ತುಂಬಾ ವಿಷಯಗಳಲ್ಲಿ ಅನ್ನಿಸುವ ಅನೇಕ ಸಂಗತಿಗಳು ,ಅನೇಕ ಬಾರಿ ನಾವು ತೆಗೆದುಕೊಳ್ಳುವ ನಿರ್ಧಾರಗಳು ಗೊತ್ತಿಲ್ಲದೇ ತಪ್ಪಾಗಿರುತ್ತೆ. ಅದರ ಬಗ್ಗೆ ಹೆಚ್ಚು ಹೇಳುವ ಅಗತ್ಯವಿಲ್ಲ. ನಾಳೆ ಪುಸ್ತಕ ಬಿಡುಗಡೆ ಕಾರ್ಯಕ್ರಮ ಇದೆ ಹೋಗ ಬೆಕು. ಮೂರು ಹುಡ್ಗರ ಪುಸ್ತಕ ಹೊರಬರ್ತಾ ಇದೆ. ಪ್ರವರ, ರಾಜೇಂದ್ರ ಮತ್ತು ಶರತ್ .ತು೦ಬಾ ಸರ್ತಿ ಕರೆದರು.ಯಾಕೆ ನಾನು ಹೀಗಾದೆ ಅಂತ ಅನ್ನಿಸುತ್ತೆ ಒಮ್ಮೊಮ್ಮೆ.. ಪುಸ್ತಕ ಬಿಡುಗಡೆಯ ಮಾಹಿತಿ ಸಿಕ್ಕರೆ ಸಾಕು ಪರಿಚಯಸ್ಥರು ಕರೆಯದೆ ಇದ್ರೂ ಹೋಗಿ ಪುಸ್ತಕ ಕೊಂಡು ಓದುವ ಖುಷಿ ನನಗೆ . ಯಾಕೋ ಕೆಲವು ವರ್ಷಗಳಿಂದ ಕರೆದರೆ ಅದರಲ್ಲೂ ಹೆಚ್ಚು ಬಾರಿ ಕರೆದರೆ ಮಾತ್ರ ಹೋಗುತ್ತೇನೆ . ಹೋದಾಗಲು ಅವ್ಯಕ್ತವಾದ ಭಯ ಬಾಧಿಸುತ್ತಲೇ ಇರುತ್ತೆ ಅಕಸ್ಮಾತ್ ಅಪಮಾನ ಆದ್ರೆ, ಹಾಗಾದರೆ, ಹೀಗಾದರೆ ಅಂತ . ಅವುಗಳ ಬಗ್ಗೆ ಈಗ ಹೆಚ್ಚು ಹೇಳಲಾರೆ, ಮನಸ್ಸಿಗೆ ಸಾಧ್ಯ ಆದ ದಿನ ಬಿಚ್ಚಿಡುತ್ತೇನೆ .ಯಾಕೋ ಕೆಲವು ಬಾರಿ ಸಾವಿನ ಗಾಳಿ ಪಕ್ಕದಲ್ಲೇ ,ಜೊತೆಯಾಗಿ, ಬೆಂಗಾವಲಾಗಿ ರುತ್ತೇನೋ ನನಗೆ ಅಂತಾ ಅನ್ನಿಸಿದೆ . ಅದು ಸಹಜ ಕೆಲವು ಘಟನೆಗಳು, ಆಕಸ್ಮಿಕಗಳು ಮನದ ಗಟ್ಟಿತನ ಮೆತ್ತಗೆ ಮಾಡಿ ಬಿಡುತ್ತದೆ .
ಇತ್ತೀಚೆಗೆ ಕಂಡ ಸಾವಿನಲ್ಲಿ ಅತಿ ಹೆಚ್ಚು ನೋವು ಕೊಟ್ಟಿದ್ದು ನನ್ನ ರಕ್ತ ಸಂಬಂಧಿ ಮಗನ ಸಾವು . ಬಡತನ , ಬಡತನ . ಮಗನ ವಿದ್ಯೆಯು ಅಪ್ಪ ಅಮ್ಮಂದಿರನ್ನು ಅಕರಾಸ್ಥೆಯಿಂದ ಸಾಕುವಷ್ಟಿತ್ತು . ಜೋತೆಗೊಬ್ಬಳು ತಂಗಿ . ಎಲ್ಲ ಸರಿಯಾಗಿ ಇದ್ದಿದ್ದರೆ ಆ ಹುಡುಗನ ಬದುಕು ಮತ್ತು ಮನೆಯವರ ಸ್ಥಿತಿ ಚೆನ್ನಾಗಿರುತ್ತಿತ್ತು . ಆದರೆ ಹಾಗೆ ಆಗದೆ ನದಿಯಲ್ಲಿ ಕಾಲು ಜಾರಿ ಬಿದ್ದು ಸತ್ತು ಹೋದ . ಇಂತಹದ್ದೇ ಒಂದು ಸಾವು ಆ ಹುಡುಗ ತುಂಬಾ ಚಿಕ್ಕವ.. ನಾವು ಆತನಿಗಿಂತ ಚಿಕ್ಕವರು . ಬಡ ತಾಯಿತಂದೆಗೆ ಮೂರು ಜನ ಮಕ್ಕಳಲ್ಲಿ ಇವ ದೊಡ್ಡವ . ಗೆಳೆಯರ ಜೊತೆ ಆಡಲು ಹೋದಾಗ ನೀರು ಪಾಲು..
ಮಕ್ಕಳನ್ನೇ ಆಸ್ತಿ ಎಂದು ನಂಬಿರುವ ಆ ತಾಯಿತಂದೆಗೆ ಎಂತಹ ಆಘಾತ !
ಬದುಕೆಂದರೆ ಇಷ್ಟೇ ಇಂತಿಷ್ಟೇ ಎಂದು ಹೇಳೋಕೆ ಆಗಲ್ಲ .
1. ಕೆಲ ವ್ಯಕ್ತಿಗಳಿಗೆ ಪರ ಹಿಂಸೆಯೇ ವಿಕೃತ ವಿನೋದ. ಪುಸ್ತಕ ಬಿಡುಗಡೆಯಂತಹ ಸಾರಸ್ವತ ಕಾರ್ಯಕ್ರಮಗಳಲ್ಲೂ ಇಂತವರು ಕೆಣಕಿ, ಮನ ನೋಯಿಸಿ ಅದೇನನ್ನು ಅವರು ಸಾಧಿಸುತ್ತಾರೋ ನಾನೂ ಕಾಣೆ!
ReplyDelete2. ಕೈಗೆ ಬಂದ ಮಗ, ಇನ್ನೇನು ದುಡಿದು, ಸಂಸಾರಕ್ಕೆ ಆಧಾರವಾಗುತ್ತಾನೆ ಎನ್ನುವಾಗ ಇಂತಹ ಅಕಾಲ ಸಾವುಗಳು ಉಂಟು ಮಾಡುವ ಧಾರುಣ ಪರಿಣಾಮ ಮಾತಿಗೆ ನಿಲುಕದ ದುರ್ವಾರ್ತೆ.