
ಕಳೆದ ವಾರ ಮಂಗಳೂರಿನ ಪಬ್ ದಾಳಿ ಅತ್ಯಂತ ಖಂಡನೀಯ,ಇದು ಹೇಯಕರ ಕೃತ್ಯ,ಧರ್ಮಾಂಧರ ಅತಿರೇಕದ
ಪರಾಕಾಷ್ಠೆ, ಅದು ಇದು ಅಂತೆಲ್ಲ ಪ್ರಜ್ಞಾವಂತ ನಾಗರೀಕ ಸಮಾಜದ ಕುಡಿಗಳು ಕಿರುಚಾಟ ನಡೆಸಿದರು.
ಆ ಘಟನೆ ಕಂಡಾಗ ಅತೀವ ದುಃಖಆಯಿತು.ಕಾರಣ ಇಷ್ಟೇ ಮನುಷ್ಯ ಎಷ್ಟು ಮುಂದುವರೆದರೇನು ಗಂಡಸಲ್ಲಿ ಅಡಗಿರುವ ಆ ಕ್ರೌರ್ಯ ಶತಶತಮಾನಗಳು ಕಳೆದರೂ ಬದಲಾವಣೆ ಕಂಡಿಲ್ಲ.ನಿಜ ಮೊದಲು ಇರುವಷ್ಟು ಅದರ ಓಘ ಈಗ ಇರದೇ ಇರಬಹುದು,ಆದರೆ ಮೂಲ ಸ್ವರೂಪ ಆಗಾಗ ಜಾಗೃತ ಆಗುತ್ತಲೇ ಇರುತ್ತದೆ.ರಾಮನ ನಾಡು ಎನ್ನುವ ಖ್ಯಾತಿ ಪಡೆದಿರುವ ಈ ಭಾರತ ಭೂಮಿಯಲ್ಲಿ ಹೆಣ್ಣುಮಕ್ಕಳನ್ನು ಗೌರವಿಸುವುದು ಆ ಪಕ್ಕಕ್ಕೆ ಇಡಿ ,ಅವರನ್ನು ಸಾರ್ವಜನಿಕ ಸ್ಥಳಗಲ್ಲಿ ಹಿಗ್ಗಾಮುಗ್ಗಾ ಹೊಡೆಯುವುದು ಅಂದರೆ ಏನು ಅರ್ಥ? ಅವರು ಅಶ್ಲೀಲವಾಗಿ ಡ್ಯಾನ್ಸ್ ಮಾಡುತ್ತಿದ್ದರು,ಡ್ರಗ್ಸ್ ತಗೊಂಡಿದ್ದರು,ಇಂತಹ ಕೆಲಸ ಮಾಡಿದರೆ ನಮ್ಮ ಸಹೋದರಿಯರಾದರು ಸರಿಯೇ ನಾವು ಸುಮ್ಮನೆ ಬಿಡುವುದಿಲ್ಲ.. ಹಾಗೆ ಹೀಗೆ ಅಂತ ರಾಮನ ಮಕ್ಕಳು ಆ ಪರಿ ಕಿರುಚಾಟ ನಡೆಸಿದರು.ಆದರೆ ಅವರಿಗೆ ಹೊಡೆಯುವ ಹಕ್ಕು ಕೊಟ್ಟವರು ಯಾರು? ಡ್ರಗ್ಸ್ ವಿಷಯಕ್ಕೆ ಬರುವುದಾದರೆ ಅವರು ಡ್ರಗ್ಸ್ ತೆಗೆದು ಕೊಳ್ಳುವುದಕ್ಕೆ ಅವಕಾಶ ಮಾಡಿದವರು ಯಾರು? ಆ ಪಬ್ ಯಜಮಾನ ತಾನೆ? ಅವನನ್ನು ಮೊದಲು ಹೊಡೆಯದೆ ನೇರವಾಗಿ ಗಂಡುಸಿಂಹಗಳು!ಹೆಣ್ಣುಮಕ್ಕಳನ್ನು ಎಳೆದು ಅಸಹ್ಯಕರ ರೀತಿಯಲ್ಲಿ ಅಬ್ಬ! ಆ ದೃಶ್ಯ ನೆನೆದರೆ ಈಗಲೂ ಮೈ ಜುಮ್ !ಅಂತ ಅನ್ನುತ್ತೆ, ಒಬ್ಬ ಹೆಣ್ಣುಮಗಳು ಎರ್ರಾಬಿರ್ರಿ ಓದಿದರೆ,ಮತ್ತೊಬ್ಬಳು ಆ ಗಂಡು ಸಿಂಹದ ಏಟಿಗೆ ಕುಸಿದು ಬಿದ್ದಳು.ಇಲ್ಲಿ ಆಗ ಬೇಕಾಗಿರುವುದು ಪುರುಷ ತನ್ನ ಮೂಲ ಗುಣ ಬಿಟ್ಟು ಹೆಣ್ಣನ್ನು ಅರ್ಥ ಮಾಡಿಕೊಳ್ಳುವ ಪ್ರಯತ್ನ ಮಾಡಿಕೊಳ್ಳಬೇಕು.ಪ್ರಾಯಶ: ಈ ರೀತಿ ಹಿಂಸೆ ನೀಡುವ ಪುರುಷಸಿಂಹಗಳು ಹೆಣ್ಣಿ ಬೆಳವಣಿಗೆ,ಅವಳ ಸ್ವಾತಂತ್ರ ,ಜೀವನ ಶೈಲಿಯಲ್ಲಿನ ಮಾರ್ಪಾಟು ಒಪ್ಪಿಕೊಳ್ಳಲು ಇಷ್ಟ ಪಡುತ್ತಿಲ್ಲ.ಅದರ ಪರಿಣಾಮ ಇಂತಹ ದುಷ್ಕ್ರ್ಯುತ್ಯಗಳ ಹುಟ್ಟಿಗೆ ಕಾರಣ.ಯಾವ ಅಂಶವು ಇದರ ಮುಂದೆ ಇಲ್ಲ.ಎಂದು ಆತ ಹೆಣ್ಣನ್ನು ಅರ್ಥ ಮಾಡಿಕೊಳ್ಳುತ್ತಾನೋ ಆಗ ಕೌಟುಂಬಿಕ ,ಸಾರ್ವಜನಿಕ ಹಿಂಸೆಗಳಿಗೆ ಅಂತ್ಯ ಕಾಣುತ್ತದೆ.ಪುರುಷರು ಬದಲಾಗುತ್ತರಾ?
No comments:
Post a Comment