ಕೆಲವು ಘಟನೆಗಳು ನಮ್ಮನ್ನು ತೀವ್ರವಾಗಿ ಕಾಡುತ್ತಲೇ ಇರುತ್ತದೆ.. ಒಮ್ಮೆ ನಾನು ಈ ವಿಷಯದ ಬಗ್ಗೆ ಬರೆದಿದ್ದೆ ಅಂತ ನೆನಪು.. ಪ್ರಾಯಶಃ ನನ್ನ ಇನ್ನೊಂದು ಬ್ಲಾಗ್ 'ವಾಸುದೇವ' ದಲ್ಲಿ ಬರೆದಿದ್ದರು ಬರೆದಿರ ಬಹುದು. ಆದರು ಮತ್ತೊಮ್ಮೆ ಆ ವಿಷ್ಯ ಬರೆಯಲೇ ಬೇಕು ಅಂತ ಅನ್ನಿಸಿದೆ..
ನಾನು ಪ್ರಿಯಾಂಕ ಪತ್ರಿಕೆಯಲ್ಲಿ ರೆಗ್ಯುಲರ್ ... ಆಗಿದ್ದಾಗ ನನ್ನ ಕಲೀಗ್ ಅವರ ಗಂಡನ ಮನೆಯ ಕಡೆಯ ಕಥೆ ಹೇಳ್ತಾ ಇರೋರು.. ಮಂಡ್ಯದ ಹೆಣ್ಣುಮಗಳ ಆಕೆ.ಮದುವೆ ಆದದ್ದು ಕುಣಿಗಲ್ ಗಂಡಿನ ಜೊತೆ..ಅವರನ್ನು ಸದಾ ರೇಗಿಸೋ ನನ್ನ ಗುಣವನ್ನು ಆ ಹೆಣ್ಣುಮಗಳು ಪ್ರೀತಿಯಿಂದಾ ಸ್ವೀಕರಿಸಿ ಬಿಟ್ಟಿದ್ದರು..
ಆಕೆಯ ಗಂಡನ ಮನೆಯವರಲ್ಲಿ ಒಬ್ಬರು ಸಾಕಷ್ಟು ಜಮೀನು ಹೊಂದಿರುವ ಭೂ ಮಾಲೀಕರು. ಶುದ್ಧಾನುಶುದ್ಧ ಜುಗ್ಗ ಸಂಸಾರ . ಆ ದಂಪತಿಗಳಿಗೆ ಗಂಡು ಮಕ್ಕಳು .. ಆ ಮಕ್ಕಳು ವಯಸ್ಸಿಗೆ ಬಂದ ಸ್ವಲ್ಪ ದಿನದಲ್ಲೇ ಒಂದು ಬಗೆಯ ಕಾಯಿಲೆಯಿಂದ ಸತ್ತು ಹೋಗ್ತಾ ಇದ್ರು. ಅಂತಿಮವಾಗಿ ಒಬ್ಬನಿದ್ದ ಅವನಿಗೆ ನನ್ನ ಕಲೀಗ್ ಕಸಿನ್ ನ್ನು ಕೊಟ್ಟು ಮದುವೆ ಮಾಡಿದ್ರು.. ಆತನಿಗೂ ಸಹ ಮದುವೆಯಾದ ಸ್ವಲ್ಪ ದಿನಕ್ಕೆ ಆತನ ಅಣ್ಣಂದಿರಿಗೆ ಬಂದಂತಹ ಕಾಯಿಲೆ ಬಂದು ಸತ್ತೆ ಹೋದ ... ನೇರವಾಗಿ ಹೇಳ ಬೇಕು ಅಂದ್ರೆ ಆತನ ಹೆಂಡತಿ ಕನ್ಯೆಯಾಗಿಯೇ ಉಳಿದು ಬಿಟ್ಟಳು ಮದುವೆ ಆದರು!
ಸರಿ ದಫನ್ ಸಮಯಕ್ಕೆ ನನ್ನ ಕಲೀಗ್ ಹೋಗಿ ಬಂದ್ರು , ಅದಾದ ಬಳಿಕ ಬದುಕಲ್ಲಿ ಏನೇನು ಸಿಗದ ಆತನ ಹೆಂಡತಿಗೆ ಜಮೀನು ಕೊಡಿಸುವ ಪ್ರಯತ್ನ ಮಾಡಿದರು ,..ಆದರೆ ಆ ದಂಪತಿಗಳು ಸ್ವಲ್ಪ ಜಮೀನು ಕೊಡಲು ಸಮ್ಮತಿಸಲೇ ಇಲ್ಲ...ತುಂಬಾ ಬೇಜಾರಾಗಿದ್ದರು ನನ್ನ ಕಲೀಗ್..
ನಾನು ಯಾಕ್ರೀ ಇಂತಹ ಕಾಯಿಲೆ ಬಂದದ್ದು,ಈಗಂತೂ ಎಷ್ಟೆಲ್ಲಾ ಒಳ್ಳೆಯ ವೈದ್ಯಕೀಯ ಸೌಲಭ್ಯ ಇದೆ ಅಂತ ಕೇಳಿದಾಗ ಅವರೊಂದು ಘಟನೆ ಹೇಳಿದರು...
ಆಮನೆಯ ಯಜಮಾನ ಅಂದ್ರೆ ಅಕಾಲಿಕ ಮರಣ ಹೊಂದಿದರಲ್ಲ ಅವರ ತಂದೆಗೆ ಬೇಕಾದಷ್ಟು ಜಮೀನು ಇತ್ತು.. ಹಾಕಿದ ಬೆಳೆ ಕೈಗೆ ಚೆನ್ನಾಗೆ ಬರುತ್ತಿತ್ತು..ಆತನ ತೋಟದಲ್ಲಿ ಬಿದಿರಿನ ಮೆಳೆ ಇತ್ತು . ಅದರಲ್ಲಿ ಒಮ್ಮೆ ಒಂದಷ್ಟು ಕೋತಿಗಳ ಫ್ಯಾಮಿಲಿ ಬಂದು ಸೇರಿ ಬಿಡ್ತು. ಅವುಗಳಿದ್ದ ಕಡೆ ತಂಟೆ ಇದ್ದದ್ದೇ.. ಇದ್ದ ಬೆಲೆಯನ್ನು ನಾಶ ಮಾಡುತ್ತಿತ್ತು.. ಆ ರೈತ ಸಿಟ್ಟಿಗೆದ್ದ.. ಒಂದು ದಿನ ಸಮಯನೋಡಿ ಆ ಮೇಲೆಗೆ ಒಂದರ್ಥದಲ್ಲಿ ಕೋಟೆಯಂತೆ ಕಟ್ಟಿ ಅದಕ್ಕೆ ಚೆನ್ನಾಗಿ ಸೀಮೆ ಎಣ್ಣೆ ಸುರಿದು ಬೆಂಕಿ ಹತ್ತಿಸಿ ಬಿಟ್ಟ.. ಅಲ್ಲಿಂದ ಯಾವ ಕೋತಿಯು ಹೊರ ಬರದಂತೆ ಮಾಡಿದ್ದ ಆತ.. ಆ ಬೆಂಕಿಗೆ ಅಲ್ಲಿದ್ದ ಕೋತಿಗಳು ಉರಿದು ಬೂದಿ ಆದವು..ಅದಾದ ಸ್ವಲ್ಪ ವರ್ಷಗಳ ಬಳಿಕ ಇವರ ಮನೆಯಲ್ಲಿ ವಯಸ್ಸಿಗೆ ಬಂದ ಯುವಕ ಕೋತಿಯಂತೆ ಕುಬ್ಜನಾಗಿ ವಿಚಿತ್ರ ಕಾಯಿಲೆಯಿಂದ ನರಳಿ ಸತ್ತು ಹೋದ.. ಇದು ಕೊನೆ ಮಗನ ತನಕ ನಡೆಯಿತು..
ದೇವರು , ದೆವ್ವ, ಶಾಪ, ಪುನರ್ ಜನ್ಮ ಅಂತ ನಂಬಿಕೆ ಇಲ್ಲದ ಓದುಗರು ಇದನ್ನು ಯಾವ ರೀತಿ ಬೇಕಾದರೂ ತಗೋ ಬಹುದು, ಆದರೆ ಆಕೆ ಹೇಳಿದ ಸಂಗತಿ ಆದ ಅನೇಕ ವರ್ಷಗಳ ಬಳಿಕ ಈ ಮನೆಯಲ್ಲಿ ಸಂತಾನವೇ ನಾಶ ಆಯ್ತು ಅದಂತೂ ಸತ್ಯ..
ಕೆಲವು ವಿಷಯಗಳು ಸಾಮಾನ್ಯ ಜ್ಞಾನಕ್ಕೂ ನಿಲುಕದ್ದು
ReplyDeleteಇದು ನಂಬಲೇಬೇಕಾದ ನೈಜ ಸಂಗತಿ. ಇಂತಹ ಹಲವಾರು ಅಚ್ಚರಿಯ ಆದರೆ ಸತ್ಯವಾದ ಘಟನೆ ಆಗಾಗ ವರದಿಯಾಗುತ್ತಲಿರುತ್ತದೆ.
ReplyDeletehttp://santasajoy.blogspot.in/ ನಲ್ಲಿ ಇಂತಹ ಮತ್ತಷ್ಟು ಲೇಖನಗಳನ್ನು ನಾನು ನಿರೀಕ್ಷೀಸುತ್ತೇನೆ.