
ಕುಂಕುಮದ ವಿಷಯಕ್ಕೆ ಬರೋದಾದರೆ ಕೆಂಪು ಕೋಪ, ಉದ್ರೇಕದ ಹಾಗೂ ಪ್ರೀತಿಯ ಸಂಕೇತ.ಸಾಮಾನ್ಯವಾಗಿ ಆಹಾರದ ತಯಾರಿಕೆಯಲ್ಲಿ ಕೆಂಪನ್ನೇ ಬಳಸೋದು,ಅಂದ್ರೆ ಅದು ಹಸಿವೆಯನ್ನು ಹೆಚ್ಚಿಸುತ್ತದೆ. ಮನುಷ್ಯ ಇನ್ನು ನಾಗರೀಕನಾಗಿ ಇರಲಿಲ್ಲ.ಆಗ ಆತ ಬೇಟೆಯನ್ನು ಆಡುತ್ತಾ ಇದ್ದ.ಅವನಿಗೆ ಪ್ರತಿಬಾರಿಯೂ ಬೇಟೆ ಆಡಲು ಕೋಪ ಹಾಗೂ ಉದ್ರೇಕದ ಅವಶ್ಯಕತೆ ಇತ್ತು.ಆತ ಆಗ ಏನು ಮಾಡಿದ ಗೊತ್ತ? ತಾನು ಕೊಂದ ಪ್ರಾಣಿಗಳ ರಕ್ತವನ್ನು ಸಮೀಪದ ಬಂಡೆಗೆ ಲೇಪಿಸುತ್ತಾ ಇದ್ದ.ಅದನ್ನು ಪ್ರತಿದಿನ ನೋಡಿ ರೋಷ ಉಕ್ಕಿಸಿಕೊಂಡು ಬೇಟೆಗೆ ಹೋಗುತ್ತಾ ಇದ್ದನಂತೆ.ಆದರೆ ಮಳೆ ,ಇನ್ನು ಹಲವಾರು ಕಾರಣದಿಂದ ಆ ರಕ್ತ ಬಂಡೆಯಿಂದ ಅಳಸಿಹೊಗಿರುತ್ತಿತ್ತು.ಆದರೆ ಆ ವ್ಯಕ್ತಿ ಪಾಪ!ಕೆಂಪು ನೋಡದೆ ಇರಲಾರ ಪರಿಣಾಮ ತನ್ನ ಸಂಗಾತಿ ಹಣೆಯ ಮೇಲೆ ಕೆಂಪು ಬಣ್ಣದ ಬೊಟ್ಟು(ರಕ್ತ ಆಗಿರ ಬಹುದು ,ಇಲ್ಲವೇ ಗಿಡದ ರಸ ಆಗಿರ ಬಹುದು) ಇಡುವ ಸಂಸ್ಕೃತಿ ಆರಂಭಿಸಿದ.ಹೀಗೆ ಆಚರಣೆಗೆ ಬಂದ ಬೊಟ್ಟು ಇಡುವ ಸಂಸ್ಕೃತಿ ಕೆಲವು ಕಡೆ ಜನಪ್ರಿಯ ಆಯಿತು.ಅಂದ್ರೆ ಕೆಂಪು ಪ್ರೀತಿ,ಉತ್ತೇಜನ ,ರೋಷ-ದ್ವೇಷದ ಸಂಕೇತ ಆಯಿತಲ್ಲ.ಸಾಮಾನ್ಯವಾಗಿ ಕುಂಕುಮದ ಮೂಲಕ ದುಷ್ಟ ಶಕ್ತಿಗಳನ್ನು ಓಡಿಸುವ ಪರಿಪಾಟ ಇದೆ.ಯಾಕೇಂತ ಅಂದ್ರೆ ಅದರಿಂದ ದೇವರಿಗೆ ಪೂಜೆ ಮಾಡಿರುತ್ತದೆ.ಈ ಸಿನೆಮಾದಲ್ಲಿ ದೆವ್ವಕ್ಕೆ ಕುಂಕುಮ ಇಟ್ಟಿರೋದು ಕಂಡು ನನಗೆ ಗಾಬರಿ.ಆ ಮೇಲೆ ಅನ್ನಿಸಿದ್ದು ತೆಲುಗು ಸಿನಿಮಾವನ್ನು ವೀಕ್ಷಿಸಿ ಮಜಾ ತಗೋ ಬೇಕೇ ವಿನಃ ಅದರಲ್ಲಿರುವ ವಿಷಯದ ಬಗ್ಗೆ ಯೋಚಿಸ ಬಾರದು ಅಂತ.ಬಹಳ ಹಿಂದೆ ಓದಿದ್ದೆ ,ಆಫ್ರಿಕದವರಿಗೆ ಭಾರತದ ಸಿನಿಮಾಗಳೆಂದರೆ ತುಂಬಾ ಇಷ್ಟ ಅಂತೆ.ಯಾಕೆ ಅಂತ ಅಂದ್ರೆ ಅದರಲ್ಲಿ ಬರುವ ಹಿರೋಯಿನ್ ನಾಚಿ - ಹೆದರಿ ಓಡುವುದು ,ನಾಚಿಕೆ ಪಡುತ್ತ ಹೀರೋನ್ನ ನೋಡೋದು.....! ಇನ್ನು ಹಲವಾರು ಅಂಶ ಅವರಿಗೆ ಸಕತ್ ಖುಷಿ ಕೊಡುತ್ತಂತೆ.ಈ ಸಿನಿಮಾ ನೋಡುವಾಗ ನನಗೆ ಆ ವಿಷಯ ಜ್ಞಾಪಕಕ್ಕೆ ಬಂತು.