Saturday, March 3, 2012

ರಾಜು.


ಪ್ರಿಯ ರಾಜು,
ನೀವು ಇಲ್ವಾ? ಯಾಕೊ ನಂಬೋಕೆ ಆಗ್ತಾಯಿಲ್ಲ.ಅಂದು ನನಗೆ ನನ್ನ ಅಮ್ಮ ನೀವು ಸಂಗೀತ ಸಾಮ್ರಾಜ್ಯ,ಈ ಭುವಿಯನ್ನೇ ತ್ಯಾಗ ಮಾಡಿ ಹೊರತು ಹೋದ ವಿಷಯ ತಿಳಿಸಿದಾಗ ಯಾವ ರೀತಿ ಸ್ವೀಕರಿಸ ಬೇಕೋ ನನಗೆ ತಿಳಿಯದಾಯಿತು.ರಾಜು ನಾನು ನಿಮಗೆ ಪರಿಚಿತಳು,ಸಂಬಂಧಿ ಅಥವಾ ಶಿಷೆಅಳು ಅಲ್ಲ.ಆದರೆ ನಿಮ್ಮ ಗಾನ ಮಾಧುರ್ಯ ಅನುಭವಿಸಿದ ಅಸಂಖ್ಯಾತ ಶ್ರೋತುಗಳಲ್ಲಿ ಒಬ್ಬಳು.ಅದನ್ನು ಹೆಮ್ಮೆಯಿಂದ ಹೇಳಿಕೊಲ್ಲ ಬಲ್ಲೆ.ಪ್ರಿಯ ರಾಜು.. ನಿಮ್ಮಂತಹ ಕಲಾವಿದರು ಸದಾ ಜೀವಂತ ಆಗಿರ್ತಿರಿ ಈ ಭೂಮಿ ಇರುವ ತನಕ.ತೀರ ನಾಟಕೀಯ ಅನ್ನಿಸ್ತಾ ಇದೆಯಾ ರಾಜು,ಗೊತ್ತಿಲ್ಲ ನನಗೆ ಯಾವ ರೀತಿ ಪ್ರತಿಕ್ರಿಯೆ ನೀಡ ಬೇಕು ಅಂತ.ನಿಮ್ಮನ್ನು ಮೊತ್ತ ಮೊದಲ ಬಾರಿ ಕಂಡದ್ದು ದೂರದರ್ಶನ ಸುಗಮ ಸಂಗೀತ ಕಾರ್ಯಕ್ರಮದಲ್ಲಿ.ನಿಮ್ಮ ಅಕ್ಕ ಹಾಡ್ತಾಯಿದ್ದರು,ನೀವು ಖುಷಿ..ಖುಷಿಯಾಗಿ ಹಾರ್ಮೋನಿಯಮ್ ನುಡಿಸುತ್ತಿದ್ದಿರಿ.ನೀವು ಅನಂತ ಮೇಷ್ಟ್ರ ಮಗ ಎನ್ನುವ ಜೊತೆಜೊತೆಯಲ್ಲಿ ರಾಜು ಮಾಷ್ಟ್ರಾಗಿ ಜನರ ಮನದಲ್ಲಿ ನೆಲೆ ಕಂಡಿರಿ.ಅಪ್ಪನಂತೆ ಮಗ ಆದಿರಿ,ಅಪ್ಪನಿಗಿಂತ ಭಿನ್ನ ಆದಿರಿ,ಅದು ನಿಮ್ಮಂತಹ ಪ್ರತಿಭಾವಂತರಿಂದ ಮಾತ್ರ ಸಾಧ್ಯ ರಾಜು.ಆ ಮೇಲೆ ನಿಮಗೆ ಮಾಡುವೆ ಆದ ಸುದ್ದಿ ನಾನು ಪತ್ರಿಕೆಯಲ್ಲಿ ಓದಿದೆ,ಮೊದಲೇ ಹೇಳಿದೆನಲ್ಲ ನಿಮ್ಮ ಅಸಂಖ್ಯಾತ ಶ್ರೋತ್ರುಗಲ್ಲಿ ಒಬ್ಬಳು ಅಂತ. ಥೇಟ್ ಅನಂತ ಮೇಷ್ಟ್ರ ಧ್ವನಿಯು ಜೇನಿನಂತೆ ಹರಿದು ನಮ್ಮ ಮನ ತಣಿಸುತ್ತಿತ್ತು.ನಟನೆಯಲ್ಲಿ ನಿಮ್ಮ ಛಾಪು ತೋರಿದಿರಿ,ಜನಮನ ಗೆದ್ದಿರಿ. ರಾಜು ಮತ್ತೆ ನಿಮ್ಮ ವಿಷಯ ಕಿವಿಗೆ ಬಿದ್ದಿದ್ದು ನಿಮಗೆ ಆಕ್ಸಿಡೆಂಟ್ ಆದಾಗ.ಅಷ್ಟರಲ್ಲಿ ನೀವು ಮದಿರೆಯನ್ನು ಪ್ರೇಯಸಿಯಾಗಿ ಮಾಡಿಕೊಂಡು ಬಿಟ್ಟಿದ್ದಿರಿ.ನನಗೆ ಆಗ ತುಂಬಾ ದುಃಖಆಗಿತ್ತು.ನಿಮ್ಮಂತಹ ಪ್ರತಿಭಾವಂತ ಯಾಕೆ ಹೀಗೆ ಬದುಕನ್ನು ಬದಲಾಯಿಸಿಕೊಂಡು ಇದ್ದೀರಾ ಎಂದು ಎಲ್ಲ ಅಭಿಮಾನಿಗಳು ನೋಯುವಂತೆ ನೊಂದಿದ್ದೆ.ರಾಜು.. ನೀವು ಎಲ್ಲದರ ನಡುವೆ ಬೆಳೆದಿರಿ,ನೀವು ಮತ್ತೆ ಮತ್ತೆ ಕಂಡಿದ್ದು ಅನೇಕ ರಿಯಾಲಿಟಿ ಶೋಗಳಿಗೆ ಸ್ಪರ್ಧಿಗಳನ್ನು ಆಯ್ಕೆ ಮಾಡುವಾಗ.ನೀವು ತನ್ಮಯರಾಗಿ ಹಾಡುವುದನ್ನು ಕೇಳುವ ಸೌಭಾಗ್ಯ ಮತ್ತೆ ಮತ್ತೆ ಸಿಕ್ಕಿದ್ದು ಕಿರುತೆರೆಯಿಂದ.ಎಲ್ಲ ಕೇಳಲಿ ಎಂದು .. ಸದಾ ಹಾಡುತ್ತಾ ಎಲ್ಲರು ಮೈಮರೆತು ಕೇಳುವಂತೆ ಮಾಡಿದ ಜೀವನ್ಮುಖಿ,ಎಲ್ಲಿಯೂ ನಿಲ್ಲದಿರು ಮನೆಯನೆಂದು ಕಟ್ಟದಿರು, ಎಂದು ಹಾಡುತ್ತಾ ಸದಾ ನಗುವಿನ ಝರಿ ಹೊತ್ತಿದ್ದ ನೀವು ನಿಧಾನವಾಗಿ ಬದುಕಿಂದ ವಿಮುಖರಾಗುತ್ತಿದ್ದಿರಿ ಎನ್ನುವ ಸಂಗತಿ ನೀವು ಎಲ್ಲರನ್ನು ಅಗಲುವವರೆಗೂ ಯಾರಿಗೂ ತಿಳಿಯಲಿಲ್ಲವೆ? ಅಸಂಖ್ಯಾತ ಶಿಷ್ಯ ಸಮುದಾಯವನ್ನು ಬಿಟ್ಟು ಹೋದರು ಅವರ ಸಾಧನೆಯಲ್ಲಿ ನಾವು ನಿಮ್ಮನ್ನು ಕಾಣುತ್ತೇವೆ ರಾಜು.ನಿನ್ನೆ ಟೀವಿ9 ನಲ್ಲಿ ಪ್ರಸಾರ ಆದ ಭಾವಪೂರ್ಣ ವಿದಾಯ ಕಾರ್ಯಕ್ರಮ ವೀಕ್ಷಿಸಿದಾಗ ಕಣ್ಣಾಲಿಗಳು ತುಂಬಿತು..ಎಲ್ಲಿಯೂ ನಿಲ್ಲದೆ ನೀವು ಅನಂತದಲ್ಲಿ ಲೀನ ಆದಿರಿ ಆದ್ರೆ ನಮ್ಮೆಲ್ಲರ ಮನದಲ್ಲಿ ಚಿರಸ್ಥಾಯಿ ಯಾಗಿ ನೆಲೆ ನಿಂತ ..ನಿಮಗಿದೋ ಭಾವ ಪೂರ್ಣ ............ !
ನಿಮ್ಮ ಅಪಾರ ಶ್ರೋತೃಗಳ ಪರವಾಗಿ

ನಮ್ಮ

ಸ್ವಾಗತ ಸುಸ್ವಾಗತ.. ಅಂತ ವೀಕ್ಷಕರನ್ನು ಸದಾ ಪ್ರೀತಿಯಿಂದ ಬರಮಾಡಿಕೊಳ್ಳುವ ಥಟ್ ಅಂತ ಹೇಳಿ ನಾ.ಸೋಮೇಶ್ವರ್ ಅವರನ್ನು ಜ್ಞಾನದಾಯಿನೀ ಅಂತ ಕರೆದರೆ ಸೂಕ್ತ ಅಂತ ಅನ್ನಿಸುತ್ತೆ.ನಾನು ಕನ್ನಡ ದೂರದರ್ಶನದ ಆರಂಭದಿಂದಲೂ ಡಾ.ನಾ.ಸೋಮೇಶ್ವರ್ ಅವ್ರ ಅನೇಕ ಕಾರ್ಯಕ್ರಮಗಳನ್ನು ವೀಕ್ಷಿಸುತ್ತಾ ಬಂದಿದ್ದೇನೆ ಅಂದಿನಿಂದ ಹಿಡಿದು ಈವರೆಗೂ ವೀಕ್ಷಕರ ಮನದಲ್ಲಿ ಉತ್ತಮ ಸ್ಥಾನ ಪಡೆದ ನಿರೂಪಕರಾಗಿದ್ದಾರೆ. ಥಟ್ ಅಂತ ಹೇಳಿ ಕಾರ್ಯಕ್ರಮಕ್ಕೆ ಮುನ್ನ ಅವರು ನಮಗೆ ಅತ್ಯಂತ ಇಷ್ಟವಾದ ಕ್ವಿಜ್ ಮೇಷ್ಟ್ರಾಗಿದ್ದರು.ನನ್ನಂತಹ ಸಾಮಾನ್ಯ ವೀಕ್ಷಕರಿಗೆ ಅವರು ವೃತ್ತಿಯಿಂದ ವೈದ್ಯರು ಎನ್ನುವ ಸಂಗತಿ ಬಹಳ ದಿನಗಳ ತನಕ ತಿಳಿದೇ ಇರಲಿಲ್ಲ.ಅವರು ಯಾವ ಶಾಲೆಯ ಹೆಡ್ ಮಾಸ್ತರ್ ಆಗಿದ್ದಾರೋ ಅನ್ನುವ ಕುತೂಹಲ ವೀಕ್ಷಕರನ್ನು ಕಾಡಿದ್ದಂತು ಸತ್ಯ. ಆ ಬಳಿಕ ಅವರು ಥಟ್ ಅಂತ ಹೇಳಿ ಕಾರ್ಯಕ್ರಮದ ನಿರೂಪಕರಾಗಿ ತಮ್ಮ ಹೊಸ ಅಧ್ಯಾಯ ಆರಂಭಿಸಿದರು ಈ ಮಾಸ್ಟರು.ಅತಿ ಹೆಚ್ಚಿನ ವೀಕ್ಷಕರು ಅಂದಿನಿಂದ ಈವರೆಗೂ ತಪ್ಪದೆ ವೀಕ್ಷಿಸುತ್ತಾ ಬಂದಿದ್ದಾರೆ.ಅದರಲ್ಲಿ ಹೆಣ್ಣುಮಕ್ಕಳ ಪಾಲು ಹೆಚ್ಚು.ರಾತ್ರಿ ವೇಳೆಯಲ್ಲಿ ತಾವು ತಮ್ಮ ಮೆಚ್ಚಿನ ಥಟ್ ಅಂತ ಹೇಳಿ ಕಾರ್ಯಕ್ರಮ ನೋಡಲು ಆಗದೆಂದು ಅವರು ಮುಂಜಾನೆ ಆಗುವ ಮರು ಪ್ರಸಾರ ತಪ್ಪದೆ ವೀಕ್ಷಿಸುವ ಪದ್ಧತಿ ಎಲ್ಲರ ಮನೆಯಲ್ಲೂ ಕಂಡುಬರುವ ಅಲಿಖಿತ ಒಪ್ಪಂದ !! ಎಲ್ಲ ಕಾರ್ಯಕ್ರಮದಂತೆ ಥಟ್ ಅಂತ ಹೇಳಿ ಸಹ ಸಾಕಷ್ಟು ಬದಲಾವಣೆಗಳನ್ನು ಕಂಡಿತು.ಹಬ್ಬ,ರಾಷ್ಟ್ರೀಯ ಹಬ್ಬ..ಅನೇಕ ವೀಶೇಷ ಸಂದರ್ಭ ಗಳಲ್ಲಿ ವಿಶೇಷ ಅತಿಥಿಗಳಿಗೆ ಥಟ್ ಅಂತ ಹೇಳಿ ಎಂದು ಪ್ರಶ್ನೆ ಕೇಳುವುದರ ಜೊತೆ ಜೊತೆಯಲ್ಲಿ ವಿಶೇಷ ಹಾಗು ವಿಭಿನ್ನ ರೀತಿಯಲ್ಲಿ ಸಂದರ್ಶನ ಮಾಡುತ್ತಿದ್ದರು.ಜೈಲಿನಲ್ಲಿ ಕೈದಿಗಳಿಗೆ ಹಾಗು ಅಂಧ ಸ್ಪರ್ಧಿಗಳಿಗೆ ಇವರು ಮಾಡಿದ ಸ್ಪರ್ಧೆ ವೀಕ್ಷಕನ ಮನದಲ್ಲಿ ಶಾಶ್ವತವಾಗಿ ಉಳಿದಿದೆ.ವೀಕ್ಷಕರಿಗೆ ಅತಿ ಇಷ್ಟವಾದ ಮತ್ತೊಂದು ಸಂಗತಿ ಅಂದರೆ ಅವರ ಪುಸ್ತಕ ಪರಿಚಯದ ವಿಧಾನ.ಚಿಕ್ಕ-ಚೊಕ್ಕ ಆದರೆ ಅತ್ಯಂತ ಸುಂದರ ವಿಧಾನದ ಮೂಲಕ ಆ ಪುಸ್ತಕದ ಬಗ್ಗೆ ಪರಿಚಯ ಮಾಡಿಕೊಡುವ ಶೈಲಿ.ಅವರು ಹೇಳುವ ರೀತಿ ಹೇಗಿರುತ್ತದೆ ಅಂದರೆ .......!ವೀಕ್ಷಕ ಎಂದು ಆ ಪುಸ್ತಕ ಕೊಂಡೆನು,ಯಾವಾಗ ಅದನ್ನು ಓದೇನು! ಅನ್ನುವ ತುಡಿತಕ್ಕೆ ಒಳಗಾಗುವ ಮನಸ್ತತ್ವ ಬೆಳೆಸಿಕೊದುವುದರಲ್ಲಿ ಡಾ.ನಾ.ಸೋಮೇಶ್ವರ್ ಮೊದಲಿಗರು.ಒಮ್ಮೆ ಅವರು ಕಾರಣಾಂತರಗಳಿಂದ ಈ ಕಾರ್ಯಕ್ರಮದಲ್ಲಿ ಭಾಗವಹಿಸಲಿಲ್ಲ ,ನಟ ಸುಚಿಂದ್ರಪ್ರಸಾದ್ ಅವರ ಹೆಗಲಿಗೆ ಇದರ ಹೊಣೆ ಏರಿತು.ಆದರೆ ವೀಕ್ಷಕನಿಗೆ ಆ ಬದಲಾವಣೆ ಅಷ್ಟೊಂದು ಇಷ್ಟ ಆಗಲಿಲ್ಲ.ಇದು ಸತ್ಯ.ಆ ಮೇಲೆ ನಮ್ಮ ಪ್ರೀತಿಯ ಮಾಸ್ತ್ರೆ ಗಟ್ಟಿ ಆದರು.ವೈದ್ಯರಾಗಿ,ನಿರೂಪಕರಾಗಿ,ಲೇಖಕರಾಗಿ..ಹತ್ತು ಹಲವಾರು ಕ್ಷೇತ್ರಗಳಲ್ಲಿ ತಮ್ಮ ಛಾಪು ತೋರಿರುವ ನಾ.ಸೋಮೇಶ್ವರ್ ಅವರನ್ನು ವೀಕ್ಷಕರು ಕರೆಯುವುದು ನಮ್ಮ ಥಟ್ ಅಂತ ಹೇಳಿ ಸರ್ ಅಂತ.. ಈ ಪರಿ ವರ್ಷಾನುಗಟ್ಟಲೆ ವೀಕ್ಷರು ಸ್ವೀಕರಿಸಿರುವ ನಿರೂಪಕರು ನಾ.ಸೋಮೇಶ್ವರ್ ಅವರನ್ನು ಮಾತ್ರ.ಪ್ರಾಯಶ: ಇಂತಹ ಗೌರವ ಕಿರುತೆರೆಯಲ್ಲಿ ಸಂದಿರುವುದು ನಾ.ಸೋಮೇಶ್ವರ್ ಅವ್ರಿಗೆ ಮಾತ್ರ ಅಂತ ಕಾಣುತ್ತೆ!