
' ಅಷ್ಟು ಡೇ೦ಜರ್ರ?!' ಕುತೂಹಲ ತಡಿಯಲಾಗದೆ ಕೇಳಿದೆ.ನಗರ ಪ್ರಸಿದ್ಧ ವೈದ್ಯರು ಅವರು,ಅವರ ಪತ್ನಿಯು ವೈದ್ಯಕೀಯ ಕ್ಷೇತ್ರದಲ್ಲಿ ಹೆಸರು ಮಾಡಿದ ಹೆಣ್ಣುಮಗಳು.ನನ್ನನ್ನು ಕಂಡ್ರೆ ಸ್ವಲ್ಪ ಜಾಸ್ತೀನೆ ಒಲವು ಈ ದಂಪತಿಗಳಿಗೆ.ಹಂದಿ ಜ್ವರದ ಗಲಾಟೆಯಿಂದ ಆಶ್ಚರ್ಯ ಹಾಗೂ ಆತಂಕದಿಂದ ಒದ್ದಾಡುತ್ತಾ ಇದ್ದ ಅಸಂಖ್ಯಾತ ಜನರ ಪ್ರತಿನಿಧಿಯಂತೆ ಇತ್ತು ನನ್ನ ಧ್ವನಿ.ತಕ್ಷಣ ನಕ್ರು ಡಾಕ್ಟರ್. ಕಾಫಿ ಕುಡಿ ಮರಿ ಏನೂ ಆಗಲ್ಲ. ಅಂತ ಹೇಳಿ ನನ್ನ ಮುಂದೆ ಬಿಸ್ಕತ್ ಇಟ್ಟರು.ಆದರು ನಾನು ಬಿಡಲಿಲ್ಲ ,ಹಾಗಾದರೆ ಇದು ತೊಂದ್ರೆ ಕೊಡುವ ರೋಗ ಅಲ್ಲ ತಾನೇ ಅಂದೇ.ಅದಕ್ಕೆ ಅವರು ನೋಡ್ ಮಗು ಯಾರೇ ಆಗಲಿ ತಮ್ಮ ಶರೀರ,ಮನಸ್ಸು ಮತ್ತು ಪರಿಸರವನ್ನು ಶುಭ್ರವಾಗಿ ಇಟ್ಟುಕೊಂಡರೆ ಯಾವ ಸಮಸ್ಯೆಯು ಬಳಿಗೆ ಬರಲ್ಲ ಅಂತ ಅಂದ್ರು.ನಿಮ್ಮ ಮಾತು ನಿಜ ಅಂತ ಅಂದೇ.ನಿನಗೆ ಗೊತ್ತಿರುವ ಹಾಗೆ ಇದು ಒಂದು ಬಗೆಯ ಇನ್ಫ್ಲುಯನ್ಜಾ,ಈ ರೀತಿಯ ಸಮಸ್ಯೆಗಳು ಶೀತ ಪ್ರದೇಶದಲ್ಲಿ ಸಾಮಾನ್ಯ,ಆದ್ರೆ ಅದಕ್ಕೆ ಪೂರಕ ಔಷಧ ಕಂಡು ಹಿಡಿಯುವ ಕೆಲಸವೂ ಅಷ್ಟೇ ವೇಗವಾಗಿ ನಡಿಯುತ್ತೆ,ಅಷ್ಟರಲ್ಲಿ ಮನುಷ್ಯ ತನ್ನ ತಿಳಿಗೇಡಿತನದಿಂದ ಮತ್ತೊಂದು ಕಾಯಿಲೆ ತಂದು ಕೊಂಡಿರುತ್ತಾನೆ.ಇದು ಸಾಮಾನ್ಯ ಸಂಗತಿ,ನಾವು ಈಗೀಗ ನಿತ್ಯ ಅಗತ್ಯ ಅಂಶಗಳನ್ನು ಮರಿತಾ ಇದ್ದೇವೆ ,ಅದರ ಪರಿಣಾಮ ದೇಹದಲ್ಲಿ ರೋಗ ನಿರೋಧಕ ಶಕ್ತಿಯ ಕೊರತೆ.....! ಹೀಗೆ ಅನೇಕ ಅಂಶಗಳನ್ನು ಹೇಳಿದರು ವೈದ್ಯರು.ಅವರೊಂದಿಗೆ ಹರಟಿ ಹೊರ ಬಂದಾಗ ಒಬ್ಬ ಪುಟ್ಟ ಹುಡುಗಿ ಮಾಸ್ಕ್ ಹಾಕಿಕೊಂಡು ಬರ್ತಾ ಇದ್ಲು,ಈ ದೃಶ್ಯ ನಗರದಲ್ಲಿ ತುಂಬಾ ಸಾಮಾನ್ಯ ಆದ ಕಾರಣ ಅದರತ್ತ ಹೆಚ್ಚು ಗಮನ ಹರಿಸಲಿಲ್ಲ. ಶಾಲೆಯಿಂದ ಅಮ್ಮ ಮನೆಗೆ ಬಂದಿದ್ರು.ಅವರ ಬಳಿ ಡಾಕ್ಟರ ಜೊತೆ ನಡೆದ ಮಾತುಕಥೆ ಹೇಳಿದೆ.ಪರಿಸರ ಶುಭ್ರವಾಗಿ ಇಟ್ಟುಕೊಳ್ಳ ಬೇಕು ಅನ್ನುವ ಮಾತು ಸಹ ಬಹಳ ಮುಖ್ಯ.ನಮ್ಮ ಶಾಲೆಯಲ್ಲಿ ಕಸ ಗುಡಿಸುವವಳು ಒಂದು ಮಾತು ಹೇಳಿದ್ಲು ಗೊತ್ತ,ಇಷ್ಟು ದಿನ ಆ ಕಸ-ಈ ಕಸ ಅಂತ ಗುಡಿಸಿ ಗುಡಿಸಿ ಸಾಕಾಗಿತ್ತು,ಈಗ ಇನ್ನೊದು ಕಸ ಬೇರೆ ಹೆಚ್ಚಾಗಿದೆ ಎಂದು ಬೇಸರಿಸಿ ಕೊಂಡಳು ಅಂತ ಹೇಳಿ ನಕ್ರು,ಅರೆ ಹೌದಲ್ವಾ ಅಂತ ಅನ್ನಿಸಿತು.ನಾವು ನಮ್ಮ ಆರೋಗ್ಯದ ಜೊತೆಗೆ ಪರಿಸರವನ್ನು ಅನೇಕ ರೀತಿಯಲ್ಲಿ ಹಾಳು ಮಾಡ್ತಾ ಇದ್ದೇವೆ...ಹೀಗೆ ನನ್ನ ಯೋಚನಾ ಲಹರಿ ಸಾಗಿತ್ತು.ಸ್ವಲ್ಪ ಸಮಯದ ಬಳಿಕ ಅಂಗಡಿಗೆ ಹೋಗ ಬೇಕಾಯ್ತು.ಸೇಟು ಹುಡುಗರು ಅದರ ಯಜಮಾನರು.ಆ ಅಂಗಡಿಯಲ್ಲೂ ಇದೆ ಮಾತು.ಆಗ ಒಬ್ಬ ಹುಡ್ಗ ಹೇಳಿದ ಚಂದಾಗಿ ಬೆಳ್ಳುಳ್ಳಿ ತಿನ್ನಿ ಸರಿ ಆಗ್ತದೆ. ನೀವು ತಿನ್ನಲ್ಲ ಅಲ್ವ ಮತ್ತೆ ಎಲ್ಲರಿಗು ಈ ಔಷಧ ಹೇಳ್ತಾ ಇದ್ದೀರಿ, ಅಂದಾಗ 'ಅಮ್ಮ ಒಂದು ವಿಸ್ಯ ಹೇಳಲಾ... ಮನೆಯಲ್ಲಿ ಚಂದಾಗಿ ಊಟ ಮಾಡಿ,ಒಳ್ಳೆ ನೀರು ಕುಡೀರಿ ಕಣ್ತುಂಬ ನಿದ್ದೆ ಮಾಡಿ ಆಗ ಯಾವ ಕಾಯ್ಲಾ ನಿಮ್ಮ ಹತ್ರ ಬರಾಕಿಲ್ಲ 'ಅಂದ.ಅವನ ಮಾತು ಎಷ್ಟು ಸತ್ಯ !
No comments:
Post a Comment