ಪ್ರಿಯ ರಾಜು,
ನೀವು ಇಲ್ವಾ? ಯಾಕೊ ನಂಬೋಕೆ ಆಗ್ತಾಯಿಲ್ಲ.ಅಂದು ನನಗೆ ನನ್ನ ಅಮ್ಮ ನೀವು ಸಂಗೀತ ಸಾಮ್ರಾಜ್ಯ,ಈ ಭುವಿಯನ್ನೇ ತ್ಯಾಗ ಮಾಡಿ ಹೊರತು ಹೋದ ವಿಷಯ ತಿಳಿಸಿದಾಗ ಯಾವ ರೀತಿ ಸ್ವೀಕರಿಸ ಬೇಕೋ ನನಗೆ ತಿಳಿಯದಾಯಿತು.ರಾಜು ನಾನು ನಿಮಗೆ ಪರಿಚಿತಳು,ಸಂಬಂಧಿ ಅಥವಾ ಶಿಷೆಅಳು ಅಲ್ಲ.ಆದರೆ ನಿಮ್ಮ ಗಾನ ಮಾಧುರ್ಯ ಅನುಭವಿಸಿದ ಅಸಂಖ್ಯಾತ ಶ್ರೋತುಗಳಲ್ಲಿ ಒಬ್ಬಳು.ಅದನ್ನು ಹೆಮ್ಮೆಯಿಂದ ಹೇಳಿಕೊಲ್ಲ ಬಲ್ಲೆ.ಪ್ರಿಯ ರಾಜು.. ನಿಮ್ಮಂತಹ ಕಲಾವಿದರು ಸದಾ ಜೀವಂತ ಆಗಿರ್ತಿರಿ ಈ ಭೂಮಿ ಇರುವ ತನಕ.ತೀರ ನಾಟಕೀಯ ಅನ್ನಿಸ್ತಾ ಇದೆಯಾ ರಾಜು,ಗೊತ್ತಿಲ್ಲ ನನಗೆ ಯಾವ ರೀತಿ ಪ್ರತಿಕ್ರಿಯೆ ನೀಡ ಬೇಕು ಅಂತ.ನಿಮ್ಮನ್ನು ಮೊತ್ತ ಮೊದಲ ಬಾರಿ ಕಂಡದ್ದು ದೂರದರ್ಶನ ಸುಗಮ ಸಂಗೀತ ಕಾರ್ಯಕ್ರಮದಲ್ಲಿ.ನಿಮ್ಮ ಅಕ್ಕ ಹಾಡ್ತಾಯಿದ್ದರು,ನೀವು ಖುಷಿ..ಖುಷಿಯಾಗಿ ಹಾರ್ಮೋನಿಯಮ್ ನುಡಿಸುತ್ತಿದ್ದಿರಿ.ನೀವು ಅನಂತ ಮೇಷ್ಟ್ರ ಮಗ ಎನ್ನುವ ಜೊತೆಜೊತೆಯಲ್ಲಿ ರಾಜು ಮಾಷ್ಟ್ರಾಗಿ ಜನರ ಮನದಲ್ಲಿ ನೆಲೆ ಕಂಡಿರಿ.ಅಪ್ಪನಂತೆ ಮಗ ಆದಿರಿ,ಅಪ್ಪನಿಗಿಂತ ಭಿನ್ನ ಆದಿರಿ,ಅದು ನಿಮ್ಮಂತಹ ಪ್ರತಿಭಾವಂತರಿಂದ ಮಾತ್ರ ಸಾಧ್ಯ ರಾಜು.ಆ ಮೇಲೆ ನಿಮಗೆ ಮಾಡುವೆ ಆದ ಸುದ್ದಿ ನಾನು ಪತ್ರಿಕೆಯಲ್ಲಿ ಓದಿದೆ,ಮೊದಲೇ ಹೇಳಿದೆನಲ್ಲ ನಿಮ್ಮ ಅಸಂಖ್ಯಾತ ಶ್ರೋತ್ರುಗಲ್ಲಿ ಒಬ್ಬಳು ಅಂತ. ಥೇಟ್ ಅನಂತ ಮೇಷ್ಟ್ರ ಧ್ವನಿಯು ಜೇನಿನಂತೆ ಹರಿದು ನಮ್ಮ ಮನ ತಣಿಸುತ್ತಿತ್ತು.ನಟನೆಯಲ್ಲಿ ನಿಮ್ಮ ಛಾಪು ತೋರಿದಿರಿ,ಜನಮನ ಗೆದ್ದಿರಿ. ರಾಜು ಮತ್ತೆ ನಿಮ್ಮ ವಿಷಯ ಕಿವಿಗೆ ಬಿದ್ದಿದ್ದು ನಿಮಗೆ ಆಕ್ಸಿಡೆಂಟ್ ಆದಾಗ.ಅಷ್ಟರಲ್ಲಿ ನೀವು ಮದಿರೆಯನ್ನು ಪ್ರೇಯಸಿಯಾಗಿ ಮಾಡಿಕೊಂಡು ಬಿಟ್ಟಿದ್ದಿರಿ.ನನಗೆ ಆಗ ತುಂಬಾ ದುಃಖಆಗಿತ್ತು.ನಿಮ್ಮಂತಹ ಪ್ರತಿಭಾವಂತ ಯಾಕೆ ಹೀಗೆ ಬದುಕನ್ನು ಬದಲಾಯಿಸಿಕೊಂಡು ಇದ್ದೀರಾ ಎಂದು ಎಲ್ಲ ಅಭಿಮಾನಿಗಳು ನೋಯುವಂತೆ ನೊಂದಿದ್ದೆ.ರಾಜು.. ನೀವು ಎಲ್ಲದರ ನಡುವೆ ಬೆಳೆದಿರಿ,ನೀವು ಮತ್ತೆ ಮತ್ತೆ ಕಂಡಿದ್ದು ಅನೇಕ ರಿಯಾಲಿಟಿ ಶೋಗಳಿಗೆ ಸ್ಪರ್ಧಿಗಳನ್ನು ಆಯ್ಕೆ ಮಾಡುವಾಗ.ನೀವು ತನ್ಮಯರಾಗಿ ಹಾಡುವುದನ್ನು ಕೇಳುವ ಸೌಭಾಗ್ಯ ಮತ್ತೆ ಮತ್ತೆ ಸಿಕ್ಕಿದ್ದು ಕಿರುತೆರೆಯಿಂದ.ಎಲ್ಲ ಕೇಳಲಿ ಎಂದು .. ಸದಾ ಹಾಡುತ್ತಾ ಎಲ್ಲರು ಮೈಮರೆತು ಕೇಳುವಂತೆ ಮಾಡಿದ ಜೀವನ್ಮುಖಿ,ಎಲ್ಲಿಯೂ ನಿಲ್ಲದಿರು ಮನೆಯನೆಂದು ಕಟ್ಟದಿರು, ಎಂದು ಹಾಡುತ್ತಾ ಸದಾ ನಗುವಿನ ಝರಿ ಹೊತ್ತಿದ್ದ ನೀವು ನಿಧಾನವಾಗಿ ಬದುಕಿಂದ ವಿಮುಖರಾಗುತ್ತಿದ್ದಿರಿ ಎನ್ನುವ ಸಂಗತಿ ನೀವು ಎಲ್ಲರನ್ನು ಅಗಲುವವರೆಗೂ ಯಾರಿಗೂ ತಿಳಿಯಲಿಲ್ಲವೆ? ಅಸಂಖ್ಯಾತ ಶಿಷ್ಯ ಸಮುದಾಯವನ್ನು ಬಿಟ್ಟು ಹೋದರು ಅವರ ಸಾಧನೆಯಲ್ಲಿ ನಾವು ನಿಮ್ಮನ್ನು ಕಾಣುತ್ತೇವೆ ರಾಜು.ನಿನ್ನೆ ಟೀವಿ9 ನಲ್ಲಿ ಪ್ರಸಾರ ಆದ ಭಾವಪೂರ್ಣ ವಿದಾಯ ಕಾರ್ಯಕ್ರಮ ವೀಕ್ಷಿಸಿದಾಗ ಕಣ್ಣಾಲಿಗಳು ತುಂಬಿತು..ಎಲ್ಲಿಯೂ ನಿಲ್ಲದೆ ನೀವು ಅನಂತದಲ್ಲಿ ಲೀನ ಆದಿರಿ ಆದ್ರೆ ನಮ್ಮೆಲ್ಲರ ಮನದಲ್ಲಿ ಚಿರಸ್ಥಾಯಿ ಯಾಗಿ ನೆಲೆ ನಿಂತ ..ನಿಮಗಿದೋ ಭಾವ ಪೂರ್ಣ ............ !
ನಿಮ್ಮ ಅಪಾರ ಶ್ರೋತೃಗಳ ಪರವಾಗಿ
No comments:
Post a Comment