ನನಗೆ ಮೊದಲಿಂದಲೂ ಈ ಬ್ಯಾನರ್ ಗಳನ್ನು ಓದುವ ಅಭ್ಯಾಸ.ಕೆಲವು ಬಾರಿ ನೋಡುತ್ತಾ ಸಮಯ ಕಲಿಯುವ ಚಟ.ಇತ್ತೀಚೆಗೆ ನಗರದಲ್ಲಿ ಹೆಚ್ಚು ವಿಜೃಂಭಿಸಿದ್ದು ಮಾನ್ಯ ಸಿ.ಎಂ.ಯಡಿಯುರಪ್ಪನವರದು..!
ಟ್ವೆಂಟಿ -20 ಮ್ಯಾಚನ್ನು ಕುಮಾರಣ್ಣಆತ ಜ್ವತೆ ಆಡುವಾಗ ಸದಾ ಅವರನ್ನು ಆಹ್ವಾನಿಸುತ್ತಾ ಇದ್ದುದು ಮಾತುಕತೆಗೆ.ಕುಂತ್ಕೊಂಡು ಮಾತಾಡೋಣ ಬನ್ನಿ ಕುಮಾರ್ ಸ್ವಾಮಿ ಅವ್ರೆ ಅಂತ ಕರದದ್ದೇ ಬಂತು,ಅವ್ರು ಕೂರಲಿಲ್ಲ,ಆ ಸರ್ಕಾರ ನಿಲ್ಲಲಿಲ್ಲ.ಆಮೇಲೆ ಯಡಿಯೂರಪ್ಪ ಸಿ.ಎಂ.ಆದಮೇಲೆ ಕೂರೋಕೆ ಹೋಗಲಿಲ್ಲ.ಎಲ್ಲ ಬ್ಯಾನೆರ್ಗಳಲ್ಲು ಅವರು ನಡೆಯುವ ಚಿತ್ರ! ಪ್ರಾಯಶ: ಅವರಿಗೆ ಕುಳಿತು ಕೊಳ್ಳುವ ವಾಸ್ತು ಸರಿಯಾಗಿ ಕೆಲಸ ಮಾಡಲಿಲ್ಲ ಅಂತ ಕಾಣುತ್ತೆ..!ಹಿಂದೆ ಈ ಬ್ಯಾನೆರ್ಗಳು ಹೆಚ್ಚಾಗಿ ರಾಮನ ಬಗ್ಗೆ ಗಮನ ಇತ್ತು ಕೊಂಡಿದ್ದವು.ಅದು ಒಪ್ಪವಾಗಿ ರಾಮ ಭಕ್ತ ಮಂಡಳಿ,ಶ್ರೀ ರಾಮ ಸೇವಾ ಮಂಡಳಿ .. ಹೀಗೆ ಪೋಸ್ಟರ್ ,ಬ್ಯಾನೆರ್ಗಳು ತೃಪ್ತಿ ಯಿಂದ ಇದ್ದವು ..! ಆಮೇಲೆ ನಾನು ಗಮನಿಸಿದಂಗೆ ರಾಮ ಮಿತ್ರ ಮಂಡಳಿ,ಗಣೇಶ ಗೆಳೆಯರ ಬಳಗ,ದ.ರಾ. ಬೇಂದ್ರೆ ಸ್ನೇಹಿತರ ಬಳಗ ...!ಹೀಗೆ ದೇವರು,ಕವಿ,ಲೇಖಕರ ಮಿತ್ರರ ಬಳಗ ಜಗತ್ತಿಗೆ ಕಾಣಿಸಲು ಸುರು ಆಯ್ತು.ಆ ಪದ್ಧತಿ ಈಗಲೂ ಇದೆ..! ಕಳೆದ ಬಾರಿ ನಡೆದ ಚುನಾವಣೆಗೂ ಮುನ್ನ ಅನೇಕ ರಾಜಕೀಯ ಪಕ್ಷಗಳ ನಾಯಕರು ದಿಗ್ಗನೆದ್ದು! ತಮ್ಮ ವದನಾರವಿಂದದ ಪೋಸ್ಟರ್ ಹಾಗು ಬ್ಯಾನ್ಎಲ್ಲ ಕಡೆ ಅಂಟಿಸಿ,ಇವರು ಎನ್ನುವುದನ್ನು ವರ್ಲ್ಡ್ ಫೇಮಸ್ ಮಾಡಿದ ರಮ್ಯಚೈತ್ರ ಕಾಲ. ನನ್ನ ಮನೆಯ ಬಳಿ ಓರ್ವ ರಾಜಕೀಯ ಮರಿ ನಾಯಕ ಚುನಾವಣೆಗೆ ವರ್ಷ ಇದೆ ಅಂತ ಅನ್ನುವಾಗ ತನ್ನ ಮುಚಿತ್ರದ ಪೋಸ್ಟರ್ ಎಲ್ಲಾ ಕಡೆ ಹಾಕೋಕೆ ಆರಂಭಿಸಿದ.ಭೀಮನ ಅಮಾವಾಸ್ಯೆಯಲ್ಲಿ ಶಿವನ ಪೂಜೆ ಮಾಡಿದಂತೆ,ಗಣೇಶನ ಹಬ್ಬದಲ್ಲಿ ಗಣೇಶ ಪೂಜೆ,ರಂಜಾನ್ ಕಾಲದಲ್ಲಿ ಆ ವೇಷ,ಕ್ರಿಸ್ಮಸ್ಗೆ ಸಂತ ಕ್ಲಾಸ್ ,ಇನ್ಯಾವುದೋ ಮಲೆಯಾಳಂ ಹಬ್ಬ ಅದಕ್ಕೆ ಹೊಂದುವ ಉಡುಪು,ಒಟ್ಟಿನಲ್ಲಿ ನಮಗೆ ಗೊತ್ತಿರುವ,ಗೊತ್ತಿಲ್ಲದ ಹಬ್ಬಗಳು ಆ ಮಹಾನುಭಾವನಿಂದ ಗೊತ್ತಾಯಿತು!ಇಷ್ಟೆಲ್ಲಾ ಆದರು ಭಗವಂತ ಕರುಣಾಮಯಿ ಅಂತ ಅನ್ನಿಸಿತು,ಯಾಕೆ ಗೊತ್ತೇ? ಸಧ್ಯ ಆ ಸಮಯದಲ್ಲಿ ಗೊಮ್ಮಟನಿಗೆ ಮಹಾ ಮಸ್ತಕಾಭಿಷೇಕ ಇರಲಿಲ್ಲ..ಇಲ್ಲದೆ ಇದ್ದಿದ್ದರೆ....!!!