ಸಾಕಷ್ಟು ಜನರು ನನ್ನ ಜೊತೆ ಮಾತಾಡುವುದಾಗಲಿ, ಚರ್ಚಿಸುವುದಾಗಲಿ ಮಾಡಲ್ಲ.. ಆ ವಿಷಯದಲ್ಲಿ ಸೇಫ್ ನಾನು.. ಗಂಭೀರ ಬರಹಗಾರರು ಅಂದ್ರೆ ... ಜಾಸ್ತಿ ದೂರ ನಾನು. ನೇರವಾಗಿ ಹೇಳೋದಾದರೆ ಪುಸ್ತಕ ಓದಿ ಖುಷಿ ಪಡೋದು ಬೇರೆ , ಅವರ ಬಾಲ ಆಗೋದು ಬೇರೆ! ಅದೇರೀತಿ ಕೆಲವು ಬರಹಗಾರರ ... ವ್ಯಕ್ತಿತ್ವಗಳ ಹೆಸರು ಹಿಡಿದು ಓಡಾಡುವವರ ಬಗ್ಗೆಯೂ ನನಗೆ ಆಸಕ್ತಿ ಇಲ್ಲ.ಒಮ್ಮೆ ಹೀಗೆ ಒಮ್ಮೆ ಒಬ್ಬಾತ ಸಿಕ್ಕಾಪಟ್ಟೆ ಗಂಭೀರ ಬರಹಗಳ ಮೂಲಕ ತನ್ನನ್ನು ಗುರುತಿಸಿಕೊಳ್ಳುವ ಪ್ರಯತ್ನ ಮಾಡಿದ್ದರು. ಆತನ ಯಾವುದೋ ಒಂದು ಬರಹಕ್ಕೆ ಸಮಯ ಇತ್ತು ಅಂತ ಲೈಕ್ ಹಾಕಿದೆ.. ಧನ್ಯವಾದ ಅರ್ಪಿಸಿದರು ಚಾಟ್ ಮೂಲಕ.. ಅದಾದ ಬಳಿಕ ನನ್ನ ಬರಹ ಕೇಳಿದರು.. ಯಾವುದೋ ಅದೂ ಸಕತ್ ಸರಳವಾದ.. ಇನ್ನು ಹೇಳ ಬೇಕೆಂದರೆ ಹಗುರವಾದ ಲೇಖನ ಅವರ ಇನ್ಬಾಕ್ಸ್ ನಲ್ಲಿ ಹಾಕಿದೆ. ಅಂದಿನಿಂದ ಅವರು ನನ್ನ ಜೊತೆ ಚಾಟ್ ಮಾಡೋದಿರಲಿ ಸಧ್ಯ ಲಿಸ್ಟ್ ನಿಂದ ಔಟ್.
ಬದುಕು ಸಾಕಷ್ಟು ಪಾಠ ಹೇಳಿದೆ ನನಗೆ , ಒಂದಂತೂ ಸತ್ಯ ಯಾವುದೇ ಸಂಗತಿ ಆಗಿರಲಿ ಷೋ ಆಫ್ ಮಾಡೋದು ನನ್ನ ಜಾಯಮಾನಕ್ಕೆ ಬಂದಿಲ್ಲ. ಪ್ರಾಯಶಃ ಅದೇ ಕಾರಣಕ್ಕೆ ನಾನು ಹೆಚ್ಚು ಜನಕ್ಕೆ ಇಷ್ಟ ಆಗಿಲ್ಲ :-) ಆರಂಭಿಕ ಹಂತದಲ್ಲಿ ಛೆ ನಾನ್ಯಾಕೆ ಹೀಗೆ ? ಯಾರಿಗೂ ನನ್ನ ಕಂಡ್ರೆ ಅದ್ಯಾಕೆ ಇಷ್ಟ ಇಲ್ಲ ಅನ್ನುವ ಒಂದು ಬೇಸರ ಇತ್ತು, ಆದರೆ ಈಗ ಆ ಭ್ರಮೆ, ಭಾವುಕತೆ ಇಲ್ಲವೇ ಇಲ್ಲ.. ಹಾಯಾಗಿ ಇದ್ದೀನಿ...!
ಮಲೆಗಳಲ್ಲಿ ಮದುಮಗಳು ಎರಡು ಬಾರಿ ಓದಿದೆ ಅಂತ ಒಬ್ಬರು ದೊಡ್ಡ ಬರಹಗಾರರು ಬರೆದುಕೊಂಡಿದ್ದರು. ಅದಾಗಲೇ ಇಪ್ಪತ್ತು ಸರ್ತಿ ಓದಿ ಬಾಯಿ ಪಾಠ ಆಗಿತ್ತು.. ಲೈಕ್ ಕೊಟ್ಟಿದ್ದಕ್ಕೆ ನಿಮಗೆ ಅರ್ಥ ಆಗಲ್ಲ ಬಿಡಿ ಇಂತಹ ಕಾದಂಬರಿಗಳು , ಏನಿದ್ರು ಎಂ ಕೆ ಇಂದಿರಾ ದಂತಹ ವು ಸರಿ ಅಂದ್ರು.. ತುಂಬಾ ಖುಷಿ ಆಯ್ತು ನನಗೆ ಆಗ.. ಆತ ಅಕಸ್ಮಾತ್ ನನ್ನನ್ನು ಚರ್ಚೆಗೆ ಸೂಕ್ತ ವ್ಯಕ್ತಿ ಅಂತ ತಿಳಿದಿದ್ದರೆ ಎಷ್ಟೆಲ್ಲಾ ಕಷ್ಟ ಆಗ್ತಾ ಇತ್ತು.. ಈ ವಿಷಯದಲ್ಲಿ ನಾನು ಚರ್ಚೆ ಮಾಡ ಬೇಕಿತ್ತು, ತಲೆ ಕೆಟ್ರು ಒಂದು ನಿರ್ಧಾರ, ಒಂದು ಅಸಂಶನ್ .... ಅಯ್ಯೋ ದೇವ್ರೇ... !