ತುಂಬಾ ಮುಚ್ಚಿಟ್ಟು ಕೊಳ್ತೀಯ ಮಹರಾಯ್ತಿ . ಮನಸ್ಸು ಬಿಚ್ಚಿ ಮಾತಾಡಿದ್ರೆ ತಾನೇ ಏನಾದ್ರೂ ಗೊತ್ತಾಗೋದು ಅನ್ನುವ ಆಕ್ಷೇಪ ನನ್ನ ಬಗ್ಗೆ ಸಾಮಾನ್ಯವಾಗಿ ಕೇಳಿ ಬರುತ್ತೆ. ನಿಜ ನಾನು ಹೆಚ್ಚು ಹೆಪ್ಪುಗಟ್ಟಿಸಿಕೊಂಡಿದ್ದೇನೆ . ಯಾಕೆ ಅನ್ನುವ ಅನೇಕ ಪ್ರಶ್ನೆಗಳಿಗೆ ನನ್ನ ಕಡೆಯಿಂದ ಗೊತ್ತಿಲ್ಲ ಅನ್ನುವ ಉತ್ತರವೇ ಹೆಚ್ಚು. ಪ್ರಾಯಶಃ ಬದುಕಿನಲ್ಲಿ ಕಂಡ ಅನೇಕಾನೇಕ ಘಟನೆಗಳು, ಅನುಭವಗಳು ನನಗೆ ಮನಸ್ಸಿಗೆ ಬೀಗ ಹಾಕಿ ಕೊಳ್ಳುವುದು ಹೆಚ್ಚು ಸೂಕ್ತ ಅನ್ನಿಸಿರ ಬಹುದು. ಆಗಿನ್ನೂ ಡಿಗ್ರಿ ಓದುವ ರಮ್ಯ ಕಾಲ. ಎಲ್ಲ ವಿಷಯದಲ್ಲೂ ಮುಂದು . ಎಲ್ಲರು ಇಷ್ಟ ಪಡುವಂತಹ ಕಂಠ ನನ್ನದು. ಬರವಣಿಗೆ ಅಂದ್ರೆ ಮನವನ್ನು ಬರಹಗಳ ಮೂಲಕ ಬಿಚ್ಚಿಡುವ ಲಾಲಿತ್ಯವು ಸಹ ಲೀಲಾಜಾಲ. ನಾಟಕವು ಆಡುವ ಕಲೆಯು ಕರಗತ. ಹೀಗೆ ಎಲ್ಲ ರಂಗದಲ್ಲೂ ಓಕೆ ಅನ್ನಿಸುವ ಹೆಣ್ಣುಮಗಳು ನಾನಾಗಿದ್ದೆ. ಹಾಗಿರುವಾಗ ಒಮ್ಮೆ ನನ್ನ ಬದುಕಲ್ಲಿ ಒಂದು ಸಂಘಸಂಸ್ಥೆ ಎಂಟ್ರಿ ಆಯಿತು. ಆ ಬಳಿಕ ಅವರ ಒಡನಾಟದಿಂದ ಕಾಲೇಜಿನವರ ಕಣ್ಣು ಕೆಂಪಾಯಿತು . ಅಲ್ಲಿವರೆಗೂ ಇಷ್ಟವಾಗಿದ್ದ ನಾನು ಬೇಡದ ವ್ಯಕ್ತಿಯಾಗಿ ಬದಲಾದೆ. ಆಶ್ಚರ್ಯ ಅನ್ನಿಸುವಂತೆ ಬದಲಾಯಿತು ಬದುಕು. ಅದ್ಯಾಕೋ ಎಲ್ಲ ಲೆಕ್ಚರರ್ ನನ್ನ ಬಗ್ಗೆ ಅಸಹನೆ ಬೆಳಸಿಕೊಂಡರು . ನಾನು ಯಾವುದೇ ರೀತಿಯ ಕಾನೂನುಬಾಹಿರ ಕೆಲಸದಲ್ಲಿ ತೊಡ ಗಿರಲಿಲ್ಲ.ಆ ಸಂಸ್ಥೆ ಹೆಸರು ಎಬಿವಿಪಿ. ಆ ನಂತರ ಯಾವುದೇ ಕಾಂಪಿಟೇಷನ್ ನಲ್ಲಿ ಗೆದ್ದರೂ ಗೆಲುವನ್ನು ಒಪ್ಪಿಕೊಳ್ಳದ ಒಂದು ಗ್ರೂಪ್ ಸಿದ್ಧ ಆಯಿತು.ಒಂದೊಂದು ಗೆಲುವಿಗೂ ಮಾಡಿದ ಸಾಧನೆ, ಪಟ್ಟ ಕಷ್ಟಗಳು ಯಾವುದಕ್ಕೂ ಬೆಲೆ ಸಿಗಲೇ ಇಲ್ಲ. ನನಗೆ ಅಳು ಬರ್ತಾ ಇರೊದು. ಮನೆಗೆ ಬಂದು ಅಮ್ಮ -ಅಣ್ಣಂದಿರ ಮುಂದೆ ಹೇಳುವಾಗ ಕಣ್ಣೀರಧಾರೆ .ಪ್ರಾಯಶ : ಅವರ ಈ ಗುಣದಿಂದ ನನ್ನ ಒಳಗಿನ ನಾನು ಹೆಚ್ಚು ಗಟ್ಟಿಯಾದೆ . ಇಲ್ಲ್ಲಿ ಮತ್ತೊಂದು ವ್ಯಕ್ತಿತ್ವದ ಬಗ್ಗೆ ಹೇಳಲೇ ಬೇಕು . ನಾನು ಡಿಗ್ರೀ ಓದುತ್ತಿದ್ದಾಗ ನನ್ನ ಕನ್ನಡ ಲೆಕ್ಚರರ್ ಶಶಿಕಲ ಮೊರಬದ ಅಂತ . ಅವರು ಮೂಲತಃ ಬಾಗಲಕೋಟೆ ಯವರು. ಅವರಿಗೆ ನಾನು,ನನ್ನ ಮುಗ್ಧತೆ ಮತ್ತು ತಾಕತ್ತು ಅರ್ಥ ಆಗಿತ್ತು. ಅವರ ಪ್ರೀತಿ ಬೇರೆಯ ಮೇಡಮ್ಮು-ಮೇಡಪ್ಪ ಗಳಿಗೆ ಇಷ್ಟ ಆಗಿರಲಿಲ್ಲ. ನಾನು ಸೋತಷ್ಟು ಅವರು ಗೆಲ್ಲುವ ದಾರಿ ತೋರಿಸುತ್ತಾ ಹುರಿದುಂಬಿಸುತ್ತಿದ್ದರು .
ಬಳಿಕ ನನ್ನದೇ ಒಂದು ತಾಕತ್ತು ಬೆಳೆದು ನಾನು ಬೆಳೆಯಲು ಪ್ರಯತ್ನಿಸಿದೆ್‌ಈಗೆ ಹಲವು ಸಂಗತಿಗಳು ಹುದುಗಿವೆ.. ಅದನ್ನು ಬರೀತಿನಿ. ನನ್ನ ಅನೇಕ ಮೌನಗಳನ್ನು ಸಾಧ್ಯವಾದರೆ ಅಕ್ಷರಗಳ ಮೂಲಕ ತಿಳಿಸುತ್ತೇನೆ .. ಆದರೆ ಒಂದಂತೂ ಸತ್ಯ ಅಂದು ಅವರ ಅಸಹನೆ ಇಂದು ನನಗೊಂದು ವ್ಯಕ್ತಿತ್ವ ಬೆಳೆಯಲು ಸಾಧ್ಯವಾಯಿತು...
No comments:
Post a Comment