ಬದುಕಲ್ಲಿ ಯಾರು ಕಿವಿ ಮುಚ್ಚಿದರು ನಮಗೆ ಚಿಂತೆ ಇರ ಬಾರದು ಆ ಮಟ್ಟಿಗೆ ನಮ್ಮನ್ನು ನಾವು ಬೆಳೆಸಿಕೊಳ್ಳ ಬೇಕು. ಬಿಡಿ ಆ ವಿಷಯ ಬೇಡ. ನಾನು ನನ್ನ ಪೇಪರ್ ಗೆ ಸಂಬಂಧಿಸಿದಂತೆ ಅನೇಕ ವೆಬ್ ಸೈಟ್ ಗಳನ್ನು ಸರ್ಫ್ ಮಾಡುತ್ತಲೇ ಇರುತ್ತೇನೆ. ಬಹಳಷ್ಟು ಸಂಗತಿಗಳು ಹೊಸಹೊಸ ರೀತಿಯಲ್ಲಿ ವ್ಯಕ್ತವಾಗಿರುತ್ತದೆ, ಒಂದಷ್ಟು ಅಪರೂಪ ಅನ್ನಿಸುವಂತಹ ರೀತಿಯಲ್ಲಿ ತಿಳಿಸಲಾಗಿರುತ್ತದೆ. ಹೀಗೆ ಒಮ್ಮೆ ನಾನು ಒಂದು ಸೈಟ್ ನಲ್ಲಿ ಆಸ್ಮಿಕವಾಗಿ ಹೋದೆ , ಅಂದ್ರೆ ಜಾಯಿನ್ ಆದೆ.. ಅದರಲ್ಲಿ ಜಾಯಿನ್ ಆದ ಸ್ವಲ್ಪ ಹೊತ್ತಿನಲ್ಲೇ ಅಪಾರ ಸಂಖ್ಯೆಯ ರಿಕ್ವೆಸ್ಟ್ ಗಳು. ಇಲ್ಲಿ ಗಂಡು ರಿಕ್ವೆಸ್ಟ್ಗಳು ಹೆಚ್ಚು ಹಾಗೆನ್ನುವುದಕ್ಕಿಂತ ಅವರೆ ಕಳುಹಿಸದ್ದು ಅಂತ ಹೇಳೋ ಪ್ರಯತ್ನ ಮಾಡುತ್ತಿದ್ದೇನೆ . ತುಸು ಆಶ್ಚರ್ಯ ನನಗೆ. ಕಾರಣವಿಷ್ಟೆ ಅಲ್ಲಿ ಹೋದಾಗ ಅಂದ್ರೆ ಆ ಸೈಟ್ ನಲ್ಲಿ ನಾನು ಇದ್ದ ಹಲವು ದಿನಗಳಲ್ಲೇ ಆಧುನಿಕ, ಅದರಲ್ಲೂ ಮೇಲ್ಮಧ್ಯಮ, ಶ್ರೀಮಂತ ವರ್ಗದ ಗಂಡು ಮಕ್ಕಳ , ಹಪಹಪಿ, ಭಾವನೆಗಳು, ತುಂಬಾ ಆಶ್ಚರ್ಯ ತಂದಿತು. ಎರಡು ತುತ್ತಿಗಾಗಿ, ನೆಲೆ ಕಂಡುಕೊಳ್ಳಲು ಪರದಾಡುತ್ತಿರುವ ನನ್ನ ಅಪಾರ ಸಂಖ್ಯೆ ಗೆಳೆಯರ ವಿಷಯ ಇವರ ಈ ಅಂಶಗಳ ಮುಂದೆ ಅದರಲ್ಲೂಇವರ ಒದ್ದಾಟ,ಒಂಟಿತನ ಮನದ ದುಗುಡ ಅತ್ಯಂತ ವಿಸ್ಮಯ ಅನ್ನಿಸಿತ್ತು. ಎಲ್ಲರೂ ಐವತ್ತರ ಗಡಿ ದಾಟಿದವರು ಅತವಾ ಸಮೀಪದವರು. ಹೆಚ್ಚಾಗಿ ಅವರ ಆಸೆ ಆಸಕ್ತಿ, ಗೆಲುವು , ಯಶಸ್ಸು ಎಲ್ಲವೂ ಒಂದೆ ತೆರನಾತ್ತು. ಹಣ, ಪ್ರತಿಷ್ಟೆ ಎಲ್ಲವೂ ಮಧ್ಯಮ ಮತ್ತು ಸಾಧಾರಣ ಇನ್ ಕಂ ನವರು ಬೆರಳು ಕಚ್ಚುವಂತೆ ಇದ್ದರೂ ಅವರ ಆ ಫೀಲಿಂಗ್ಸ್ . ಹೆಚ್ಚಾಗಿ ಅವರು ತಮ್ಮ ಬಾಳಸಂಗಾತಿಯ ಬಗ್ಗೆ ಬೇಸರ ಹೊಂದಿದ್ದರು. ಇದು ನಾಟಕ ಎಂದು ತಿಳಿಯುವ ಅಗತ್ಯ ಇಲ್ಲ. ಅವರ ಬದುಕು ಇರುವುದೆಲ್ಲವ ಬಿಟ್ಟು ಅನ್ನುವ ಮನಸ್ಥಿತಿ ತಲುಪಿತ್ತು. ಅವರಿಗೆ ಹೆಂಡತಿಯ ಪರ್ಸನಲ್ ಅಟೆಂಡೆನ್ಸ್ ಬೇಕಾಗಿತ್ತು ಈಗ, ಆದರೇ ಆಕೆಯೂ ಈಗಾಗಲೇ ಮಧ್ಯ ವಯಸ್ಕಳಾಗಿದ್ರಿಂದ ಗಂಡನ ಬಗ್ಗೆ ಗಮನ ಕೊಡುವುದಕ್ಕಿಂತ ತನ್ನ ಕೆರಿಯರ್ , ಫ್ರೆಂಡ್ಸ್ ಹೀಗೆ ತನ್ನದೇ ಆದ ಲೋಕದಲ್ಲಿ ಕೋಟೆ ಕಟ್ಟು ಕೊಂಡಿದ್ದಳು ಜೊತೆ ಗಂಡನ ಬಗ್ಗೆ ಅನುಮಾನದ ಹುತ್ತವನ್ನು ಸಹ ಬೆಳೆಸಿಕೊಂಡಿದ್ದಳು (ಇದು ಒಬ್ಬರ ಸಂಗತಿಯಲ್ಲ ಬಹುತೇಕ ಎಲ್ಲರದ್ದು ). ಎಲ್ಲವೂ ಇದ್ದರೂ ಏನೋ ಕೊರತೆಯನ್ನು ಅನುಭವಿಸುತ್ತಿದ್ದ ಇವರೆಲ್ಲಾ ಹೊಸ ವರ್ಗದ ಪ್ರತಿನಿಧಿಗಳಾಗಿ ಕಂಡು ಬಂದರು ನನಗೆ.. ಗೊತ್ತಿಲ್ಲ ನಮ್ಮ ಮತ್ತು ನಿಮ್ಮ ನಡುವೆ ಅಂತಹವರು ಇರ ಬಹುದು. ನಾವು ಕೇವಲ ಮೇಲೆ ಅಂಟಿದ ಸಕ್ಕರೆಯಂತೆ ಅವರ ಬದುಕನ್ನು ಕಾಣುತ್ತಿದ್ದೇವೆ, ವಿನಃ ಒಳಗೆ ಹುಳುಕಾದ ಬದುಕನ್ನಲ್ಲಾ. ಆಧುನಿಕತೆಯ ಮತ್ತೊಂದು ಸ್ವರೂಪ ಹೀಗೂ ಇದ್ಯಾ?
Friday, December 27, 2013
ಆಧುನಿಕತೆಯ ಮತ್ತೊಂದು ಸ್ವರೂಪ

Subscribe to:
Post Comments (Atom)
No comments:
Post a Comment