸ್ಯ ನಿಜ ಚನ್ನಾಗಿರುತ್ತೆ .ಆತ ಜಾಸ್ತಿ ಹೇಳುವ ಎಂಗೆ ಏನು ? ಕೇಳೋಕ್ಕೆ ಬೇಜಾರು ಆಗೋಲ್ಲ.ಆದರೆ ಹಾಸ್ಯ ನಟ ಪಟ್ಟಿಗೆ ಸೇರಿ ಕೊಳ್ತಾರೆ ನೋಡಿ ಈ ಸಿಹಿ ಕಹಿ ಚಂದ್ರು ಆತನ ಅತಿ ಹಾಸ್ಯ ನಟನೆ, ಓವರ್ ಆಕ್ಟಿಂಗ್ ವಾಕರಿಕೆ ತರುತ್ತೆ, ಸಿನೆಮಾದಲ್ಲಿ ಆಂಗಿಕ ಅಭಿನಯಕ್ಕೆ ಹೆಚ್ಚು ಗಮನ ಕೊಡ್ತಾರೆ ಮೊದಲಿನಿಂದಲೂ ,ಆದರೆ ಹಿಂದೆ ಇದ್ದ ಹಾಸ್ಯ ನಟರು ಸ್ವಲ್ಪ ಜಾಸ್ತಿ ಇದರ ಪ್ರಯೋಗ ಮಾಡುತ್ತಿದ್ದರು. ಕ್ರಮೇಣ ಬಂದ ಹಾಸ್ಯ ನಟರು ಆಂಗಿಕ ಅನ್ನುವುದಕ್ಕಿಂತ ಅಂಗಗಳ ನಟನೆಗೆ ಬೆಲೆ ಕೊಟ್ರು.ಮನೆಯವರೆಲ್ಲರೂ ಒಟ್ಟಿಗೆ ನೋಡ ಬ್ಯಾಡಿ ನಂ ಸಿನಿಮಾವ ಅಂತ ಹೇಳಿದರು ತಮ್ಮ ನಟನೆ,ಡೈಲಾಗ್ ನಿಂದ .ಆದರೆ ಈ ಸಿಹಿ ಕಹಿ ಚಂದ್ರು ಅನ್ನುವ ನಟ ಎಲ್ಲರನ್ನು ಮೀರಿಸಿ ಬಿಟ್ರು.ಹಿಂದಿನ ಆಂಗಿಕವನ್ನು,ನಂತರದ ನಟರ ಅಂಗಗಳ ನಟನೆಯನ್ನು,ಮೀರಿಸಿ ಅಂಗಾಂಗ ಅಭಿನಯಕ್ಕೆ ಹೆಸರು ವಾಸಿಯದ್ರು! ಈಗಲೂ ಆ ಅತಿರೇಕ ಇದ್ದೆ ಇದೆ . ಸ್ವಲ್ಪ ಇಂಥ ನಟನೆ ಬಿಟ್ಟು ಸಿಹಿ ಕಹಿ ಚಂದ್ರು ಇಷ್ಟ ಆಗೋ ಹಾಗೆ ನಟಿಸಿದರೆ ಮನೆಗಳಲ್ಲಿ ಹೆಣ್ಣು ಮಕ್ಕಳು ಮನ ಇತ್ತು ಇವರ ಕಾರ್ಯಕ್ರಮ ನೋಡ್ತಾರೆ ನಿಜ್ಜಾ !

ಸತ್ಯ ಹರಿಶ್ಚಂದ್ರ ಹಾಗು ನೋಡುಗರ ಕಷ್ಟ!!!


ಗಣಪತಿ ಹಬ್ಬ ಬಂತು ಅಂದ್ರೆ ಎಲ್ಲರಿಗು ಖುಷಿ.ಏಕೆ ಅಂತ ಅಂದ್ರೆ ಕೆಲವರಿಗೆ ಕಡುಬಿನ ಆಸೆ ಒಂದಷ್ಟು ಜನಕ್ಕೆ ಗಣಪನ ಮೇಲೆ ಪ್ರೀತಿ ,ಕೆಲವರಿಗೆ ಆ ಸಂಭ್ರಮದ ಬಗ್ಗೆ ಉತ್ಸಾಹ.ಗಣಪತಿ ಹಬ್ಬ ಎಲ್ಲ ವಿಷಯದಲ್ಲೂ ಸರಿ ಆದರೆ ರಾತ್ರಿ ಕಥಾ ಶ್ರವಣ ಇದೆಯಲ್ಲ ಆ ಕಥೆ ಯಾರಿಗೂ ಬೇಡ, ಯಾಕೆಂದ್ರೆ ನಾವು ಹುಟ್ಟಿದ ದಿನದಿಂದ ಬದುಕಿರುವ ತನಕ ಕೇಳಿಸಿಕೊಳ್ಳಲೇ ಬೇಕು.ಅದೊಂದು ಅಲಿಖಿತ ಒಪ್ಪಂದ.ಓಹ್ ಗಣು ಸೇವ್ ಅಸ್ ಅಂತ ಕೇಳಿಕೊಂಡರೆ ನಿಮಗಿಂತ ಹೆಚ್ಚು ಕಾಲದಿಂದ ನನ್ನ ಕಥೆ ಸಮಸ್ತ ಭಕ್ತ ಕೋಟಿ ಬಾಯಲ್ಲಿ ಕೇಳಿಸಿಕೊಳ್ತಾ ಇದ್ದೀನಿ ನಿಮಗೇನು ಅಂತ ಕಷ್ಟಾ ಅಂತ ಮೌನವಾಗಿ ಕುಳಿತೆ ಬಿಟ್ಟಿದ್ದಾನೆ ಭಗವಂತ.ಈ ವಿಷ್ಯ ಯಾಕೆ ಬಂತುಂತ ಅಂದ್ರೆ ನಮ್ಮ ಓಲ್ಡ್ ಈಜ್ ಗೋಲ್ಡ್ ಸಿನಿಮಾಗಳಲ್ಲಿ ಒಂದಾದ ಸತ್ಯ ಹರಿಶ್ಚಂದ್ರ ಸಹ ಇದೆ ಗ್ರೂಪಿಗೆ ಸೇರುತ್ತೆ. ಹೇಗೆ ಅಂತ ಅಂದ್ರೆ. ಸತ್ಯ ಹರಿಶ್ಚಂದ್ರ ,ಸುಖವಾಗಿದ್ದು ರಾಜ್ಯ ಆಳ್ತಾಯಿದ್ದಾಗ ವಿಶ್ವಮಿತ್ರ ನನ್ನು ಎದುರು ಹಾಕಿಕೊಂಡು ಬ್ಯಾಡ ಆ ಕಥೆ.ಹರಿಶ್ಚಂದ್ರನಾಗಿ ಡಾ.ರಾಜ್ ,ಚಂದ್ರಮತಿ-ಪಂಡರಿ ಬಾಯಿ,ಲೋಹಿತಶ್ವನಾಗಿ-ಕುಟ್ಟಿ ಪದ್ಮಿನಿ,ವಿಶ್ವಾಮಿತ್ರನಾಗಿ ಉದಯ ಕುಮಾರ್,ನಕ್ಷತ್ರಿಕ ನರಸಿಂಹ ರಾಜು ಹೀಗೆ ರಸಭರಿತ ಸಿನಿಮ ನೋಡೋಕೆ ಖುಷಿ ಆಗುತ್ತೆ.ಆದರೆ,ನೀವು ಅಯ್ಯೋ ಒಂದ್ಸಲ ನೋಡಿದ್ದೀನಿ ಬಿಡು ಅಂತ ಪ್ರಸಾರ ಆಗ್ತಾಯಿರೋ ಚಾನೆಲ್ ಬಿಟ್ಟು ಬೇರೆ ಚಾನಲ್ ಕಡೆ ಹೊರಟರೋ ಹರಿಶ್ಚಂದ್ರ ನಿಗಿಂತ ಕಷ್ಟ ಕೊಡ್ತಾರೆ ಹಿರಿಯರು.ಯಾಕೆಂದ್ರೆ ಅವರ ಪ್ರಕಾರ ಸತ್ಯ ಹರಿಶ್ಚಂದ್ರ ನ ಕಥೆ ನೋಡುವ,ಕೇಳುವ ಕೆಲಸ ಅರ್ಧಕ್ಕೇ ಬಿಡಬಾರದು ,ಅಕಸ್ಮಾತ್ ಬಿಟ್ಟರು ಕಷ್ಟ ದಲ್ಲಿರುವ ಹರಿಶ್ಚಂದ್ರನನ್ನು ಅರ್ಧಕ್ಕೇ ಕೈ ಬಿಡ ಬಾರದು.ಪ್ರಾಯಶ: ಹಿಂದಿನ ಬ್ಲಾಕ್ ಅಂಡ್ ವೈಟ್ ಹರಿಶ್ಚಂದ್ರ ಈರೀತಿ ಗೆದ್ದನ? ಯಪ್ಪಾ ಗೊತ್ತಿಲ್ಲ ಸಿವ್ನೆ.ಆದ್ರೆ ಆಪರಿ ಸಿನಿಮಾಗೆ ಬಣ್ಣ ಪುಸಿದ್ರು ಹರಿಶ್ಚಂದ್ರ ಓಕೆ ಯಾಕೋ ಆಗ್ಲಿಲ್ಲ.ಆದರು ಕಪ್ಪು ಬಿಳಿಲಿ ಸಿಗೋ ಮಜಾ ಕಲರ್ ನಲ್ಲಿ ಸಿಕ್ಕಲ್ಲ ಬಿಡಿ ದಿತ್ತಿರಿ ದಿತ್ತಿರಿ ! ಮಜಾ ಸಿಕ್ಕೋದು ಹಳೆ ಸಿನಿಮಾದಲ್ಲಿ .ಹಾಗೆ ಭಕ್ತರು ಸಹ ಏನೋ ಒಂದು ಕಾರಣ ಇಟ್ಕೊಂಡು ಹರಿಶ್ಚಂದ್ರನನ್ನ ಪೂರ್ತಿ ನೋಡೇ ನೋಡ್ತಾರೆ ಮತ್ತೆ ಮತ್ತೆ...!

ಹೀಗೊಬ್ಬರು ಭಟ್ಟಿ


ಆಗಿನ್ನೂ ದೂರದರ್ಶನದ ರಮ್ಯ ಜೊತೆಗೆ ಒಂದಷ್ಟುಚೈತ್ರ ಕಾಲ .ಅದರಲ್ಲೂ ಹಿಂದಿ ಭಾಷೆಯ ಕಾರ್ಯಕ್ರಮಗಳ ಸಿಕ್ಕಾಪಟ್ಟೆ ಸುಂದರ ಕಾಲ.ವೀಕ್ಷಕನಿಗೆ ಇದ್ದದ್ದು ಕೇವಲ ಒಂದೇ ಚಾನೆಲ್ ಅದು ಅದು ಸತ್ಯಮೇವ ಜಯತೆ ಅಂಬೋ ಹಿಂದಿ ದೂರದರ್ಶನ. ಯಾವ ರಾಷ್ಟ್ರೀಯ ನಾಯಕರು ಸತ್ತರು ಲೈವ್ ತೋರಿಸುತ್ತಾ ಕೂರುವ ಸಮಯ,ವೀಕ್ಷರಂತು ಮನೇಲೆ ಹೆಣ ಇದೆಯೇನೋ ಎನ್ನುವ ಇರಿಟೆಟಿಗೆ ಒಳಗಾಗುತ್ತಿದ್ದರು. ಆಮೇಲೆ ಜನಕ್ಕೆ ಖುಷಿ ಕೊಡೊ ಕಾರ್ಯಕ್ರಮ ಸಹ ಶುರು ಆಯ್ತು.ಆ ಸಂದರ್ಭದಲ್ಲಿ ಪ್ರಸಾರ ಆಗಿ ಜನಮನ ಗೆದ್ದ ಕಾರ್ಯಕ್ರಮ ಜಸಪಾಲ್ ಭಟ್ಟಿಯ 'ಉಲ್ಟಾಪುಲ್ಟಾ'.ಈ ಕಾರ್ಯಕ್ರಮ ಎಲ್ಲರನ್ನು ನಗೆಗಡಲಲ್ಲಿ ಮುಳುಗಿಸಿತ್ತು.ಶುದ್ಧ ಹಾಸ್ಯಲಹರಿ ಹೊಂದಿದ್ದ ಕಾರ್ಯಕ್ರಮ ಕೇವಲ ಹತ್ತು ನಿಮಿಷಗಳಷ್ಟೇ ಪ್ರಸಾರ ಆದರು ಹೆಚ್ಚುಕಾಲ ಮನದಲ್ಲಿ ಉಳಿಯುತ್ತಿತ್ತು.ಆನಂತರ ಬಂದ 'ಫ್ಲಾಪ್ ಷೋ' ಸೀರಿಯಲ್ ಜಸ್ಪಾಲ್ ಭಟ್ಟಿ ಅದೆಷ್ಟು ಪ್ರತಿಭಾವಂತ ಅನ್ನುವುದನ್ನು ತೋರಿಸಿಕೊಟ್ಟಿತು.ಆತನ ಹೆಂಡತಿ ಪ್ರೀತಿ,ಉಳಿದ ಟೀಮ್ ನಟನೆ ಅದ್ಭುತವಾಗಿತ್ತು.ಯಾರಿಗೆ ಆಗಲೀ ಇನ್ನೊಬ್ಬರನ್ನು ನಗಿಸುವುದು ಸರಳವಾದ ಕೆಲಸ ಅಲ್ಲ .ಆದರೆ ಈ ಜಸ್ಪಾಲ್ ಭಟ್ಟಿ ಕಾರ್ಯಕ್ರಮ ಮೊದಲಿನಿಂದ ಕೊನೆವರೆಗೂ ನಗು ನಗು ಅಷ್ಟೆ ಜನರಿಗೆ ಕೊಟ್ಟಿದ್ದು . ಆನಂತರ ಅನೇಕ ಹಾಸ್ಯ ಕಾರ್ಯಕ್ರಮಗಳು ಬಂದರು ಜಸ್ಪಾಲ್ ಭಟ್ಟಿ ಯಷ್ಟು ಖುಷಿ ಕೊಡಲಿಲ್ಲ ಬಿಡಿ.ಸ್ಟಾರ್ ಪ್ಲಸ್ ನಲ್ಲಿ ಪ್ರಸಾರ ಆಗ್ತಾಯಿರೋ 'ನಚ್ ಬಲಿಯೇ' ಕಾರ್ಯಕ್ರಮದಲ್ಲಿ ಜಸ್ಪಾಲ್ ಭಟ್ಟಿ ನೋಡಿ ಇವೆಲ್ಲ ನೆನಪಿಗೆ ಬಂತು.

1 comments:


Anonymous said...
nija nimma maatu jaspal bhatti ondondu maatu nage ukkisuvudaralli yashsvi aagutte

ಅಯ್ಯಯ್ಯಪ್ಪೋ !!!!


ಬೇವರ್ಸಿ ಹಳೆ ಬೇವರ್ಸಿ.... ಅಂತ ಬಜಾರಿ ಹೆಣ್ಣು ಮಗಳು ರೇಗೊ ದೃಶ್ಯ ನೋಡಿದಾಗ ಕನ್ನಡ ಚಿತ್ರ ರಂಗದ ಅಭೂತಪೂರ್ವ ನಟಿ ಮಂಜುಳಾ ಇನ್ನು ನಮ್ಮೊಂದಿಗೆ ಜೀವಂತ ಆಗಿರೋದು ಸ್ಪಷ್ಟ ಆಗುತ್ತೇಮೊನ್ನೆ ದೀಪಾವಳಿ ಹಬ್ಬದಲ್ಲಿ ಈಟಿವಿ ಯಲ್ಲಿ ಪ್ರಸಾರಗೊಂಡ ಸಂಪತ್ತಿಗೆ ಸವಾಲ್ ನೋಡಿದಾಗ ನಮ್ಮ ಮಂಜುಳಾ ಇಲ್ವಾ ಅಂತ ಮನಸ್ಸು ಮುದುಡಿತು.ಅವರ ನಟನೆಯೇ ಅಂತಹುದು. ಸಿನಿಮಾ ಹೆಸರಿಗಿಂತ ಕಲಾವಿದರ ಕೆಲವು ಡೈಲಾಗ್ ಗಳೇ ಹೆಚ್ಚು ಮನದಲ್ಲಿ ಉಳಿಯೋದು.ಬೇವರ್ಸಿ ಅಂತ ಕಿರಿಚೋ ಮಂಜುಳಾ,ಬಿಕನಾಸಿ ಅಂತ ಕಿಚಾಯಿಸೋ ಡಾ.ರಾಜ್ ಎಲ್ಲವು ಸದಾ ಕಾಲ ಆಪ್ತ,ಪರಮಾಪ್ತ !ಈ ಸಂದರ್ಭದಲ್ಲಿ ಒಂದು ವಿಷ್ಯ ಜ್ಞಾಪಕಕ್ಕೆಬರುತ್ತೆ,ಹಳೆಯ ಸಿನಿಮಾಗಳಲ್ಲಿ ಹಾಡುಗಳಿಂದ ಆ ಸಿನಿಮಾಕ್ಕೆ ಬೆಲೆ ಸಿಗ್ತಾಯಿತ್ತು,ಈಗಲೂ ಅದೇ ಪರಂಪರೆ ಮುಂದುವರೆದಿದೆ.ಆದರೆ ಹಳೆ ಹಾಡುಗಳನ್ನು ರೀಮಿಕ್ಸ್ ಮಾಡೋ ಸಂಸ್ಕೃತಿ ಇದೆಯಲ್ಲ ಅದರಷ್ಟು ಇರಿಟೇಟ್ ವಿಷ್ಯ ಮತ್ತೊಂದಿಲ್ಲ.ಈಗ ಡಾ.ರಾಜ್ ಹಾಗು ಮಂಜುಳಾ ಅವರ ಈ ಮೌನವಾ ತಾಳೆನು ಜ್ಞಾಪಕ ಮಾಡಿಕೊಳ್ಳಿ ಎಷ್ಟು ಇಷ್ಟ ಆಗುತ್ತೆ,ಅದೇ ರೀತಿ ರಾಜ ಮುದ್ದು ರಾಜ ನೂಕುವಂತ ಕೋಪನನ್ನಲ್ಲೇಕೆ ಅಂತಾ ಮುದ್ದಾದ ಹುಡುಗಿ ಮಂಜುಳಾ ಕರೆದಾಗ ಡಾ.ರಾಜ್ ಕರಗಿ ನೀರಾಗಿ ಹೋದರಲ್ಲ ಹಾಡಲ್ಲಿ!!ಆ ಹಾಡು ಒರಿಜಿನಲ್ ಟ್ರಾಕ್ ಈಗಲೂ ಕಿವಿಗೆ ಬಿದ್ದಾಗ ಅದೆಷ್ಟು ರೋಮಾಂಚನ ಆಗುತ್ತೆ ಅಲ್ಲದೆ ಪದೇ ಪದೆಅದನ್ನು ಕೇಳುವ ಆಸೆ ಆಗುತ್ತೆ.ಅದರ ರೀಮಿಕ್ಸ್ ರಾಮ .....ರಾಮ....! ರಾಜ -------- ಮುದ್ದು ರಾಜ,ನೂಕು ವಂತ ------ ನೂಕು ವಂತ-------- ನೂಕುವಂತ ------ಹೀಗೇ ಸರ್ವಂ ಡ್ಯಾಶ್ ಮಯಮ್ ! ಆಗ ಕೇಳುಗನಿಗೆ ಯಾರನ್ನ ನೂಕಲಿ ಅಂತ ಅನ್ನಿಸೋದು ನಿಜ .ರಮಿಸಬೇಕು ಅಂತ ಬರೋ ಸಂಗಾತಿ ಈ ಹಾಡು ಕೇಳಿದರೆ ಅಯ್ಯಯ್ಯಪ್ಪೋ!

2 comments:


Anonymous said...
howdu niv heliddu satya. original ayattu originalle. ondu sala banda hadu adara sahitya, sangeeta hit adaga adu matte bere taraha andre bere tunege set madi hadidare kandita iritation age agutte.aaga a hadanne kelodu beda annisutte. remix bagge nim jote dikkarakke kandita nanu iddene.
Anonymous said...
Article thuba channagide. manjulananthe kalpanadu article bandare thumba channagirutthe. please article bareyiri. nimma belavenige heege munduvariyalli ennude nanna harike and abhilashe.

ಕಣ್ಣೀರು ಬರುತ್ತೆ!!!


ಕೆಲವರ ಭಾಷ ಸಾಮರ್ಥ್ಯ ಕುರಿತು ಹೇಳೋಕೆ ಕಷ್ಟ ಆಗುತ್ತೆ.ಯಾಕೆಂದ್ರೆ ಅದನ್ನು ಯಾವರೀತಿ ಅರ್ಥ ಮಾಡಿಕೊಳ್ಳೋದು ಅಂತ ಗೊತ್ತೇ ಆಗೋದಿಲ್ಲ ಬಿಡಿ! ಆಗಿನ್ನೂ ಶಿವರಾಜ್ ಕುಮಾರದು' ಓಂ 'ಸಿನಿಮ ಬಿಡುಗಡೆ ಆಗಿತ್ತು.ಹೀಗೊಬ್ಬ ಸಾಮಾನ್ಯ ಮಾತಾಡುತ್ತಾ ನಾಳೆ ರಜಾ ಕಣಮ್ಮ.ಅದಕ್ಕೆ ಇವತ್ತು ಹೋಂಗೆ ಹೋಗ್ತೀನಿ . ನಾಳೆ ಮನೆ ಅಂತ ಅಂದ.ಅವನ ಕಥೆ ಬಿಡಿ ಚಿತ್ರ ತಾರೆಯರು ಕೆಲವರು ಮಾತಾಡೊದು ನೋಡಿದ್ರೆ ಕಣ್ಣಲ್ಲಿ ನೀರ್ ಬರುತ್ತೆ.ಅದರಲ್ಲೂ ಹೆಚ್ಚು ಆಂಗ್ಲ ಬಳಸುವ ನಮ್ಮ ನೆರೆಯ ರಾಜ್ಯದವರ ವಿಷ್ಯ ವಿಶೇಷವಾಗಿ ಹೇಳಬೇಕಾಗಿಲ್ಲ.ಜಯಪ್ರದ ಭಾರತದ ಅತ್ಯಂತ ಸುಂದರ ನಟಿ ಅಂತ ಹೆಸರು ಪಡೆದಿರುವವರು.ಆಕೆ ತಮ್ಮಉದ್ದಜಡೆ,ನಗುಮುಖ,ಅದ್ಭುತ ನಟನೆಯಿಂದ ಜನಮನ ಗೆದ್ದವರು.ಕನ್ನಡವು ಸೇರಿದಂತೆ ತೆಲುಗು,ತಮಿಳು ಹಿಂದಿ ಹೀಗೆ ಸಾಧ್ಯ ಆದಷ್ಟು ಭಾಷೆಗಳಲ್ಲಿ ತಮ್ಮ ನಟನಾ ಸಾಮರ್ಥ್ಯ ತೋರಿದ ನಟಿ.ಆಗಿನ್ನೂ ಭಾರತದಲ್ಲಿ ಟಿ.ವಿ.ಪ್ರಭಾವ ಹೆಚ್ಚಾಗಿರಲಿಲ್ಲ.ಈಗಿನಂತೆ ಟೀವಿಯನ್ನು ಜಾಣರಪೆಟ್ಟಿಗೆ ಅಂತ ಕರಿಯದೆ ಧೈರ್ಯವಾಗಿ ದಡ್ಡರ ಪೆಟ್ಟಿಗೆ ಅಂತ ಹೇಳೋಕಾಲ.ಕರ್ನಾಟಕದಲ್ಲಿ ಅದೂ ಕೆಂಪೇಗೌಡ ನಗರಿ ಬೆಂಗಳೂರಲ್ಲಿ ಮಾತ್ರ ಕನ್ನಡ ಕಾರ್ಯಕ್ರಮ ಪ್ರಸಾರ ಆಗ್ತಾಯಿದ್ದ ಕಾಲ.ಉಳಿದೆಡೆ ಪ್ರಾದೇಶಿಕ್ ಭಾಷ ಕಾರ್ಯಕ್ರಮ್ ಅಂಬೋಹೆಸರಲ್ಲಿ ಎಲ್ಲ ಭಾಷೆಗಳ ಕಾರ್ಯಕ್ರಮ ಟೆಲಿಕಾಸ್ಟ್ ಆಗ್ತಾಯಿತ್ತು.ಒಂದ್ ಸಲ ತೆಲುಗು ಟರ್ಮ್ಆಗ ಈ ಮುದ್ದಾದ ನಟಿ ಜಯಪ್ರದ ಸಂದರ್ಶನ.ಸಂದರ್ಶಕ ಪ್ರಶ್ನೆಗಳು ಎಲ್ಲವನ್ನು ಕೇಳಿದ ಮೇಲೆ ನಿಮ್ಮ ಮಸನಸ್ಸು ಕದಡಿದ ಪ್ರಸಂಗ ತಿಳಿಸಿ ಅಂತ ಕೇಳಿದ.ಜಯಪ್ರದ ಮಾತಾಡ್ತಾ 'ದಾನ್ನಿ ಚುಸಿ ನಾ ಐಸ್ ಲೋ ವಾಟರ್ ವಚ್ಚಿಂದಿ 'ಅಂತ ಬೇಜಾರು ಮಾಡಿಕೊಂಡರು.ಅವ್ರ ಭಾಷೆ ಕೇಳಿ ನಮ್ಮ ಕಣ್ಣಲ್ಲೂ ನೀರು ಬಂತು.ನಿಮಗೆ?

ಎಲ್ಲದರಲ್ಲೂ ವಿಶೇಷ


ಬಲಗೈ ಅಂಗೈ ಮೇಲೆ ಎಡಗೈನ ಮಧ್ಯದ 3 ಬೆರಳುಗಳಲ್ಲಿ ಮೃದುವಾಗಿ ತಟ್ಟುತ್ತಾ "ದೇವಿಯೋ ಔರ್ ಸಜ್ಜನೋ"ಎಂದು ಕೌನ್ ಬನೇಗ ಕರೋಡ್ ಪತಿಯನ್ನು ಆರಂಭ ಮಾಡುತ್ತಿದ್ದ ಒಂದು ಕಾಲದ ಆಂಗ್ರಿ ಎಂಗ್ ಮ್ಯಾನ್ ಅಮಿತಾಬ್ ಬಚ್ಚನ್ ಮಾತಿನ ಶೈಲಿ ಎಲ್ಲರಿಗು ಆಪ್ತ.ಆತ ವೃತ್ತಿಯಲ್ಲಿ ಅಲ್ಲದೆ ವಯುಕ್ತಿಕವಾಗಿ ಸಹ ಯಶಸ್ವಿ ಬದುಕನ್ನು ನಡೆಸುತ್ತಿರುವ ಕಲಾವಿದ.ಕೇವಲ ನಟ ಮಾತ್ರವಲ್ಲದೆ ಉತ್ತಮ ಗೃಹಸ್ಥ,ಅತ್ಯುತ್ತಮ ದಿಪ್ಲೋಮ್ಯಾಟ್ .ರಾಜಕೀಯ ತನಗೆ ಒಗ್ಗದು ಅಂತ ಗೊತ್ತಾದ ತಕ್ಷಣ ಅದರಿಂದ ದೂರ ಸರಿದು,ಪುನ: ಬಣ್ಣದ ಬದುಕನ್ನು ಆಯ್ಕೆ ಮಾಡಿಕೊಂಡರು,ಸಿನಿಮಾಗಳಲ್ಲಿ ಸೋಲು ಕಂಡಾಗ ಟೀವಿ ಆಯ್ಕೆ ಮಾಡಿಕೊಂಡರು.ಮಗ ವಿಶ್ವದ ಅಪ್ರತಿಮ ಸುಂದರಿ ಐಶ್ ಳನ್ನು ಮದುವೆ ಆದ ಮೇಲೆ ಬಚ್ಚನ್ ಮಗ ಸೊಸೆ ಜೊತೆ ಹೆಚ್ಚು ಹೆಚ್ಚು ಓಡಾಡೋಕೆ ಆರಂಭಿಸಿದಾಗ ನಕ್ಕವ್ರೆಷ್ಟೋ!ಆದ್ರೆ ಇಲ್ಲಿ ಒಂದು ಅಂಶ ಗಮನಿಸ ಬೇಕು .ಆತ ಯಾವುದೇ ಕಾರಣಕ್ಕೂ ತನ್ನ ಕುಟುಂಬ ದಲ್ಲಿ ವಿರಸ ಉಂಟಾಗ ಬಾರದು ಎಂಬ ಅಭಿಮತ ಹೊಂದಿದ್ದರು.ಆಕಾರಣದಿಂದ ಹೊಸದಾಗಿ ತನ್ನ ಮನೆ ಸೇರಿದ ಹೆಣ್ಣುಮಗಳಿಗೆ ಹೆಚ್ಚಿನ ಆದ್ಯತೆ ತೋರಿದರು.ತನ್ನ ಪತ್ನಿ ಹಾಗು ಮಗನ ಬದುಕು ಸುಂದರ ಆಗಿರ ಬೇಕಾದರೆ ಮಾವನ ಈ ಕರ್ತವ್ಯ ಹೆಚ್ಚು ಪ್ರಾಮುಖ್ಯತೆ ಪಡೆದು ಕೊಳ್ಳುತ್ತದೆ ಎಂದು ಬಚ್ಚನ್ ಅರಿತಿದ್ದಾರೆ.ನಂಗೆ ಟೈಮ್ ಟೈಮ್ಗೆ ಚೆನ್ನಾಗಿ ಸೇವೆ ಆದರೆ ಸಾಕು ಎನ್ನುವ ಮಾವಂದಿರು ಈತ ಜೀವನ ಸ್ವೀಕರಿಸುವ ರೀತಿ ನೋಡಿ ಕಲಿಯ ಬೇಕು. ಹೌದಲ್ವಾ!!

1 comments:


Anonymous said...
howdu devaru srustisida aparoopada vyaktigallalli obbaru anta helabahudu. ivarella ontara god gift. ella kshetragalallu hesraru padedavaru. eetara hesaru galisalu kelavarige matra sadya. avare devaru kotta varagalu.

ತೂ........ ಥೂ.............!


ವಾರ್ತೆ ಓದುವುದು ಒಂದು ಕಲೆ.ಬಹಳ ಹಿಂದೆ ಬರಿ ಹಿಂದಿ ಚಾನಲ್ ಒಂದೇ ಒಂದು ಇತ್ತು.ಆಗ ಪ್ರಸಾರ ಆಗೋ ಸಾಕ್ಷ್ಯ ಚಿತ್ರದಿಂದ ಹಿಡಿದು ಎಲ್ಲಾ ತಪ್ಪದೆ ಜನ ನೋಡ್ತಾಯಿದ್ರು.ಆಗ ರಮಣ್, ಸಲ್ಮಾ ,ಅವಿನಾಶಿ ಕೌರ್,ಸರಳ ಹೀಗೆ ಒಂದಷ್ಟು ಜನ ನ್ಯೂಸ್ ರೀಡರ್ ಗಳು ಜನಕ್ಕೆ ಹೆಚ್ಚು ಇಷ್ಟ ಆಗಿದ್ರು.ಹಾಳೂರಿಗೆ ಉಳಿದೋನೆ ಗೌಡ ಅಲ್ವ! ಆ ಬಳಿಕ ಸ್ಥಳೀಯ ಭಾಷೆಗಳಲ್ಲಿ ನ್ಯೂಸ್ ತುಂಬ ಜನಕ್ಕೆ ಇಷ್ಟ ಆಯ್ತು.ಕನ್ನಡದಲ್ಲಿ ಮಂಜುಳಾ ಗುರುರಾಜ್, ಜಗದೀಶ್,ಈಶ್ವರ ದೈತೋಟ ,ಹೀಗೆ ಹಲವರು ತಪ್ಪಿಲ್ಲದೆ ಓದಿ ಜನಕ್ಕೆ ಅರ್ಥ ಆಗೋ ರೀತಿ ಸಮಾಜದ ಆಗು ಹೋಗುಗಳನ್ನು ಹೇಳಿದರು.ಆಮೇಲೆ ಬಂತು ನೋಡಿ ಕೇಬಲ್ ಜಾಲ.ಶಿವ ಶಿವ ! ಬ್ಯಾಡ ವೀಕ್ಷಕನ ಕಥೆ ,ನ್ಯೂಸ್ ರೀಡರ್ ಎಂಬೋ ಸುತ್ತಿಗೆ ಭಯೋತ್ಪಾದಕರ ಆಟೋಟ ! ಹಿಂದಿ ಚಾನಲ್ ಗಳಲ್ಲಿ ಇಂಗ್ಲಿಷರಂತೆ ಓದೋ ಹೆಣ್ಣು-ಗಂಡು ಮಕ್ಕಳು ಲೋಕಲ್ ಚಾನೆಲ್ ಹೆ-ಮಕ್ಕಳು ಸ್ಪರ್ಧೆ ಮೇಲೆ ಓದಿದ್ದೆ ಓದಿದ್ದು! ಆದ್ರೆ ಟೀವಿ9 ಬಂದದ್ದೆ ಬಂತು .ಶುರು ಆಯ್ತಲ್ಲ ತು -ಛಿಗಳ ಕಾರುಬಾರು.'ರಾಜ್ಯದಲ್ಲಿ ಮಳೆ ಬಿದ್ದಿತೂ ,ಅದು ಹೋಗಿತ್ತು ,ತೂ,ತೂ, 'ಸಂಸ್ಕೃತಿ ಶುರು ಆಯ್ತೂ . ಅದು ಈಗ ಈಟಿವಿ,ಕಸ್ತೂರಿ,ಸುವರ್ಣಕ್ಕುಹರಡಿದೆ. ಅದೆಷ್ಟು ಅಸಹ್ಯವಾಗಿ ಕೇಳುತ್ತೆ ಅಂದ್ರೆ, ವೀಕ್ಷಕನಿಗೆ ತೂ ... ಥೂ ....! ಅಂತ ನೋಡೋ ಪರಿಸ್ಥಿತಿ ಉಂಟಾಗಿದೆ.

1 comments:


Anonymous said...
halo... neev helodeno nija... suddi ododu yavaglu onde reethi andre, etthu susu madkondogo thara irbardu. suddiyannu differentagi, jannkke ishtavago reethi.... haagu janana attraction mado shailinu difrentagi irbeku.... adke e reethiya hosa hosa nirupana shailigalige chanellugalu maruhogtave. ravi belagere, kakatkar madiddu idanne. success agiddu idrindane.... so... idella success agoke hagu janarannu atraction madoke chanellugalu ayke madikondiro tricksu. alva..... udaharanege ... neeve nimma blognalli kottiro hedding galannu nodi.... thoooooo.... ththooooooooooo.... eshth istavagutte.... nodtiddage idenappa bardaithe evamma.... antha odona ansuthe.... that is.... change.... jana ega change keltare.... ALWA....?

ಹೀಗಿದ್ದರೆ ಚನ್ನ?


ಸಾಮಾನ್ಯವಾಗಿ ಟೀವಿಗಳಲ್ಲಿ ಪ್ರಸಾರ ಆಗೋ ಸಂದರ್ಶನಗಳನ್ನೂ ನೋಡುತ್ತಿರುತ್ತೇವೆ.ಅವುಗಳಲ್ಲಿ ಕೆಲವು ಖುಷಿ ಕೊಡುತ್ತೆ ,ಒಂದಷ್ಟು ಮುಗಿದರೆ ಸಾಕಪ್ಪ ಅಂತ ಅನ್ನಿಸುತ್ತೆ.ಸಂದರ್ಶನಗಳಲ್ಲಿ ಹೆಚ್ಚು ಇಂಪ್ರೆಸ್ ಮಾಡಿದ್ದೂ ಕರಣ್ ಥಾಪರ್ ಒಬ್ಬರು.ಬಿಡಿ ಅವರ ಸಂದರ್ಶನ ಅಥವಾ ಸರಳ ಮಾತುಕಥೆಎಲ್ಲರಿಗು ಅರ್ಥ ಆಗುವಂತಹುದಲ್ಲ ಕನ್ನಡ ಚಾನಲ್ ಗಳು ಆರಂಭ ಆದದ್ದೇ ಬಂತು, ಸಂದರ್ಶನದ ರುಚಿ ಸಾಮಾನ್ಯನಿಗೆ ಅದರಲ್ಲೂ ಹೆಣ್ಣುಮಕ್ಕಳಿಗೆ ಇದರ ಖುಷಿ ಸಿಕ್ತು .ಕರಣ್ ಥಾಪರ್ ಥರ ಕನ್ನಡದಲ್ಲಿ ಮಾತಿಗೆ ಅವಕಾಶಕೊಡದೆ ಇದ್ದವರಲ್ಲಿ ,ಅತೀ ಅತೀ ಎಂಬ ಅಗ್ಗಳಿಕೆ ಪಡೆದವರು ತೇಜಸ್ವಿನಿ ಶ್ರೀ ರಮೇಶ್. ಉದಯವಾಹಿನಿಯಲ್ಲಿ ಆಕೆ ಸಂದರ್ಶನಕ್ಕೆ ಬೆಚ್ಚಿ ಬೆದರದೆ ಇರದವರು ಯಾರು ಇಲ್ಲ ಅಂತ ಅನ್ನಬಹುದು.ಆಕೆಯ ವಾಗ್ಧಳಿಗೆ ವೀಕ್ಷಕನ ಕಥೆ ಬ್ಯಾಡ ಪಾಪ!! ಆಮೇಲೆ ಬಂದಂತಹವರು ದೀಪಕ್ ತಿಮ್ಮಯ್ಯ ಎನ್ನುವ ಸಂದರ್ಶಕ.ಆತನ ಸಂದರ್ಶನದ ಶೈಲಿ ತುಂಬಾ ಚೆನ್ನಾಗಿರುತ್ತದೆ ನಿಜ.ಆದರೆ ಆತ ಕನ್ನಡದ ಕರಣ್ ಥಾಪರ್,ಜಪ್ಪಯ್ಯ ಅಂದ್ರು ಮಾತಡೋನಿಗೆ ಹೆಚ್ಚು ಅವಕಾಶ ಕೊಡೋಕ್ಕೆ ಹೋಗಲ್ಲ.'ನೀವ್ ಯಾಕ್ ಹೀಗ್ ಮಾಡಿದ್ರಿ? ಇದ್ ತಪ್ಪಲ್ವಾ' ಅಂತ ಕೇಳುವ ಉತ್ಸಾಹದಲ್ಲೀ ಇರುತ್ತಾರೆ.ಇದು ವೀಕ್ಷಕನಿಗೆ ಹೆಚ್ಚು ಬೋರ್ ಉಂಟು ಮಾಡುತ್ತದೆ. ಸಂದರ್ಶನಕ್ಕೆ ಮಜಾ ತಂದವರು ಸುವರ್ಣ-ಶಶಿಧರ್ ಭಟ್ , ಈಟಿವಿ ಸದಾಶಿವ ಶೆಣೈ.ಸುವರ್ಣ ನ್ಯೂಸ್ ಚಾನಲ್ ನಲ್ಲಿ ಪ್ರಸಾರ ಆಗುವ ವಾಕ್ಪಥ -ಸರಳ,ಸುಗಮ,ಆಹ್ಲಾದ ಮಾತಿನ ಪಥ ..........ವಿಶ್ವೇಶ್ವರ ಭಟ್ ಮಾತಿನ ಶೈಲಿ ಜನಕ್ಕೆ ಖುಷಿ ಹಾಗು ಮಜಾ ಕೊಡುತ್ತೆ.ನಡೆದಾಡುತ್ತ ಮಾತಿನ ದಾರಿ ಸುಗಮ ಮಾಡುವ ಭಟ್ಟರು ತಮ್ಮ ಗಮನ ವೀಕ್ಷಕರ ಆಸಕ್ತಿ ಮೇಲೆ ನೆಟ್ಟಿರುತ್ತಾರೆ ಅನ್ನೋದು ಇಲ್ಲಿ ಬಹಳ ಮುಖ್ಯ.ಇಷ್ಟು ಸಂದರ್ಶನ ಮಾಡಿದ್ದರು ಅವರಿಗೂ ಇನ್ನು ಬೇಸರ ಹುಟ್ಟಿಲ್ಲ,ಜನರಿಗೂ ಆಸಕ್ತಿ ಕಡಿಮೆ ಆಗಿಲ್ಲ. ಜನಕ್ಕೆ ಯಾವುದೇ ಕಾರ್ಯಕ್ರಮ ಪದೇಪದೆ ನೋಡುವ ಖುಷಿ ಹುಟ್ಟಿಸುವ ಛಾತಿ ಇರೋದು ಆ ಕಾರ್ಯಕ್ರಮದ ನಿರೂಪಕನಿಗೆ.ಆತ ಈ ವಿಷ್ಯದಲ್ಲಿ ಸದಾ ಎಚ್ಚರ ಆಗಿರಬೇಕು.ಅಂದಂಗೆ ವಿಶ್ವೇಶ್ವರ ಭಟ್ರು ಆ ಪರಿ ನಡಿತಾರಲ್ಲ ಅವ್ರಿಗೆ ಕಾಲು ನೋಯೋದಿಲ್ವಾ ? ಈಗ ನನ್ನನ್ನು ಕಾಡ್ತಾಯಿರೋ ಪ್ರೆಶ್ನೆ ಇದೆ.ನೀವೇನು ಅಂತಿರಿ ಸರ್.

1 comments:


Anonymous said...
avru belige hothu jogging madode ilvanthe. yakendre vaarkkondsala stadiam suttha round hakbekalla. adke beda ankondidare. adke eno avra deha dinadinakke devalop agtane ide. swalp thellagadre modlintarane smart agbodenoooo... idu nan riquestu saar.

ಸ್ವಲ್ಪನಾದ್ರು ಗೊತ್ತಿರ ಬೇಕು


ಅಂದು ನಟಿ ರಮ್ಯ ಸಂದರ್ಶನ ನಡೆಯುತ್ತಿತ್ತು .ಈಶ್ವರ ದೈತೋಟ ಸಂದರ್ಶಕರು ಆಗಿದ್ರು.ಆಕೆಯ ಬಾಲ್ಯ,ಯವ್ವನದ ಆರಂಭ,ಸಿನಿಮಾಗೆ ಸಂಬಂಧ ಪಟ್ಟ ಕೆಲವು ಮಾತು,ಊಟಿಯಲ್ಲಿನ ಕೆಲವು ಅನುಭವಗಳು.......ಹೀಗೆ ಸಾಗಿತ್ತು ಪ್ರಶ್ನೆಗಳ ಸುರಿಮಳೆ.ಚಿತ್ರ ರಂಗದಲ್ಲಿ ಸಾಹಿತ್ಯ ಓದಿಕೊಂಡಿರೋ ಪೈಕಿ ಈಕೆಗೂ ಹೆಸರಿದೆ.ಪ್ರಸಿದ್ದ ನಿರ್ದೇಶಕರಾದ ಟಿ.ಎನ್.ಸೀತರಾಮ್ ಅವರ ಚಿತ್ರಕ್ಕೆ ಈಕೆಯನ್ನು ಆಯ್ಕೆ ಮಾಡಿದ್ದೂ ಇದೆ ಕಾರಣಕ್ಕೆಎಂಬುದಿಲ್ಲಿ ಜ್ಞಾಪಕ ಮಾಡಿಕೊಳ್ಳೋದು ಸರಿ.ಈಕೆ ಅದ್ಯಾವ ಪರಿ ಗಲಾಟೆ ಮಾಡಿಕೊಳ್ತಾ ಇದ್ಲು ಅಂದ್ರೆ ಅವ್ಳು ಅಂದ್ರೆ ಎಲ್ಲರಿಗು ಸ್ವಲ್ಪ ಕಿರಿಕಿರಿ .ಆದರೆ ಅವ್ಳು ಟಿ.ಎನ್.ಸೀತಾರಾಂ ಮಾತ್ರ ಅಲ್ಲ ಪ್ರಸಿದ್ಧ ಪತ್ರಕರ್ತ ಹಾಗು ಲೇಖಕ ರವಿ ಬೆಳಗೆರೆ ಅವರಿಗೂ ಕಿರಿಕಿರಿ ಮಾಡಿದ್ದಳು. ಕಾರಣ ಕೇಳಿದಾಗ ಜೀವಂತ ವ್ಯಕ್ತಿ ಯನ್ನು ಹೋಲುವ ಪಾತ್ರ ಮಾಡಲಾರೆ ಅಂತ ನೇರವಾಗಿ ಹೇಳಿದ್ದಳು. ವಿಷ್ಯ ಅದಲ್ಲ ಬಿಡಿ ನಾನೀಗ ಹೇಳೋಕೆ ಹೊರಟಿರೋದು....ವಿಜಯದಶಮಿ ಅಂದು ಈಶ್ವರ ದೈತೋಟ ಆಯುಧಪೂಜೆ ನೀವು ಬೋರ್ಡಿಂಗ್ ಸ್ಕೂಲ್ನಲ್ಲಿ ಇದ್ದಾಗ ಹೇಗೆ ಆಚರಿಸುತ್ತಾ ಇದ್ರಿ ಅಂದಾಗ ,ಅದು ಕ್ರಿಶ್ಚಿಯನ್ ಸ್ಕೂಲ್ ನನಗೆ ಹಬ್ಬಗಳು ಗೊತ್ತಿರಲಿಲ್ಲ ಅಂತ ಅಂದ್ಲು .ಓಕೆ ತಪ್ಪಲ್ಲ.ಆದರೆ ಆಕೆ ಈ ರಂಗಕ್ಕೆ ಬಂದು ಸಾಕಷ್ಟು ವರ್ಷಗಳು ಕಳೆದಿದೆ .ಮುಖ್ಯವಾಗಿ ಆಕೆ ಪಬ್ಲಿಕ್ ಪರ್ಸನಾಲಿಟಿ .ಮೊದಲು ಗೊತ್ತಿತ್ತೋ ಇಲ್ಲವೊ ಅದು ಬೇರೆ ವಿಷ್ಯ .ಆದ್ರೆ ಇಂತಹ ಸಂದರ್ಶನಕ್ಕೆ ಬಂದಾಗ ಆಕೆ ಕೆಲವೊಂದು ಅಂಶಗಳನ್ನೂ ತಿಳಿದು ಕೊಳ್ಳ ಬೇಕು.ಈಶ್ವರ್ ಆಯುಧ ಪೂಜೆ ಬಗ್ಗೆ ಕೇಳಿದರೆ ಈಕೆ ಅಂದು ನಮ್ಮ ಅಮ್ಮ ಬೇವು ಬೆಲ್ಲ ಕಳಿಸಿ ಕೊಡುತ್ತಿದರು ಅಂತ ಹೇಳಿದಳು.ಸಂದರ್ಶಕರು ಪದೇ ಪದೆ ಅದೇ ಪ್ರಶ್ನೆ ಕೇಳಿದರು ಆಕೆ ತಪ್ಪು ತಿದ್ದಿ ಕೊಳ್ಳಲಿ ಅಂತ .ಆದರೆ ಆಕೆ ಪದೇಪದೆ ಹೇಳಿದ್ದು ಆಯುಧ ಪೂಜೆಲಿ ಬೇವು ಬೆಲ್ಲ ತಿಂದ ಕಥೆಯನ್ನೇ !

2 comments:


Anonymous said...
bari heroin adre saladu samanyajnana annodu irabeku annodu noorakke nooru satya.
suma said...
ramyana article thumba channagide. adare avalu karnatakadalli hutti habbada visheshategallanne thiliddilla andare avalu huttiddu vestu.