Wednesday, January 1, 2014

ಮಗ ನೀನು ಇಂತಹ ಪ್ಯಾಟ್ರನ್ ಗೆ ಲಾಯಕ್ಕಲ್ಲ .



ಹೊಸ ವರ್ಷದ ಒಂದು ದಿನ ಮುಕ್ತಾಯದ ಹಂತಕ್ಕೆ ಬಂದೆ ಬಿಡ್ತು :-)ಸಾಮಾನ್ಯವಾಗಿ ಹೊಸ ವರ್ಷ ಅಂದ್ರೆ ಆ ವರ್ಷವಿಡಿ ಮಾಡುವ, ಮಾಡಲೇಬೇಕಾದ, ಮಾಡುತ್ತೀವಿ  ಎಂದು ನಮ್ಮ ಬಗ್ಗೆ ನಾವೇ ನಂಬಿಕೆ ಹೊಂದಿ ಮಾಡುವ ಅನೇಕ ನಿರ್ಧಾರಗಳ ಬಗ್ಗೆ ಚಿಂತಿರಾಗಿ ನಾಳೆಯಿಂದ ಖಂಡಿತ ಮಾಡೇ ತೀರ್ತೀವಿ ಎಂದು ನಮಗೆ ನಾವೇ ಸಮಾಧಾನ ಮಾಡಿಕೊಳ್ಳುವ ದಿನವೇ ಹೊಸ ವರ್ಷದ ಮೊದಲ ದಿನದ ಸಂಜೆ .. ರಾತ್ರಿ !

ನನ್ನ  ಗೆಳತಿ ಒಬ್ಬಳು ಸಾಮಾನ್ಯವಾಗಿ ಆಕೆ ಓದುವ ವಿಷಯದಲ್ಲಿ ಪ್ರತಿವರ್ಷ ರೆಸಲ್ಯೂಶನ್ ತೆಗೆದುಕೊಳ್ಳುತ್ತಿದ್ದಳು . ಆದರೆ ಅದನ್ನು ಪೂರೈಸುವುದು ಉಹುಂ ಎಂದಿಗೂ ಇಲ್ಲ ಇಲ್ಲ ಮತ್ತು ಇಲ್ಲ . ಅವಳ ಜೊತೆ ಸೇರಿದ ಬಳಿಕ ನನಗು ಆ ಹುಚ್ಚು ಸ್ವಲ್ಪ ಮಟ್ಟಿಗೆ ಹತ್ತಿಕೊಂಡಿತ್ತು . ಅದನ್ನು ಬಿಡುವ ಸಾಹಸಕ್ಕೆ ಹೋಗದೆ ಇದ್ದರು ಅದರಿಂದ ಮುಕ್ತರಾಗುವ ಪ್ರಯತ್ನ ಮಾಡಲೇ ಇಲ್ಲ ನಾನು. ಆಗ ನಾನು ತೆಗೆದುಕೊಂಡ ಯಾವ ನಿರ್ಧಾರಗಳು ಸಹ ಒಮ್ಮೆಯೂ ಜಾರಿ ಮಾಡಲಾಗಲಿಲ್ಲ . ಈಗ ಅವೆಲ್ಲ ನೆನಪಿಸಿಕೊಂಡರೆ ನಗು ಬರುತ್ತದೆ. ಒಮ್ಮೆ ಅದೆಷ್ಟರ ಮಟ್ಟಿಗೆ ರೆಸಲ್ಯೂಶನ್ ಗಳ ಬಗ್ಗೆ ಗಮನ ಕೊಟ್ಟಿದ್ದೆ ಅಂದ್ರೆ ಆ  ವರ್ಷದ ಕೊನೆ ತಿಂಗಳ  ಕೊನೆವಾರವೆಲ್ಲಾ  ಮುಂದಿನ ವರ್ಷ ಏನೆಲ್ಲಾ ಕಡಿದು ಕಟ್ಟೆ  ಹಾಕ ಬೇಕು ಎಂಬುದರ ಬಗ್ಗೆಯೇ ಇತ್ತು. ಅದೆಷ್ಟು ದೊಡ್ಡ ಲಿಸ್ಟ್ ಅಂದ್ರೆ ನಾನು ನೆಟ್ಟಗೆ ಕೂತು ಓದಿದ್ದರೆ ಒಳ್ಳೆ ಅಂಕ ತಗೋ ಬಹುದಾಗಿತ್ತೇನೋ ? ಆದರೆ ಪಾಠ ಓದುವುದಕ್ಕೆ ನನಗೆಲ್ಲಿ ಪುರುಸೊತ್ತು !
ಮುಂದಿನ ವರ್ಷ ವು ಬಂತು ಅಂದು ಮೊದಲ ದಿನವೆಲ್ಲ ಮಾತು ಕಥೆ ಓಡಾಟ ನನ್ನದು  ಸಂಜೆ ಜ್ಞಾಪಕಕ್ಕೆ ಬಂದಿದ್ದು ನಾನುವಾರವೆಲ್ಲ ಕೂತು ಸಿದ್ಧ ಮಾಡಿದ ರೆಸಲ್ಯೂಶನ್ ಪಟ್ಟಿ . ಅದನ್ನು ಓ ದಿ ಸುಸ್ತಾಗಿ ಬಿಟ್ಟೆ . ತುಂಬಾ ಗಂಭೀರವಾಗಿ ಪಾಠ ಓದುವ ಜಾಯಮಾನ ನನ್ನದಲ್ಲ, ಆ ಲಿಸ್ಟ್ನಲ್ಲಿ ಓದುವ ಬಗ್ಗೆ , ಅದಕ್ಕೆ ಪೂರಕವಾದ ಉಪ ನಿರ್ಧಾರಗಳು, ಅದರಲ್ಲಿ ಮತ್ತೊಂದಷ್ಟು ಸಣ್ಣ ನಿರ್ಧಾರಗಳು ಇವೆಲ್ಲ ನೋಡಿ ತಲೆ ಕೆಡೋ ದೊಂದು ಬಾಕಿ. ಇನ್ನು ಪರೀಕ್ಷೆ ಬಗ್ಗೆ ನನಗೆ ನೆನಪಿಗೆ ಬರ್ತಾ ಇದ್ದುದು ಹಾಲ್  ಟಿಕೆಟ್ ತೆಗೆದು ಕೊಳ್ಳುವ ಸಮಯದಲ್ಲಿ ನಾನು ಎಡಗೈ ಯಲ್ಲಿ ಬರೆಯೊದು. ನನ್ನಂತಹವರಿಗೆ ಸರ್ಕಾರ ಒಂದು ಗಂಟೆ ಹೆಚ್ಚಿಗೆ ನೀಡಿರುತ್ತೆ ಟೈಮ್ . ಆದರೆ ಅಂತಹ ಯಾವ ಸೌಲಭ್ಯ ನಾನು ಪಡೆಯಲೇ ಇಲ್ಲ . ಯಾಕೆಂದ್ರೆ ಕೊಟ್ಟ ಏಳು ಪ್ರಶ್ನೆಯಲ್ಲಿ ನಾಲ್ಕಕ್ಕೆ ಸರಿ ಉತ್ತರ, ಎರಡಕ್ಕೆ ಉತ್ತರ, ಒಂದಕ್ಕೆ ಭಾಗಶಃ ಉತ್ತರ ಬರೆಯುವಂತಹ ಪ್ರತಿಭೆ. ಇಡೀ ಪರೀಕ್ಷೆ ರೂಂ ನಲ್ಲಿ ನಾನು ಅಷ್ಟು ಸ್ಪೀಡ್ ಬರಿತಾ ಇದ್ದುದು . ಇರೋ ಟೈಮ್ ನಲ್ಲಿ ಒಂದು ಗಂಟೆ ಮೊದಲು ಎದ್ದು ಬರ್ತಾ ಇದ್ದೆ. ಅಂತಹವಳಿಗೆ  ಒಂದು ಗಂಟೆ ಹೆಚ್ಚು !

ಮೊದಲೇ ಹೇಳಿದಂತೆ ಅಂದು ನನ್ನ ಹೊಸವರ್ಷದ ನಿರ್ಧಾರಗಳ ಪಟ್ಟಿ ಓದಿದ ಬಳಿಕ ಒಂದು ಮುಖ್ಯ ನಿರ್ಧಾರಕ್ಕೆ ಬಂದೆ . ಮುಖ್ಯವಾಗಿ ನನಗೆ ನಾನೇ ಸಮಾಧಾನ ಮಾಡಿಕೊಂಡೆ ..
ಮಗ ನೀನು ಇಂತಹ ಪ್ಯಾಟ್ರನ್ ಗೆ ಲಾಯಕ್ಕಲ್ಲ . ಬದುಕು ಬಂದಂಗೆ ಬದುಕೋಳು  ನೀನು.. ತೀರಾ ಇಂತಹ ಕಟ್ಟುನಿಟ್ಟಿನ ಜೀವನ ನಿನಗೆ ಸರಿ ಹೊಂದಲ್ಲ . ಬೀ  ಕೂಲ್ . ನೀ ಏನೇ ಮಾಡಲು ಹೋದರು ನೀನುಬದಲಾಗಲ್ಲ. ಇದ್ದಂಗೆ ಇದ್ದು ಬಿಡು . ಅಯ್ಯೋ ಹಾಗೆ ಇರ ಬಹುದಿತ್ತು ಹೀಗೆ ಇರ ಬಹುದಿತ್ತು ಅನ್ನೋ ಫೀಲಿಂಗ್ ಕಾಡಲ್ಲ .. ಲೈಫ್ ನಲ್ಲಿ ಜೀವನ ತುಂಬಾ ಮುಖ್ಯ .. ಅಂತ ಹೇಳಿಕೊಂಡೆ . ಹಾಗೆ ಇರೋಕೆ ಪ್ರಯತ್ನ ಪಟ್ಟಿದ್ದೀನಿ . ಅತಿ ಕೆಟ್ಟ ಸಾಲುಗಳು, ಅಪಮಾನಗಳು ಯಾವುದು ನನ್ನ ನಡುಗೆಯನ್ನು ಕುಗ್ಗಿಸಿಲ್ಲ ನನ್ನ ಆ ನಿರ್ಧಾರ ಫೈಟಿಂಗ್ ಗುಣವನ್ನು ಹೆಚ್ಚು ಬೆಳಸಿದೆ ... ನಾನಿನ್ನು ಇದ್ದೇನೆ !! 

No comments:

Post a Comment