'ಮೂರು ಕಾಸಿಗೂ ಪ್ರಯೋಜನ ಇರಲ್ಲ ಆದರೆ ತಮ್ಮನ್ನು ತಾವು ಉತ್ತಮ ಬರಹಗಾರರು ಅಂತ ತಿಳೀತಾರೆ.ಎರಡಕ್ಷರ ನೆಟ್ಟಗೆ ಬರೀದೆ ಇದ್ದರು ಅಹಂಕಾರಕ್ಕೆನೋ ಕಡಿಮೆ ಇರಲ್ಲ ' ಆತನ ಕೋಪ ಎಲ್ಲೇ ಮೀರಿತ್ತು.ಆ ಕೋಪ ನನ್ನ ಮೇಲೆ ಅಂತ ನನಗೆ ಚನ್ನಾಗಿ ಗೊತ್ತಿತ್ತು.ಮೌನವಾಗಿ ನನ್ನ ಪಾಡಿಗೆ ಕೆಲಸ ಮಾಡುತ್ತಿದ್ದೆ. ನನಗೆ ತುಂಬಾ ದುಃಖ ಆಗ್ತಾ ಇತ್ತು,ಆದರೆ ಮಾತಾಡಲಿಲ್ಲ.ಏನು ಅಸ್ತಿತ್ವ ಇಲ್ಲದೆ ಹೋದರು ಅಹಂಕಾರಕ್ಕೆನೂ ಕಡಿಮೆ ಇಲ್ಲ ಅಂತ ಆತ ಮಾತಿನ ಓಘ ಸಾಗಿತ್ತು.ನಾನು ಕೆಲಸ ಮಾಡುವ ಪತ್ರಿಕೆಗಳ ಒಂದಕ್ಕೆ ಆತ ಸಂಪಾದಕ.ಮಾಡಿದ ಕೆಲಸವನ್ನು ಮಾಡೇ ಇಲ್ಲ್ಲ ಅಂತ ನಿರ್ದಾಕ್ಷಿಣ್ಯವಾಗಿ ಹೇಳಿ ನನ್ನ ಮನಕ್ಕೆ ಬೇಸರ ತರಿಸಿದ್ದರು.ಕೆಲಸದ ವಿಷಯದಲ್ಲಿ ನಾನು ಎಂದಿಗೂ ಹಿಂದೆ ಬಿದ್ದಿಲ್ಲ,ಅದು ನನ್ನ ಸ್ವಭಾವ,ಈತ ಒಟ್ಟಾರೆ ನನ್ನನು ಸೋಮಾರಿ ಅನ್ನುವ ಅರ್ಥದಲ್ಲಿ ಎಲ್ಲರ ಮುಂದೆ ಹೇಳಿದಾಗ ( ನೇರವಾಗಿ ಅಲ್ಲ) ಏನು ಮಾತಾಡುವ ಸ್ಥಿಯಲ್ಲಿ ನಾನು ಇರಲಿಲ್ಲ.ಆತ ಹೇಳಿದಂತೆ ನನಗೆ ಬರೆಯಲು ಬರದೆ ಇರ ಬಹುದು ಆದರೆ ಒಂದು ಪತ್ರಿಕೆ ನನಗೆ ಸುಮ್ಮನೆ ಜವಾಬ್ದಾರಿ ವಹಿಸಿಲ್ಲ ಎಂದು ಹೇಳುವ ಆಸೆ ಆದರು ಸುಮ್ಮನಾದೆ.ಅದಾದ ಕೆಲವು ದಿನಗಳ ನಂತರ ನನಗೆ ದಿನ ಪತ್ರಿಕೆಯೊಂದರ ಪತ್ರಕರ್ತ ನನಗೆ ನಿಮ್ಮ ಅಸ್ತಿತ್ವದ ಬಗ್ಗೆ ಸಂದೇಹವಿದೆ ಅಂತ ಹೇಳಿದ,ತುಂಬಾ ಆಶ್ಚರ್ಯ ಆಯ್ತು.ಯಾಕೆ ಹಾಗೆ ಅನ್ನಿಸಿತು ಅಂತ ಚಾಟ್ ಮಾಡ್ತಾ ಕೇಳಿದೆ,ಯಾಕೆ ಅಂತ ಅಂದ್ರೆ ನಿಮ್ಮ ಹೆಸರಿನ ಪತ್ರಕರ್ತರು ಇಲ್ಲ ಅಂತ ನಮ್ಮಲ್ಲಿ ಹೇಳಿದರು,ಯಾರು ಈ ಮತ್ತು ಹೇಳಿದರೋ ಆ ಹಿರಿಯ ಪತ್ರಕರ್ತರ ಹೆಸರು ಹೇಳಿದರು ಆತ.ನಗು ಬಂತು ನನಗೆ,ನಾನು ಸುಮ್ಮನಾಗದೆ ಹಾಗಾದರೆ ನಿಮ್ಮ ಪ್ರಕಾರ ನಾನು ಪತ್ರಕರ್ತೆಯಲ್ಲ ಅಲ್ವ ,ಆದ್ರೆ ನನ್ನ ಬಗ್ಗೆ ಹೇಳಿದ ಆ ವ್ಯಕ್ತಿಗೆ ನಾನೆಷ್ಟು ಗೊತ್ತು? ನನ್ನ ಬಗ್ಗೆ ಏನೇನು ಗೊತ್ತು ?ಅಂತ ಕೇಳಿದೆ,ಆದರೆ ಗೆಳೆಯ ಮಾತು ಬೆಳೆಸಲು ಇಚ್ಚಿಸಲಿಲ್ಲ.ಏನೇ ಆಗಿರಲಿ,ಅಸ್ತಿತ್ವ ಅನ್ನೋದು ಅಂದ್ರೇನು? ನನಗೆ ಏನುಹೇಳಲು ಆಗುತ್ತಿಲ್ಲ.Tuesday, June 16, 2009
ನನ್ನ ಅಸ್ತಿತ್ವ
'ಮೂರು ಕಾಸಿಗೂ ಪ್ರಯೋಜನ ಇರಲ್ಲ ಆದರೆ ತಮ್ಮನ್ನು ತಾವು ಉತ್ತಮ ಬರಹಗಾರರು ಅಂತ ತಿಳೀತಾರೆ.ಎರಡಕ್ಷರ ನೆಟ್ಟಗೆ ಬರೀದೆ ಇದ್ದರು ಅಹಂಕಾರಕ್ಕೆನೋ ಕಡಿಮೆ ಇರಲ್ಲ ' ಆತನ ಕೋಪ ಎಲ್ಲೇ ಮೀರಿತ್ತು.ಆ ಕೋಪ ನನ್ನ ಮೇಲೆ ಅಂತ ನನಗೆ ಚನ್ನಾಗಿ ಗೊತ್ತಿತ್ತು.ಮೌನವಾಗಿ ನನ್ನ ಪಾಡಿಗೆ ಕೆಲಸ ಮಾಡುತ್ತಿದ್ದೆ. ನನಗೆ ತುಂಬಾ ದುಃಖ ಆಗ್ತಾ ಇತ್ತು,ಆದರೆ ಮಾತಾಡಲಿಲ್ಲ.ಏನು ಅಸ್ತಿತ್ವ ಇಲ್ಲದೆ ಹೋದರು ಅಹಂಕಾರಕ್ಕೆನೂ ಕಡಿಮೆ ಇಲ್ಲ ಅಂತ ಆತ ಮಾತಿನ ಓಘ ಸಾಗಿತ್ತು.ನಾನು ಕೆಲಸ ಮಾಡುವ ಪತ್ರಿಕೆಗಳ ಒಂದಕ್ಕೆ ಆತ ಸಂಪಾದಕ.ಮಾಡಿದ ಕೆಲಸವನ್ನು ಮಾಡೇ ಇಲ್ಲ್ಲ ಅಂತ ನಿರ್ದಾಕ್ಷಿಣ್ಯವಾಗಿ ಹೇಳಿ ನನ್ನ ಮನಕ್ಕೆ ಬೇಸರ ತರಿಸಿದ್ದರು.ಕೆಲಸದ ವಿಷಯದಲ್ಲಿ ನಾನು ಎಂದಿಗೂ ಹಿಂದೆ ಬಿದ್ದಿಲ್ಲ,ಅದು ನನ್ನ ಸ್ವಭಾವ,ಈತ ಒಟ್ಟಾರೆ ನನ್ನನು ಸೋಮಾರಿ ಅನ್ನುವ ಅರ್ಥದಲ್ಲಿ ಎಲ್ಲರ ಮುಂದೆ ಹೇಳಿದಾಗ ( ನೇರವಾಗಿ ಅಲ್ಲ) ಏನು ಮಾತಾಡುವ ಸ್ಥಿಯಲ್ಲಿ ನಾನು ಇರಲಿಲ್ಲ.ಆತ ಹೇಳಿದಂತೆ ನನಗೆ ಬರೆಯಲು ಬರದೆ ಇರ ಬಹುದು ಆದರೆ ಒಂದು ಪತ್ರಿಕೆ ನನಗೆ ಸುಮ್ಮನೆ ಜವಾಬ್ದಾರಿ ವಹಿಸಿಲ್ಲ ಎಂದು ಹೇಳುವ ಆಸೆ ಆದರು ಸುಮ್ಮನಾದೆ.ಅದಾದ ಕೆಲವು ದಿನಗಳ ನಂತರ ನನಗೆ ದಿನ ಪತ್ರಿಕೆಯೊಂದರ ಪತ್ರಕರ್ತ ನನಗೆ ನಿಮ್ಮ ಅಸ್ತಿತ್ವದ ಬಗ್ಗೆ ಸಂದೇಹವಿದೆ ಅಂತ ಹೇಳಿದ,ತುಂಬಾ ಆಶ್ಚರ್ಯ ಆಯ್ತು.ಯಾಕೆ ಹಾಗೆ ಅನ್ನಿಸಿತು ಅಂತ ಚಾಟ್ ಮಾಡ್ತಾ ಕೇಳಿದೆ,ಯಾಕೆ ಅಂತ ಅಂದ್ರೆ ನಿಮ್ಮ ಹೆಸರಿನ ಪತ್ರಕರ್ತರು ಇಲ್ಲ ಅಂತ ನಮ್ಮಲ್ಲಿ ಹೇಳಿದರು,ಯಾರು ಈ ಮತ್ತು ಹೇಳಿದರೋ ಆ ಹಿರಿಯ ಪತ್ರಕರ್ತರ ಹೆಸರು ಹೇಳಿದರು ಆತ.ನಗು ಬಂತು ನನಗೆ,ನಾನು ಸುಮ್ಮನಾಗದೆ ಹಾಗಾದರೆ ನಿಮ್ಮ ಪ್ರಕಾರ ನಾನು ಪತ್ರಕರ್ತೆಯಲ್ಲ ಅಲ್ವ ,ಆದ್ರೆ ನನ್ನ ಬಗ್ಗೆ ಹೇಳಿದ ಆ ವ್ಯಕ್ತಿಗೆ ನಾನೆಷ್ಟು ಗೊತ್ತು? ನನ್ನ ಬಗ್ಗೆ ಏನೇನು ಗೊತ್ತು ?ಅಂತ ಕೇಳಿದೆ,ಆದರೆ ಗೆಳೆಯ ಮಾತು ಬೆಳೆಸಲು ಇಚ್ಚಿಸಲಿಲ್ಲ.ಏನೇ ಆಗಿರಲಿ,ಅಸ್ತಿತ್ವ ಅನ್ನೋದು ಅಂದ್ರೇನು? ನನಗೆ ಏನುಹೇಳಲು ಆಗುತ್ತಿಲ್ಲ.
Subscribe to:
Post Comments (Atom)
No comments:
Post a Comment